ಆನಂದ ತೀರ್ಥ ಸಿ.ಡಿ.ಯಲ್ಲಿ ಮಧ್ವಾಚಾರ್ಯರ ಜೀವನ ಹಾಗೂ ತತ್ವ ಆದರ್ಶ

ಬೆಂಗಳೂರು : ದ್ವೆತ ಪ್ರಾಚಾರ್ಯ ಮಧ್ವಾಚಾರ್ಯರ ಜೀವನ ಹಾಗೂ ತತ್ವ ಆದರ್ಶಗಳನ್ನು ಅನಿಮೇಶನ್‌ ಮೂಲಕ ಚಿತ್ರೀಕರಿಸಿರುವ ಆನಂದ ತೀರ್ಥ ಎಂಬ ಸಿ.ಡಿ. ರಾಮ್‌ನ್ನು ಪೂರ್ಣ ಪ್ರಜ್ಞ ಸಂಶೋಧನ ಮಂದಿರ ಸದ್ಯದಲ್ಲೇ ಹೊರ ತರಲಿದೆ.

ಆಗಿನ ಕಾಲದ ಪರಿಸರದ ಚಿತ್ರಣ, ಉಡುಗೆ ತೊಡುಗೆಗಳನ್ನು ಬಿಂಬಿಸುವ ಈ ಸಿ.ಡಿ.ಗೆ ವಿದ್ಯಾಭೂಷಣರು ಹಿನ್ನಲೆ ಸಂಗೀತ ನೀಡಿದ್ದಾರೆ. ಈ ವಿಷಯವನ್ನು ಡಾ. ಎ. ವಿ. ನಾಗಸಂಪಿಗೆ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಫೆಬ್ರವರಿ 20ರಂದು ಅಂದರೆ ಮಾಧ್ವನವಮಿಯಂದು ಸಿ.ಡಿ. ಬಿಡುಗಡೆಯಾಗಲಿದೆ. ನಗರದ ಪೂರ್ಣ ಪ್ರಜ್ಞಾ ಸಭಾಂಗಣದಲ್ಲಿ ಪೇಜಾವರ ಮಠಾಧೀಶ ವಿಶ್ವೇಶ ತೀರ್ಥ ಸ್ವಾಮೀಜಿ ಸಿ.ಡಿ. ಬಿಡುಗಡೆ ಮಾಡಲಿದ್ದಾರೆ. ಬನ್ನಂಜೆ ಗೋವಿಂದಾಚಾರ್ಯ ಹಾಗೂ ತಿರುಪತಿ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದ ಕುಲಪತಿ ಪ್ರೊ. ಪ್ರಹ್ಲಾದಾಚಾರ್ಯರ ನಿರ್ದೇಶನದಲ್ಲಿ ಪ್ರೊ. ಎ. ಹರಿದಾಸ ಭಟ್ಟರು ಹಾಗೂ ಎನ್‌ಎಪಿಎಸ್‌ ರಾವ್‌ ಅವರ ಸಾಹಿತ್ಯದೊಂದಿಗೆ ಸಿ.ಡಿ. ನಿರ್ಮಾಣಗೊಂಡಿದೆ.

71 ನಿಮಿಷಗಳ ಈ ಸಿ.ಡಿ.ಯಲ್ಲಿ ಮಧ್ವಾಚಾರ್ಯರ ಪೂರ್ಣ ಜೀವನ ಚರಿತ್ರೆ ಹಾಗೂ ಮಾಧ್ವ ತತ್ವಾದರ್ಶಗಳ ವಿವರಗಳಿವೆ. ಸಿ.ಡಿ. ನಿರ್ಮಾಣಕ್ಕೆ 6 ಲಕ್ಷ ರೂಪಾಯಿ ವೆಚ್ಚವಾಗಿದೆ ಎಂದು ನಾಗಸಂಪಿಗೆ ತಿಳಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+