ಮಂಗಳೂರು ವಿವಿಗೆ ನಾರ್ವೆ ವಿದ್ಯಾರ್ಥಿಗಳ ಭೇಟಿ
*ಸದಾಶಿವ ಕೆ.
ಕೋಣಾಜೆ: ಮಂಗಳೂರು ವಿಶ್ವ ವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ‘ವಿದ್ಯಾರ್ಥಿ ವಿನಿಮಯ ಯೋಜನೆ’ಯಡಿಯಲ್ಲಿ ನಾರ್ವೆಯ ಓಲ್ಡಾ ವಿವಿಯ ವಿದ್ಯಾರ್ಥಿಗಳು ಮುಂದಿನ ತಿಂಗಳು (2003 ರ ಜನವರಿ) ಮಂಗಳ ಗಂಗೋತ್ರಿಗೆ ಭೇಟಿ ನೀಡಲಿದ್ದಾರೆ.
ತಮ್ಮ 23 ದಿನಗಳ ಭೇಟಿಯ ಅವಧಿಯಲ್ಲಿ ಅವರು ದಕ್ಷಿಣ ಕನ್ನಡದ ಚಾರಿತ್ರಿಕ ಅಂಶಗಳು ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಅಧ್ಯಯನ ಮಾಡಲಿದ್ದಾರೆ. ಪ್ರಸ್ತುತ ಮಾಧ್ಯಮ ಕ್ಷೇತ್ರದಲ್ಲಿ ಆಗುತ್ತಿರುವ ಕ್ರಾಂತಿಗಳ ಬಗ್ಗೆ ಅತಿಥಿ ಹಾಗೂ ಆತಿಥೇಯ ವಿದ್ಯಾರ್ಥಿಗಳು ಚರ್ಚೆ ನಡೆಸುವರು ಎಂದು ವಿವಿಯ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಕೆ. ವಿ. ನಾಗರಾಜ್ ತಿಳಿಸಿದ್ದಾರೆ. ಮುಂದಿನ ವರ್ಷ ಮಂಗಳೂರು ವಿವಿಯ ಪತ್ರಿಕೋದ್ಯಮ ವಿದ್ಯಾರ್ಥಿಗಳು ನಾರ್ವೆಯ ಓಲ್ಡಾ ವಿವಿಗೆ ಭೇಟಿ ನೀಡುವರು.
ಪರಿಸರ ಅಧ್ಯಯನ ಕಾರ್ಯಾಗಾರ
ವಿಭಾಗವು ಡಿಸೆಂಬರ್ 19ರಿಂದ ಎರಡು ದಿನಗಳ ಪರಿಸರ ಅಧ್ಯಯನ ಕುರಿತ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ. ಮಂಗಳೂರು ಪರಿಸರವಾದಿಗಳ ಸಂಘದ ಅಧ್ಯಕ್ಷ ಉಪೇಂದ್ರ ಹೊಸಬೆಟ್ಟು ಕರಾವಳಿ ಕರ್ನಾಟಕದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಬೆಂಗಳೂರಿನ ಲಿಯೋ ಸಲ್ಡಾನಾ, ವಿವೇಕಾನಂದ, ಭಾರತೀಯ ವಿವಿಯ ಕಾನೂನು ಕಾಲೇಜಿನ ಶ್ರೀರಾಮ್ ಭಟ್, ಎನ್‌ಜಿಓಗಳು, ದೂರದರ್ಶನದ ಕೆ. ಎಸ್. ಅಚ್ಯುತನ್, ಮತ್ತಿತರ ಪರಿಸರವಾದಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸವರು.
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications