ಪರಿಮಳಾ ನಾಗಪ್ಪ ತವರಿನಲ್ಲಿ ವ್ಯಾಪಕ ಪ್ರತಿಭಟನೆ

ಯಸಳೂರು: ಮಾಜಿ ಸಚಿವ ನಾಗಪ್ಪ ಅವರ ಪತ್ನಿ ಪರಿಮಳ ಅವರ ಹುಟ್ಟೂರಾದ ಹುಳಗಳಲೆ ಹಾಗೂ ಸಕಲೇಶಪುರದಲ್ಲಿ , ನಾಗಪ್ಪ ಪ್ರಕರಣದಲ್ಲಿ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಸಕಲೇಶಪುರದ ವೀರಶೈವ ಮಂಡಲಿ ಅಧ್ಯಕ್ಷ ಕೆ. ಸಿ. ತಿರುಮಲ್ಲಪ್ಪ ಅವರ ನೇತೃತ್ವದಲ್ಲಿ ಗ್ರಾಮದಲ್ಲಿ ಇರುವ ನಂದಿ ಬಸವೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಮೌನ ಪ್ರತಿಭಟನೆ ನಡೆಯಿತು. ಸುಮಾರು 400 ಮಂದಿ ಗ್ರಾಮಸ್ಥರು ಎರಡು ಗಂಟೆಗಳ ಕಾಲ ಮೌನ ಮೆರವಣಿಗೆ ನಡೆಸಿ ಪ್ರತಿಭಟನೆ ಸೂಚಿಸಿದರು.

ಕೆಂಚಮ್ಮನ ಕೋಟೆ, ಯಸಳೂರು, ಚಂಗಡಿ ಹಳ್ಳಿ, ಶನಿವಾರ ಸಂತೆ ರಸ್ತೆಯಲ್ಲಿ ರಸ್ತೆ ತಡೆ ನಡೆಸಿದ ಪರಿಣಾಮವಾಗಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಸಕಲೇಶಪುರದಲ್ಲಿ ಸೋಮವಾರದಂದು ಪರಿಸ್ಥಿತಿ ಕೈಮೀರದಂತೆ ನೋಡಿಕೊಳ್ಳಲು ಬಿಗಿ ಪೊಲೀಸ್‌ ಬಂದೋಬಸ್ತು ಏರ್ಪಡಿಸಲಾಗಿತ್ತು.

ಪ್ರಸ್ತುತ ಪರಿಮಳ ನಾಗಪ್ಪ ಅವರ ತವರು ಮನೆಯವರು ಕೊಡಗಿನ ಕೂಡ್ಲಿಪೇಟೆ ಸಮೀಪದ ಕ್ಯಾತೆಯಲ್ಲಿ ವಾಸವಾಗಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವೀರಪ್ಪನ್‌ ಶಿಕಾರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+