ಉಪಾಸನಾದಿಂದ ಹೊಸಹಾಡು-ಹೊಸಹಾದಿ ಸುಗಮ ಸಂಗೀತ ಕಾರ್ಯಕ್ರಮ

Upasanaaಬೆಂಗಳೂರು: ಬೆಂಗಳೂರಿನ ಸಂಗೀತ ಸಂಸ್ಥೆ ‘ಉಪಾಸನಾ’ ಫೆ.16ರ ಶನಿವಾರ ಸಂಜೆ 6.30ಕ್ಕೆ ಬನಶಂಕರಿ ಎರಡನೇ ಹಂತದ ಸುಚಿತ್ರಾ ಫಿಲಂ ಸೊಸೈಟಿಯ ಪೀರ್‌ ಬಯಲು ರಂಗ ಮಂದಿರದಲ್ಲಿ ‘ಹೊಸಹಾಡು-ಹೊಸ ಹಾದಿ’ ಎಂಬ ಸುಗಮ ಸಂಗೀತ ಕಾರ್ಯಕ್ರಮ ಏರ್ಪಡಿಸಿದೆ.

ಜಿ.ಪಿ. ರಾಜರತ್ನಂ, ಪುತಿನ, ಎಸ್‌.ವಿ. ಪರಮೇಶ್ವರಭಟ್‌, ಜಿಎಸ್‌ಎಸ್‌, ನಿಸ್ಸಾರ್‌ ಅಹ್ಮದ್‌, ಎಂ.ಎನ್‌. ವ್ಯಾಸರಾವ್‌, ವಿಜಯ ಸಾಸನೂರು, ಕಾ.ವೆಂ. ಶ್ರೀನಿವಾಸ ಮೂರ್ತಿ ಮೊದಲಾದವರು ರಚಿಸಿರುವ ಗೀತೆಗಳನ್ನು ಗಾಯಕರಾದ ನಗರ ಶ್ರೀನಿವಾಸ ಉಡಪ, ಅಪ್ಪಗೆರೆ ತಿಮ್ಮರಾಜು, ಡಿ. ನಾರಾಯಣಸ್ವಾಮಿ, ಜೆ. ಮೋಹನ್‌, ಎಂ. ಲಕ್ಷ್ಮೀಕಾಂತ, ಎಸ್‌.ಆರ್‌. ರಾಘವೇಂದ್ರರಾವ್‌, ಪಂಚಮ್‌ ಹಳಿಬಂಡಿ, ರಿಬಬ್ಬಾರಿ ಅರ್ಚನಾ ಉಡುಪ ಹಾಡಲಿದ್ದಾರೆ.

ಉಪಾಸನದ ಹಿರಿಯ ವಿದ್ಯಾರ್ಥಿಗಳು ಹಾಗೂ ಚಿಣ್ಣರೂ ತಮ್ಮ ದನಿ ಗೂಡಿಸಲಿದ್ದಾರೆ. ಇವರೆಲ್ಲರ ಗಾಯನಕ್ಕೆ ವಾದ್ಯಕಲಾವಿದರಾದ ಕೃಷ್ಣ ಉಡುಪ, ವಿ. ಉಮೇಶ್‌, ಆರ್‌. ಲೋಕೇಶ್‌, ಗುರುರಾಜ್‌ ಸಹಕರಿಸಲಿದ್ದಾರೆ. ಜಾನಪದ ಗೀತೆಗಳ ಗಾಯನವೂ ನಡೆಯಲಿದೆ. ಸಂಯೋಜನೆ- ಮೋಹನ್‌ ಜೆ. ನಿರೂಪಣೆ- ಜಿ.ಪಿ.ರಾಮಣ್ಣ ಹಾಗೂ ರಮ್ಯ ವಸಿಷ್ಠ

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+