ವೀರಪ್ಪನ್‌ಗೆ ಫೇರ್‌ ಆ್ಯಂಡ್‌ ಲವ್‌ಲೀ ಶೃಂಗಾರ ?

ಬೆಂಗಳೂರು : ಕಾಡುಗಳ್ಳ ವೀರಪ್ಪನ್‌ ಕಾಡಿನಲ್ಲಿ ಐಷಾರಾಮಿ ಜೀವನ ಸಾಗಿಸುತ್ತಿದ್ದಾನೆಯೇ ? ನಾಗಪ್ಪನವರ ಶವ ದೊರಕಿದ ಚೆಂಗಡಿ ಅರಣ್ಯ ಪ್ರದೇಶದಲ್ಲಿ ಎಸ್‌ಟಿಎಫ್‌ ಪೊಲೀಸರಿಗೆ ದೊರೆತಿರುವ ಕೆಲವು ವಸ್ತುಗಳು ಈ ಅನುಮಾನ ಮೂಡಿಸಿವೆ.

ದೊರೆತಿರುವ ವಸ್ತುಗಳಾದರೂ ಎಂಥವು ನೋಡಿ : ಬಾಸುಮತಿ ಅಕ್ಕಿ, ಮೈಸೂರು ಸ್ಯಾಂಡಲ್‌ ಸೋಪು, ಫೇರ್‌ ಆ್ಯಂಡ್‌ ಲವ್‌ಲೀ, ಅಡುಗೆಗೆ ಎಂಟಿಆರ್‌ ಮಸಾಲೆ, ಕುಡಿಯಲು ಅಮೂಲ್ಯ ಹಾಲಿನ ಪುಡಿ, ಬ್ರಿಟಾನಿಯಾ ಬಿಸ್ಕೆಟ್‌, ಬಾದಾಮಿ, ದ್ರಾಕ್ಷಿ, ಸೇಬು, ಖಾರ ತಿನಿಸುಗಳು- ಇದೆಲ್ಲವು ಇದ್ದ ಮೇಲೆ ಬದುಕು ಐಷಾರಾಮಿ ಅಲ್ಲದೆ ಏನು ? ನಮ್ಮ ಗ್ರಾಮೀಣರು ಇವುಗಳನ್ನು ಬಳಸಲು ಸಾಧ್ಯವೆ?

ಇವಿಷ್ಟೇ ಅಲ್ಲ - ವೀರಪ್ಪನ್‌ ಬಳಸುತ್ತಿದ್ದ ಎನ್ನಲಾದ ಅಕ್ವಾ ಟೂತ್‌ಬ್ರಷ್‌, ಪೇಸ್ಟ್‌, ಹೇರ್‌ ಡೈ, ರಿನ್‌ ಪೌಡರ್‌ , ಸೊಳ್ಳೇ ಓಡಿಸುವ ಒಡೋಮಸ್‌ ಕಾಯಿಲ್‌, ಕೊಬ್ಬರಿ ಎಣ್ಣೆ, ಮೈಗೆ ಸವರಿಕೊಳ್ಳುವ ಕ್ರೀಮ್‌ಗಳು, ಕ್ಷೌರ ಮಾಡಿಕೊಳ್ಳಲು ಬೇಕಾದ ಸಾಮಗ್ರಿಗಳು, ಊಟದ ತಟ್ಟೆ, ಲೋಟಗಳು, ಮಲ್ನಾಡ್‌ ಹೆಸರಿನ ತುಪ್ಪದ ಡಬ್ಬಗಳು, ಬ್ರೂ ಕಾಫಿ ಪುಡಿ , ಬನಿಯನ್‌ಗಳು, ಅಂಡರ್‌ವೇರ್‌ಗಳು, ಮಂಕಿ ಕ್ಯಾಪ್‌ಗಳು ಹಾಗೂ ವಿವಿಧ ಮಾತ್ರೆಗಳು ಕಾಡಿನಲ್ಲಿ ದೊರೆತಿವೆ.

ಹೆಚ್ಚು ಬೆಳಕು ಚೆಲ್ಲುವ ಬ್ಯಾಟರಿಗಳು, ಶೆಲ್‌ಗಳು, ಫೋಟೋ ಕ್ಯಾಮರಾ ಕೂಡ ಕಾಡಿನಲ್ಲಿ ದೊರೆತಿವೆ. ಇದೆಲ್ಲ ದೊರೆಯುವಾಗ ಕಾಡಾದರೇನು ನಾಡಾದರೇನು ?

(ಇನ್ಫೋ ವಾರ್ತೆ)

ಮುಖಪುಟ / ವೀರಪ್ಪನ್‌ ಶಿಕಾರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+