ಕೊಳತ್ತೂರು ಕಾಡಿನಲ್ಲಿ ದೊರೆತ ಶವ ಯಾರದು ?

ಬೆಂಗಳೂರು: ಮಾಜಿ ಸಚಿವ ನಾಗಪ್ಪನವರ ಹತ್ಯೆಯ ಕುರಿತು ಊಹಾಪೋಹಗಳು ಕೇಳಿ ಬರುತ್ತಿರುವ ಬೆನ್ನಿನಲ್ಲೇ ಕೊಳತ್ತೂರು ಸಮೀಪದ ಅರಣ್ಯದಲ್ಲಿ ತಮಿಳುನಾಡು ಪೊಲೀಸರಿಗೆ ಶವವೊಂದು ದೊರೆತಿದೆ.

ಚೆಂಗಡಿ ಅರಣ್ಯ ಪ್ರದೇಶದಲ್ಲಿ ಶವವೊಂದು ಪತ್ತೆಯಾಗಿದೆ ಎನ್ನುವ ವದಂತಿಗಳ ಹಿನ್ನೆಲೆಯಲ್ಲಿ ಕರ್ನಾಟಕ ವಿಶೇಷ ಕಾರ್ಯಪಡೆ ಪೊಲೀಸರು ಮಂಗಳವಾರ ವ್ಯಾಪಕ ಕಾರ್ಯಾಚರಣೆ ನಡೆಸಿದ್ದರು. ಆದರೆ, ಶವ ಸಿಕ್ಕಿದ್ದು ತಮಿಳುನಾಡಿನ ಪೊಲೀಸರಿಗೆ. ಕಾಡಿನಲ್ಲಿ ಹೆಜ್ಜೆ ಹಾಕುತ್ತಿದ್ದ ಪೊಲೀಸರಿಗೆ ಮಂಗಳವಾರ ರಾತ್ರಿ ಕೊಳತ್ತೂರು ಸಮೀಪದ ಕಾಡಿನಲ್ಲಿ ಶವ ದೊರೆತಿದೆ.

ಕಾಡಿನಲ್ಲಿ ದೊರೆತ ಶವ ಪೊಲೀಸ್‌ ಇಲಾಖೆಗೆ ಸೇರಿದ ವ್ಯಕ್ತಿಯದಲ್ಲ ಹಾಗೂ ಈ ಶವಕ್ಕೂ ನಾಗಪ್ಪನವರ ಸಾವಿಗೂ ಯಾವುದೇ ಸಂಬಂಧವಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಶವದ ಬಳಿ ಕೆಲವು ಪಾತ್ರೆಗಳು ದೊರೆತಿದ್ದು, ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.

ಈ ನಡುವೆ ವೀರಪ್ಪನ್‌ ಶಿಕಾರಿ ಕಾರ್ಯಾಚರಣೆ ಭರದಿಂದ ಸಾಗಿದ್ದು, 2000 ಕ್ಕೂ ಹೆಚ್ಚು ಪೊಲೀಸರು ಕಾಡಿನ ರಹಸ್ಯ ಶೋಧಿಸುತ್ತಿದ್ದಾರೆ.

(ಏಜೆನ್ಸೀಸ್‌)

ಮುಖಪುಟ / ವೀರಪ್ಪನ್‌ ಶಿಕಾರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+