ಕೊಳಕು ಬೂಟಿನ ಹರಭಜನ್‌ -ಶೆಹ್ವಾಗ್‌ಗೆ ದಂಡ

ಆಕ್ಲೆಂಡ್‌ : ಕೊಳಕು ಅಘೋಷಿತ ಬೂಟುಗಳನ್ನು ಹೊಂದಿದ್ದ ಕಾರಣಕ್ಕಾಗಿ ಭಾರತೀಯ ಕ್ರಿಕೆಟ್‌ ತಂಡದ ಇಬ್ಬರು ಆಟಗಾರರಿಗೆ, ನ್ಯೂಜಿಲೆಂಡ್‌ನ ವ್ಯವಸಾಯ ಮಂತ್ರಾಲಯವು ದಂಡ ವಿಧಿಸಿರುವುದನು ತಂಡದ ನಿರ್ವಾಹಕರು ಖಚಿತಪಡಿಸಿದ್ದಾರೆ.

ಸೋಮವಾರ (ಡಿ.02) ಬಂದಿಳಿದ ಭಾರತೀಯ ತಂಡದ ಆಫ್‌ ಸ್ಪಿನ್ನರ್‌ ಹರಭಜನ್‌ ಸಿಂಗ್‌ ಹಾಗೂ ವಿರೇಂದ್ರ ಶೆಹ್ವಾಗ್‌, ತಮ್ಮ ಕೊಳಕು ಅಘೋಷಿತ ಬೂಟುಗಳ ಕಾರಣ 200 ನ್ಯೂಜಿಲೆಂಡ್‌ ( 100 ಅಮೇರಿಕ ) ಡಾಲರ್‌ಗಳ ದಂಡ ತೆತ್ತಿದ್ದಾರೆಂದು ತಿಳಿದುಬಂದಿದೆ.

ಜಗತ್ತಿನ ಪ್ರಮುಖ ಬೇಸಾಯ ರಫ್ತು ದಾರರಲ್ಲಿ ಒಂದಾದ ನ್ಯೂಜಿಲೆಂಡ್‌, ಯುರೋಪಿನಿಂದ ಬರುವ ಅನೇಕ ಪಶು ರೋಗಗಳನ್ನು ತಡೆಯುವುದಕ್ಕಾಗಿ ಹಾಗೂ ಜೈವಿಕ ರಕ್ಷಣೆಯ ಬಗ್ಗೆ ತುಂಬಾ ಸಂವೇದನಾಶೀಲವಾಗಿದ್ದು ಅದಕ್ಕಾಗಿ ತುಂಬಾ ಕಠಿಣವಾದ ಕಾನೂನನ್ನು ಹೊಂದಿದೆ.

ಜೈವಿಕ ಸಮತೋಲನಕ್ಕೆ ಧಕ್ಕೆಯುಂಟು ಮಾಡುವ ಕೀಟಗಳಿಂದ ಬಿಡುಗಡೆಗೋಸ್ಕರ ದಿನ ಬೆಳಿಗ್ಗೆ ಕೀಟನಾಶಕ ಸಿಂಪಡಿಸಲಾಗುತ್ತಿದ್ದು ,ಇತ್ತೀಚಿಗೆ ಬಿದಿರು ವ್ಯಾಪಾರಕ್ಕೆ ಧಕ್ಕೆ ಉಂಟಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಹರಭಜನ್‌ ಸಿಂಗ್‌ ಹಾಗೂ ಶೆಹ್ವಾಗ್‌ ನ್ಯಾಯಾಲಯದ ಮೊರೆ ಹೋಗಿ ಅಲ್ಲಿ ತಪ್ಪಿತಸ್ಥರೆಂದು ತೀರ್ಮಾನವಾದರೆ 2 ಲಕ್ಷ ನ್ಯೂಜಿಲೆಂಡ್‌ ಡಾಲರ್‌ಗಳ ದಂಡ ತೆರಬೇಕಾದ ಪರಿಸ್ಥಿತಿ ಉಂಟಾಗುತ್ತಿತ್ತು. ಆದ್ದರಿಂದ ಸ್ಥಳದಲ್ಲೇ ದಂಡ ತೆತ್ತರು. ನಂತರ ಇವರಿಬ್ಬರ ಹಣದಲ್ಲೇ ಬೂಟುಗಳನ್ನು ಶುಚಿಗೊಳಿಸಿ ಕೊಡಲಾಯಿತೆಂದು ವರದಿಯಲ್ಲಿ ತಿಳಿಸಲಾಗಿದೆ.

ವಾರಾಂತ್ಯದಲ್ಲಿ ಪ್ರಾರಂಭವಾಗುವ ಸರಣಿಯಲ್ಲಿ ಇವರಿಬ್ಬರ ಪಾತ್ರ ತುಂಬಾ ಮಹತ್ವದ್ದಾಗಿದೆ ಎಂದೂ ಹೇಳಲಾಗಿದೆ.

ಈ ಪ್ರಕರಣದಿಂದ ಆಟಗಾರರ ಮನಸ್ಸಿ ನ ಮೇಲೆ ಯಾವುದೇ ದುಷ್ಪರಿಣಾಮ ಬೀರಿಲ್ಲ . ಈ ಥರದ ಘಟನೆಗಳು ಹೊರದೇಶದಲ್ಲಿ ಘಟಿಸುತ್ತಿರುತ್ತವೆ ಎಂದು ತಂಡದ ಮ್ಯಾನೇಜರ್‌ ಎನ್‌.ಆರ್‌.ಚೌಧರಿ ತಿಳಿಸಿದ್ದಾರೆ.

ಎಚ್ಚರಿಕೆ ಹೊರತಾಗಿಯೂ ಈ ಥರದ ಘಟನೆಗಳು ಜರುಗುತ್ತಿರುತ್ತವೆ. ಅದಕ್ಕಾಗಿ ವಿಮಾನದಲ್ಲಿ ಇದರ ಬಗ್ಗೆ ಮೊದಲೇ ತಿಳಿಹೇಳಬೇಕು. ನಿಲ್ದಾಣದಲ್ಲಿ ಇದರ ಕುರಿತು ಪದೇ ಪದೇ ಮಾಹಿತಿ ಒದಗಿಸಬೇಕು ಮತ್ತು ಅವಶ್ಯವಿದ್ದಲ್ಲಿ ಶ್ವಾನದಳವನ್ನು ಈ ಕೆಲಸಕ್ಕಾಗಿ ಬಳಸಬಹುದು ಎಂದು ಚೌಧರಿ ಅಭಿಪ್ರಾಯಪಟ್ಟರು.

ಸಿಂಗ್‌ ಹಾಗೂ ಸೆಹವಾಗ್‌ ಈ ರೀತಿ ದಂಡ ತೆತ್ತ ಮೊದಲ ಕ್ರೀಡಾಳುಗಳಲ್ಲ. ವರ್ಷಾರಂಭದಲ್ಲಿ ಬಂದ ಆಸ್ಟ್ರೇಲಿಯಾದ ರಗ್ಬಿ ತಂಡ ಕೂಡ ಈ ರೀತಿ ದಂಡ ತೆತ್ತಿದ್ದನ್ನು ಇಲ್ಲಿ ಸ್ಮರಿಸಬಹುದು.

(ಎ ಎಫ್‌ ಪಿ )

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+