ಅಮೆರಿಕದ ಡರ್ಮಟಾಲಜಿ ಅಧಿವೇಶನಕ್ಕೆ ಮಂಗಳೂರಿನ ನರೇಂದ್ರ ಕಾಮತ್
ಮಂಗಳೂರು : ಈ ತಿಂಗಳ 21ರಿಂದ ಆರು ದಿನಗಳ ಕಾಲದ ಅಮೆರಿಕದಲ್ಲಿ ನಡೆಯುವ ಡರ್ಮಟಾಲಜಿ ಅಧಿವೇಶನಕ್ಕೆ ಮಂಗಳೂರಿನ ಡಾ. ನರೇಂದ್ರ ಕಾಮತ್ ಭಾರತೀಯ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ.
ಭಾರತದ ಏಕೈಕ ಪ್ರತಿನಿಧಿಯಾಗಿರುವ ನರೇಂದ್ರ ಕಾಮತ್ ಮಂಗಳೂರು ಕೆಎಂಸಿಯ ಅಸೋಸಿಯೇಟ್ ಪ್ರೊಫೆಸರ್. 60ನೇ ಡರ್ಮಟಾಲಜಿ ಅಧಿವೇಶನವನ್ನು ಅಮೆರಿಕನ್ ಅಕಾಡೆಮಿ ಆಫ್ ಡರ್ಮಟಾಲಜಿ ಪ್ರಾಯೋಜಿಸಿದೆ. ಫೆಬ್ರವರಿ 21ರಂದು ಆರಂಭವಾಗುವ ಈ ಸಮಾವೇಶದ ಸಮಾರೋಪ ಫೆಬ್ರವರಿ 26ರಂದು ನಡೆಯಲಿದೆ.
ಅಮೆರಿಕಾದ ನ್ಯೂ ಆರ್ಲ್ಸಿಯಲ್ಲಿ ಈ ಸಮಾವೇಶವನ್ನು ಆಯೋಜಿಸಲಾಗಿದ್ದು, ‘ರೆಡ್ ಕ್ರೆಸೆಂಟ್ ಸೈನ್ ಆಫ್ ದಿ ನೇಲ್’ ಎಂಬ ವಿಷಯದ ಬಗ್ಗೆ ನರೇಂದ್ರ ಕಾಮತ್ ಪ್ರಬಂಧ ಮಂಡಿಸಲಿದ್ದಾರೆ. ಕೆಎಂಸಿಯ ಸಿಬ್ಬಂದಿ ನರೇಂದ್ರ ಕಾಮತ್ ಅವರ ಪ್ರಯಾಣಕ್ಕೆ ಶುಭ ಹಾರೈಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications