ಇಂಗ್ಲೆಂಡ್ ಬಲಿಹಾಕಿದ ಬ್ರೆಜಿಲ್ ವಿಶ್ವಕಪ್ ಪುಟ್ಬಾಲ್ ಸೆಮಿಫೈನಲ್ಸ್‌ಗೆ
ಶ್ಹಿಜುಹೊಕ: ವಿಶ್ವಪ್ರಸಿದ್ಧ ಆಟಗಾರರಿಂದ ಕೂಡಿದ ಬಲಿಷ್ಠ ಬ್ರೆಜಿಲ್ ತಂಡ ಬಹುತೇಕ ಯುವಕರಿಂದಲೇ ಕೂಡಿದ ಇಂಗ್ಲೆಂಡ್ ತಂಡವನ್ನು 2-1 ಗೋಲುಗಳಿಂದ ಬಲಿಹಾಕುವ ಮೂಲಕ ವಿಶ್ವಕಪ್ ಪುಟ್ಬಾಲ್-2002 ಸೆಮಿಫೈನಲ್ ತಲುಪಿದೆ.
ಆಟದ ಮೊದಲಾರ್ಧದಲ್ಲಿ ಉಭಯ ತಂಡಗಳೂ ತಲಾ 1 ಗೋಲು ಗಳಿಸಿ ಸಮಬಲದ ಆಟ ಪ್ರದರ್ಶಿಸಿದವು. ಪ್ರಾರಂಭದಲ್ಲಿ ಬಿರುಸಿನ ಆಟವಾಡಿದ ಇಂಗ್ಲೆಂಡ್ ತಾನೇ ಮೊದಲ ಗೋಲನ್ನು ಗಳಿಸಿತಾದರೂ, ರೊನಾಲ್ಡಿನೊ ನೀಡಿದ ಅದ್ಭುತ ಪಾಸನ್ನು ಗೋಲಾಗಿಸಿದ ರಿವಾಲ್ಡೊ ಸ್ಕೋರನ್ನು ಸಮನಾಗಿಸಿದರು.
ಆಟಕ್ಕೆ ಚುರುಕು ಬಂದದ್ದು ಪಂದ್ಯದ ದ್ವಿತೀಯಾರ್ಧದಲ್ಲಿ . ರಭಸದ ಆಟವಾಡಿದ ಬ್ರೆಜಿಲ್ ಆಟಗಾರರು ಎರಡನೇ ಗೋಲು ಗಳಿಸಿ ಕುಣಿದು ಕುಪ್ಪಳಿಸಿದರು. ಗೆಲುವಿನ ಗೋಲನ್ನು ತಂದವರು ರೀವಾಲ್ಡಿನೋ . ಆನಂತರ ಇಂಗ್ಲೆಂಡ್ ಆಟಗಾರರು ಗೋಲು ಗಳಿಸಲು ನಡೆಸಿದ ಪ್ರಯತ್ನಗಳು ಯಶಸ್ವಿಯಾಗಲಿಲ್ಲ . ವಿಶ್ವಕಪ್ ಹಾಟ್ ಫೇವರಿಟ್ ಎಂದು ಪರಿಗಣಿಸಲಾಗಿದ್ದ ಅರ್ಜೆಂಟೈನಾ ತಂಡವನ್ನು ಮಣಿಸಿದ್ದ ಇಂಗ್ಲೆಂಡ್- ಚಾಣಾಕ್ಷ ಆಟಕ್ಕೆ ಹೆಸರುವಾಸಿಯಾದ ಅನುಭವಿ ಬ್ರೆಜಿಲ್ ವಿರುದ್ಧ ಮುಗ್ಗರಿಸಿತು.
(ಏಜೆನ್ಸೀಸ್)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications