ಮಹಾ ಮಜ್ಜನ ಪ್ರಯುಕ್ತ ಕೆಎಸ್‌ಆರ್‌ಟಿಸಿಯಿಂದ ಕಾರ್ಕಳಕ್ಕೆ ವಿಶೇಷ ಬಸ್
ಮಂಗಳೂರು: ಫೆ. 16 ರಿಂದ ಕಾರ್ಕಳದಲ್ಲಿ ಭಗವಾನ್ ಬಾಹುಬಲಿ ಮೂರ್ತಿಗೆ ನಡಯುವ ಮಹಾ ಮಜ್ಜನ ಕಾರ್ಯಕ್ರಮಕ್ಕೆ ಭಕ್ತರು ಆಗಮಿಸಲು ಅನುವಾಗುವಂತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ರಾಜ್ಯದ ವಿವಿಧ ಪ್ರಮುಖ ಪಟ್ಟಣಗಳಿಂದ ಕಾರ್ಕಳಕ್ಕೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಿದೆ.
ಫೆ. 16 ರಿಂದ 10 ದಿನಗಳ ಕಾಲ ನಡೆಯುವ ಮಹಾ ಮಸ್ತಕಾಭಿಷೇಕ ಸಂದರ್ಭದಲ್ಲಿ ಬೆಂಗಳೂರು, ಮೈಸೂರು, ಹಾಸನ, ಬೆಳಗಾವಿ, ಶಿವಮೊಗ್ಗ , ಚನ್ನರಾಯ ಪಟ್ಟಣ, ಅರಸೀಕೆರೆ, ಶ್ರವಣಬೆಳಗೊಳ ಮತ್ತಿತರ ಸ್ಥಳಗಳಿಂದ ಕಾರ್ಕಳಕ್ಕೆ ಬಸ್ ಸೌಕರ್ಯ ಕಲ್ಪಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆ ತಿಳಿಸಿದೆ.
ಈ ನಡುವೆ, ಒಪ್ಪಂದದ ಮೇರೆಗೆ ಪಡೆಯುವ ವಾಹನಗಳ ಬಾಡಿಗೆಯನ್ನು ಕೆಎಸ್‌ಆರ್‌ಟಿಸಿ ಕಡಿತಗೊಳಿಸಿದೆ. 200 ಕಿಮೀವರೆಗೆ 12 ಗಂಟೆ ಕಾಲ ಬಾಡಿಗೆ ಪಡೆಯುವ ವಾಹನಗಳ ದರದಲ್ಲಿ 750 ರುಪಾಯಿಯಷ್ಟು ಕಡಿಮೆಯಾಗಿದೆ. ವಿವರಗಳಿಗೆ ಹತ್ತಿರದ ಕೆಎಸ್‌ಆರ್‌ಟಿಸಿ ಕಚೇರಿಯನ್ನು ಸಂಪರ್ಕಿಸಬಹುದು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications