ವರ್ಷದೊಳಗೆ ಹತ್ತು ಹೊಸ ತಾಲ್ಲೂಕು ರಚನೆ
ಬೆಂಗಳೂರು: ಹನೂರು ಸೇರಿದಂತೆ ರಾಜ್ಯದಲ್ಲಿ ಹತ್ತು ಹೊಸ ತಾಲ್ಲೂಕುಗಳನ್ನು ರಚಿಸಲು ರಾಜ್ಯ ಸರಕಾರ ನಿರ್ಧರಿಸಿದೆ.
ಬಾಗಲಕೋಟೆಯ ಗುಳೇದ ಗುಡ್ಡ, ಉಡುಪಿಯ ಮೂಡಬಿದಿರೆ, ಹಾಗೂ ಚಾಮರಾಜ ನಗರದ ಹನೂರು ಪ್ರದೇಶಗಳಿಗೆ ತಾಲ್ಲೂಕಿನ ಸ್ಥಾನ ಮಾನ ನೀಡಲು ಸರಕಾರ ಈಗಾಗಲೇ ವಿಶೇಷ ತಹಶೀಲ್ದಾರರನ್ನೂ ಸರಕಾರ ನೇಮಕ ಮಾಡಿದೆ ಎಂದು ಕಂದಾಯ ಸಚಿವ ಎಚ್. ಸಿ. ಶ್ರೀಕಂಠಯ್ಯ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಉಳಿದಂತೆ ಇನ್ನು ಏಳು ತಾಲ್ಲೂಕುಗಳ ರಚನೆಯ ಪ್ರಸ್ತಾಪ ಸರಕಾರದ ಮುಂದಿದೆ. ಕೋಲಾರ ಜಿಲ್ಲೆಯ ಕೆಜಿಎಫ್‌ಗೂ ತಹ ಶೀಲ್ದಾರರ ನೇಮಕಾತಿ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಇನ್ನಾರು ತಾಲ್ಲೂಕು ರಚನೆಗಳ ಪ್ರಕ್ರಿಯೆ ಈ ವರ್ಷದಲ್ಲೇ ನಡೆಯಲಿದೆ ಎಂದು ಸಚಿವರು ಹೇಳಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications