ಮತಾಂತರ ನಿಷೇಧ ಕಾಯ್ದೆಗೆ ಚಿಮೂ ಬೆಂಬಲ
ಬೆಂಗಳೂರು: ಮತಾಂತರ ನಿಷೇಧ ಕಾಯ್ದೆಯ ಅಗತ್ಯವನ್ನು ಪ್ರಸಿದ್ಧ ಸಂಶೋಧಕ ಡಾ. ಎಂ. ಚಿದಾನಂದ ಮೂರ್ತಿ ಬೆಂಬಲಿಸಿದ್ದಾರೆ.
ಮತಾಂತರ ನಿಷೇಧ ಕಾನೂನನ್ನು ಎಲ್ಲ ಸರಕಾರಗಳೂ ಜಾರಿಗೊಳಿಸಬೇಕು. ಧರ್ಮ ಬೇಧವಿಲ್ಲದೆ ಎಲ್ಲರೂ ಆ ಕಾನೂನನ್ನು ಗೌರವಿಸಬೇಕು ಎಂದು ಚಿದಾನಂದ ಮೂರ್ತಿ ಸಲಹೆ ಮಾಡಿದ್ದಾರೆ. ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಮತಾಂತರದ ವಿರುದ್ಧ ಎಲ್ಲ ಧಾರ್ಮಿಕ ಮುಖಂಡರು ಹಾಗೂ ಧರ್ಮ ಗುರುಗಳು ಜನರಲ್ಲಿ ಜಾಗೃತಿ ಮೂಡಿಸಬೇಕು. ಬುದ್ಧಿಜೀವಿಗಳು ಹಾಗೂ ಸಾಮಾಜಿಕ ನಾಯಕರು ಮತಾಂತರದಿಂದ ಆಗುತ್ತಿರುವ ಘರ್ಷಣೆಗಳ ಬಗ್ಗೆ ತಿಳಿದುಕೊಳ್ಳಬೇಕು. ಈ ಸಮಸ್ಯೆ ಭಾರತದಲ್ಲಷ್ಟೇ ಅಲ್ಲ, ವಿಶ್ವಾದ್ಯಂತ ಘರ್ಷಣೆಯನ್ನು ತಂದೊಡ್ಡುತ್ತಿದೆ ಎಂದು ಮೂರ್ತಿಗಳು ತಮ್ಮ ಆತಂಕ ವ್ಯಕ್ತ ಪಡಿಸಿದರು.
ಸಕಲೇಶಪುರದಲ್ಲಿ ಹಣದ ಆಸೆ ತೋರಿಸಿ ಹಲವಾರು ವೀರಶೈವರನ್ನು ಕ್ರೆೃಸ್ತ ಧರ್ಮಕ್ಕೆ ಮತಾಂತರಿಸಲಾಗಿದೆ ಎಂದು ಆರೋಪಿಸಿದ ಚಿದಾನಂದ ಮೂರ್ತಿ ಸಾಮಾಜಿಕ ನಾಯಕರು ಮತಾಂತರದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವಂತೆ ಕರೆ ನೀಡಿದರು.
ಮತಾಂತರ ನಿಷೇಧ ಕಾಯ್ದೆಗೆ ಸಾಹಿತಿಗಳಾದ ಎಚ್. ಎಂ. ಮರುಳ ಸಿದ್ಧಯ್ಯ, ನೀಲತ್ತಹಳ್ಳಿ ಕಸ್ತೂರಿ, ಎಚ್. ಎಸ್. ಪಾರ್ವತಿ, ತ.ರಂ. ಕೃಷ್ಣ ಗೌಡ ಹಾಗೂ ಹೊ. ಶ್ರೀನಿವಾಸಯ್ಯ ಬೆಂಬಲ ನೀಡಿರುವುದಾಗಿ ಚಿದಾನಂದ ಮೂರ್ತಿ ಈ ಸಂದರ್ಭದಲ್ಲಿ ಹೇಳಿದರು.
(ಇನ್ಫೋ ವಾರ್ತೆ)
ಪೂರಕ ಓದಿಗೆ-
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications