ಟಿವಿ ಸೆಟ್ ಸ್ಫೋಟ, ಉಸಿರುಗಟ್ಟಿ ಹಿರಿಯ ಐಪಿಎಸ್ ಅಧಿಕಾರಿ ಸಾವು
ಬೆಂಗಳೂರು : ಗೆಸ್ಟ್‌ಹೌಸ್ ಕೋಣೆಯಲ್ಲಿದ್ದ ಟೀವಿ ಸೆಟ್ಟೊಂದು ಸ್ಫೋಟಗೊಂಡು ಉಂಟಾದ ಹೊಗೆಯಲ್ಲಿ ಉಸಿರುಗಟ್ಟಿ , ಹಿರಿಯ ಐಪಿಎಸ್ ಅಧಿಕಾರಿಯಾಬ್ಬರು ಸಾವಿಗೀಡಾದ ದುರಂತ ಶುಕ್ರವಾರ (ಫೆ.15) ಬೆಳಗ್ಗೆ ದಾವಣಗೆರೆಯಲ್ಲಿ ನಡೆದಿದೆ.
ಅಣ್ಣೇಗೌಡ (48) ಎನ್ನುವ ಸಿಓಡಿ ಅಧಿಕಾರಿ ಗೆಸ್ಟ್‌ಹೌಸ್‌ನಲ್ಲಿ ಮಲಗಿದ್ದಾಗ, ಕೋಣೆಗೆ ಸಮೀಪದ ಟ್ರಾನ್ಸ್‌ಫಾರ್ಮರ್ ಸ್ಫೋಟದಿಂದ ಟಿವಿ ಸೆಟ್ ಕೂಡ ಸಿಡಿದಿದೆ. ಈ ಸಂದರ್ಭದಲ್ಲಿ ಬೆಂಕಿಯ ಕಿಡಿಗಳು ಕೋಣೆಯಲ್ಲಿನ ಕಾರ್ಪೆಟ್ ಮೇಲೆ ಬಿದ್ದು ಹೊಗೆ ವ್ಯಾಪಕವಾಗಿದೆ. ಅಣ್ಣೇಗೌಡರು ಚೇತರಿಸಿಕೊಂಡು ರಕ್ಷಣಾ ಸಿಬ್ಬಂದಿಯ ನೆರವು ಕೇಳಿದರೂ, ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ನಿಧನರಾದರು ಎಂದು ಬೆಂಗಳೂರು ಮಹಾನಗರ ಪೊಲೀಸ್ ಕಮೀಷನರ್ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಉಸಿರುಗಟ್ಟಿದ ಕಾರಣ, ಅಣ್ಣೇಗೌಡರಿಗೆ ಹೃದಯಾಘಾತ ಸಂಭವಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸಿಓಡಿಗೆ ವರ್ಗಾವಣೆಯಾಗುವ ಮುನ್ನ ಡಿಸಿಪಿ ಆಗಿ ಅಣ್ಣೇಗೌಡ ಸೇವೆ ಸಲ್ಲಿಸಿದ್ದರು. ಪತ್ನಿ, ಓರ್ವ ಪುತ್ರಿ ಹಾಗೂ ಓರ್ವ ಪುತ್ರನನ್ನು ಮೃತರು ಅಗಲಿದ್ದಾರೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications