ಸೌದಿ ಅರೇಬಿಯ ಪ್ರವೇಶಿಸಿದ ಬೆಂಗಳೂರಿನ ಐಟಿ ಸಾಧಕ ವಿಪ್ರೋ
ಬೆಂಗಳೂರು : ಇನ್‌ಫೋಸಿಸ್‌ನೊಂದಿಗೆ ಸದಾ ಸುದ್ದಿಯಲ್ಲಿರುವ ಹಾಗೂ ಸಾಧನೆಯ ಸಂಭ್ರಮದಲ್ಲಿರುವ ಸಿಲಿಕಾನ್ ವ್ಯಾಲಿಯ ವಿಪ್ರೋ ಲಿಮಿಟೆಡ್ ಇದೀಗ ಸೌದಿ ಅರೇಬಿಯಾದಲ್ಲಿ ತನ್ನ ಚಟುವಟಿಕೆಗಳನ್ನು ಪ್ರಾರಂಭಿಸಿದೆ.
715 ಮಿಲಿಯನ್ ಡಾಲರ್ ವಹಿವಾಟಿನ, ನ್ಯೂಯಾರ್ಕ್ ಸ್ಟಾಕ್ ಎಕ್ಸ್‌ಚೇಂಜ್ ಲಿಮಿಟೆಡ್ ಕಂಪನಿ ತನ್ನ ಏಷ್ಯಾ ಫೆಸಿಫಿಕ್ ಹಾಗೂ ಮಧ್ಯ ಪ್ರಾಚ್ಯಗಳಲ್ಲಿ ವಹಿವಾಟು ವಿಸ್ತರಣೆ ಅಂಗವಾಗಿ ಸೌದಿ ಅರೇಬಿಯಾಕ್ಕೆ ಕಾಲಿಟ್ಟಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.
ಇದೇ ಅವಧಿಯಲ್ಲಿ - ಪ್ರತಿಷ್ಠಿತ Saudi Polyolefins ಕಂಪನಿಯ ಎಂಟರ್‌ಪ್ರೆೃಸ್ ರಿಸೋರ್ಸ್ ಪ್ಲಾನಿಂಗ್ ಇಪ್ಲಿಮೆಂಟೇಷನ್ ಪ್ರಾಜೆಕ್ಟ್ ಯೋಜನೆ ಕೂಡ ವಿಪ್ರೋಗೆ ದೊರಕಿದೆ. ಸೌದಿ ನ್ಯಾಷನಲ್ ಪೆಟ್ರೋಕೆಮಿಕಲ್ ಕಂಪನಿ ಮತ್ತು ಬಾಸೆಲ್ ಜೊತೆ ವಿಪ್ರೋ ಈ ಯೋಜನೆಯನ್ನು ನಿರ್ವಹಿಸಲಿದೆ.
ಎರಡು ಹಂತಗಳಲ್ಲಿ ಕಾರ್ಯಗತಗೊಳ್ಳುವ ಈ ಯೋಜನೆ- ಮಾನವ ಸಂಪನ್ಮೂಲಗಳು, ಗ್ರಾಹಕ ಸಂಬಂಧ ನಿರ್ವಹಣೆ, ಮೆಟೀರಿಯಲ್ಸ್ ಮೆನೇಜ್‌ಮೆಂಟ್ ಇತ್ಯಾದಿ ಒಳಗೊಂಡಿದೆ. ವಿಪ್ರೋ ಕಂಪನಿ ಸೌದಿಯಲ್ಲಿ ತನ್ನ ಮಾರುಕಟ್ಟೆ ಪ್ರತಿನಿಧಿಯನ್ನಾಗಿ ಸೌದಿಯ ಪ್ರಮುಖ ಕನ್ಸಲ್ಟಂಟ್ ಆದ ದರ್ ಅಲ್ ರಿಯಾದ್ ಕನ್ಸಲ್ಟಂಟ್‌ನ್ನು ನೇಮಿಸಿದೆ ಎಂದು ಕಂಪನಿ ಪ್ರಕಟಣೆ ತಿಳಿಸಿದೆ.
(ಪಿಟಿಐ)
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ












Click it and Unblock the Notifications