ಊರಿಗೆ ಬಂದು ಮಾರ್ಕೆಟ್‌ಗೆ ಬಂದ ಸಭಾ‘ಪತ್ನಿ’ಯರು

* ಅಮೆಜಾನ್‌

‘ಅಂಕಲ್‌ ಆಫೀಸಲ್ಲಿ , ಆಂಟಿ ಥಿಯೇಟರ್‌ನಲ್ಲಿ ’
ಇಂಥ ಒನ್‌ಲೈನರ್‌ಗಳನ್ನು ಬೆನ್ನಲ್ಲಿ ಹೊತ್ತ ಆಟೋಗಳು ಸತ್ಯ ಸಾಕ್ಷಾತ್ಕಾರದ ಮೊಬೈಲ್‌ ಕನ್ನಡಿಗಳಂತೆ ಆಗಾಗ ಕಾಣಿಸುತ್ತ ಲೇ ಇರುತ್ತವೆ. ಓದಿ ಸುಮ್ಮನಾಗುತ್ತೇವೆ, ತುಟಿಯಲ್ಲಿ ಕಿರುನಗೆ!

 Sadi wo sadi !!ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಧಾನ ಮಂಡಲ ಅಧ್ಯಕ್ಷರ ರಾಷ್ಟ್ರೀಯ ಸಮ್ಮೇಳನ ‘ಅಂಕಲ್‌-ಆಂಟಿ’ ಒನ್‌ಲೈನರ್‌ಗೆ ಹೊಂದಿಕೊಳ್ಳುವಂತಿದೆ. ಭಯೋತ್ಪಾದಕತೆಯ ಅಟ್ಟಹಾಸ, ಚುನಾವಣೆಯ ಪಿಡುಗುಗಳು, ರಾಜಕಾರಣ ಅಪರಾಧೀಕರಣ, ಮುಂತಾದ ವಿಷಯಗಳ ಕುರಿತು ಸಭಾಪತಿಗಳು ತಲೆ ಕೆರೆದುಕೊಂಡು ಗಂಭೀರವಾಗಿ ಚರ್ಚಿಸುತ್ತಿದ್ದರೆ, ಪತ್ನಿಯರ ಲೋಕವೇ ಬೇರೆ!

ನೆರಳಂತೆ ತಮ್ಮ ಪತಿದೇವರುಗಳನ್ನು ಅನುಸರಿಸಿಕೊಂಡು ಬೆಂಗಳೂರಿಗೆ ಬಂದಿರುವ ಸಭಾಪತಿಗಳ ಪತ್ನಿಯರಿಗೆ ಬೆಂಗಳೂರು ಪ್ರವಾಸ ಪಿಕ್ನಿಕ್ಕಾಗಿ ಪರಿಣಮಿಸಿದೆ. ಬೇರೆ ರಾಜ್ಯಗಳಿಂದ ಬಂದ ಪತಿ-ಪತ್ನಿಯರ ವಿಷಯ ಬಿಡಿ ; ಕರ್ನಾಟಕ ವಿಧಾನಸಭಾಧ್ಯಕ್ಷ ಎಂ.ವಿ.ವೆಂಕಟಪ್ಪನವರ ಪತ್ನಿ ಸುಭದ್ರಮ್ಮ ಕೂಡ ಪಿಕ್ನಿಕ್‌ ಸಂಭ್ರಮ ಅನುಭವಿಸುತ್ತಿದ್ದಾರೆ. ನಗರಕ್ಕೆ ಪಿಕ್ನಿಕ್‌ ಖುಷಿಯಲ್ಲಿ ಆಗಮಿಸಿರುವ ಸುಮಾರು 27 ಮಂದಿ ವಿಐಪಿ ಹೆಣ್ಣುಮಕ್ಕಳಿಗೆ ಅನಧಿಕೃತ ನಾಯಕತ್ವ ಸುಭದ್ರಮ್ಮ ಅವರದೇ.

ಲೋಕಸಭಾಧ್ಯಕ್ಷ ಮನೋಹರ್‌ ಜೋಷಿ ಅವರು ರಾಜಕಾರಣ ಅಪರಾಧೀಕರಣದ ಬಗ್ಗೆ ಮಾತನಾಡುತ್ತಿದ್ದ ಗುರುವಾರ ಮಧ್ಯಾಹ್ನ ಈ ಮಹಿಳಾಮಣಿ ಸಮೂಹ ಷಾಪಿಂಗ್‌ಗೆ ಹೊರಟಿದ್ದು ಮಹಾತ್ಮಗಾಂಧಿ ರಸ್ತೆಯಲ್ಲಿ . ಹನಿಯಿಲ್ಲದ ಮೋಡ ಕವಿದ ಆಕಾಶ ಕೂಡ ಷಾಪಿಂಗ್‌ಗೆ ಹೇಳಿ ಮಾಡಿಸಿದಂತಿತ್ತು . ಎಂಜಿ ರಸ್ತೆಯ ಪ್ರಸಿದ್ಧ ರೇಷ್ಮೆ ಮಳಿಗೆ ಅಂಗಡಿಯಲ್ಲೇ ಎರಡು ಗಂಟೆ ಕಳೆಯಿತು. ಸೀರೆ ಕೊಂಡ ನಾರಿಯರು ಆನಂತರ ದಾಳಿಯಿಟ್ಟದ್ದು ಚರ್ಚ್‌ಸ್ಟ್ರೀಟ್‌ನಲ್ಲಿರುವ ಹೊಟೇಲೊಂದಕ್ಕೆ. ಮಸಾಲೆ ದೋಸೆ, ವಡೆ, ಉಪ್ಪಿಟ್ಟು , ಇಡ್ಲಿ , ಕೇಸರಿಭಾತ್‌... ಲೋಕೋಭಿನ್ನರುಚಿ !

ಬೆಂಗಳೂರು ಹೇಗಿದೆ ಮೇಡಂ?
ವಾಹ್‌ ಮುಖಪುಟ / ಲೋಕೋಭಿನ್ನರುಚಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+