ಸತ್ಯಮಂಗಲ ಕಾಡಿನಲ್ಲಿ ದಂತಗಳ್ಳತನ : ಇದು ವೀರಪ್ಪನ್ ಕೆಲಸವೇ?
ಚಾಮರಾಜನಗರ : ತಮಿಳುನಾಡಿನ ಸತ್ಯಮಂಗಲಂ ಕಾಡಿನಲ್ಲಿ ಆನೆಯಾಂದನ್ನು ಕೊಂದು ದಂತ ಅಪಹರಿಸಲಾಗಿದ್ದು, ನರಹಂತಕ ವೀರಪ್ಪನ್ ಈ ಕೆಲಸ ಮಾಡಿದ್ದಾನೆಂದು ಎಸ್‌ಟಿಎಫ್ ಪೊಲೀಸರು ಶಂಕಿಸಿದ್ದಾರೆ. ಆನೆ ಸತ್ತು ಬಿದ್ದಿರುವ ಪ್ರದೇಶದ ಅರಣ್ಯದಲ್ಲಿ ಎಸ್‌ಟಿಎಫ್ ಪಡೆ ವೀರಪ್ಪನ್ ಶೋಧ ನಡೆಸಿದೆ.
ಮರಾಡ ಅರಣ್ಯ ಪ್ರದೇಶದಲ್ಲಿ ಆನೆ ಸತ್ತು ಬಿದ್ದಿದೆ. ಕಳೆದ ಐದಾರು ದಿನಗಳ ಹಿಂದೆ ಆನೆ ಸತ್ತಿರುವುದಾಗಿ ಅರಣ್ಯ ಇಲಾಖೆಯ ಸಿಬ್ಬಂದಿ ತಿಳಿಸಿದ್ದಾರೆ. ವೀರಪ್ಪನ್ ತಂಡವೇ ಈ ಕೆಲಸ ಎಸಗಿದೆ ಎಂದು ಅರಣ್ಯ ಇಲಾಖೆ ಪೊಲೀಸರು ಎಸ್‌ಟಿಎಫ್ ಪಡೆಗೆ ತಿಳಿಸಿದ ನಂತರ, ಕಾಡಿಗೆ ಮುತ್ತಿಗೆ ಹಾಕಲಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ವೀರಪ್ಪನ್ ಶಿಕಾರಿ












Click it and Unblock the Notifications