ಹರಿಹರದಲ್ಲಿ ಕುಡಿಯುವ ನೀರಿನ ಸಮಸ್ಯೆ, ಇಬ್ಬರು ವ್ಯಕ್ತಿಗಳಿಗೆ ಕಾಲರಾ
ಹರಿಹರ: ಇಲ್ಲಿನ ಬನ್ನಿಕೊಂಡು ಗ್ರಾಮ ಹಾಗೂ ಇತರೆಡೆಗಳಲ್ಲಿ 54 ಮಂದಿ ಕರುಳು ಬೇನೆ ಹಾಗೂ ವಾಂತಿ ಬೇದಿಯಿಂದ ಬಳಲುತ್ತಿದ್ದು ಇಬ್ಬರು ವ್ಯಕ್ತಿಗಳಿಗೆ ಕಾಲರಾ ಹರಡಿರುವುದು ತಿಳಿದು ಬಂದಿದೆ.
ತಾಲ್ಲೂಕಿನಲ್ಲಿ ಈಗಾಗಲೇ 54 ಮಂದಿ ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹರಿಹರ ಪಟ್ಟಣದಲ್ಲಿಯೂ 21 ಜನ ವಾಂತಿ ಬೇದಿಯಿಂದ ಬಳಲುತ್ತಿದ್ದು, ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಊರಿನ ನದಿಯಲ್ಲಿ ನೀರು ಬತ್ತಿ ಹೋಗಿದ್ದು, ಆಲ್ಲಲ್ಲಿ ನಿಂತಿರುವ ನೀರನ್ನೇ ಸಾರ್ವಜನಿಕರು ಕುಡಿಯಲು ಬಳಸುತ್ತಿರುವುದರಿಂದ ಈ ಆರೋಗ್ಯ ಸಮಸ್ಯೆ ಉಂಟಾಗಿರಬಹುದು ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಪ್ರತಿಯಾಂದು ಗ್ರಾಮಪಂಚಾಯಿತಿಯ ನೀರಿನ ಟ್ಯಾಂಕ್ ಹಾಗೂ ಕೊಳವೆ ಬಾವಿಗಳನ್ನು ಸ್ವಚ್ಛವಾಗಿಡುವಂತೆ ಗ್ರಾಮಪಂಚಾಯಿತಿ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ. ಬೀದಿ ಬದಿಯಲ್ಲಿ ಮಾರಾಟವಾಗುವ ಪದಾರ್ಥಗಳನ್ನು ಕೊಂಡುಕೊಳ್ಳಬಾರದು ಎಂದು ಆರೋಗ್ಯಾಧಿಕಾರಿಗಳು ಸಾರ್ವಜನಿಕರಿಗೆ ಸೂಚಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications