101ಜೋಡಿಗೆ ಮದುವೆ ಮಾಡಿಸ್ತಾರಂತೆ ಚಿತ್ರನಟ ಯೋಗೀಶ್ವರ್‌

ಚನ್ನಪಟ್ಟಣ : ಸೈನಿಕ ಚಿತ್ರದ ನಾಯಕ ಹಾಗೂ ಚನ್ನಪಟ್ಟಣದ ಶಾಸಕ ಸಿ.ಪಿ. ಯೋಗೀಶ್ವರ್‌ 101 ಜೋಡಿ ಮದುವೆ ಮಾಡಿಸುವ ಸಿದ್ಧತೆಯಲ್ಲಿದ್ದಾರೆ. ಮಾರ್ಚ್‌ ತಿಂಗಳಿನಲ್ಲಿ ತಮ್ಮ ಕ್ಷೇತ್ರದಲ್ಲೇ ಕನಿಷ್ಠ 101 ಜೋಡಿಗೆ ಮದುವೆ ಮಾಡಿಸುವುದಾಗಿ ಮಾಧ್ಯಮ ಪ್ರತಿನಿಧಿಗಳಿಗೆ ಅವರು ತಿಳಿಸಿದ್ದಾರೆ.

ತಮ್ಮ ಕನಸಿನ ಕೂಸಾದ ‘ಕರ್ಮಯೋಗಿ ಚಾರಿಟಬಲ್‌ ಟ್ರಸ್ಟ್‌ ’ವತಿಯಿಂದ ನಡೆಸಲಾಗುವ ಈ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಸಾಂಪ್ರದಾಯಿಕವಾಗಿ ನೀಡಲಾಗುವ ಮಾಂಗಲ್ಯ, ಸೀರೆ, ಕುಪ್ಪುಸ, ಪಂಚೆ ಇತ್ಯಾದಿಗಳನ್ನು ನವವಧೂವರರಿಗೆ ನೀಡಲಾಗುವುದು ಎಂದರು.

ಈ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ತಮ್ಮ ಮಕ್ಕಳಿಗೆ ಮದುವೆ ಮಾಡಲಿಚ್ಛಿಸುವವರು ಟ್ರಸ್ಟ್‌ನಲ್ಲಿ ಹೆಸರು ನೊಂದಾಯಿಸಿಕೊಳ್ಳಬಹುದು. ಜನವರಿ ತಿಂಗಳಿನಿಂದ ನೊಂದಣಿ ಆರಂಭವಾಗಲಿದೆ . ಮದುವೆ ಮಾಡಿ, ಸಾಲದ ಶೂಲಕ್ಕೆ ಬಡವರು ಸಿಲುಕ ಬಾರದು ಎಂಬ ಉದ್ದೇಶದಿಂದ ತಾವು ಈ ವಿವಾಹ ಮಹೋತ್ಸವ ಏರ್ಪಡಿಸಿರುವುದಾಗಿ ಅವರು ತಿಳಿಸಿದರು.

ಮೂರು ವರ್ಷಗಳ ಹಿಂದೆ ಕೂಡ ಚಿತ್ರನಟ ಯೋಗೀಶ್ವರ್‌ ಇಲ್ಲಿನ ಮಹದೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ವಿವಾಹ ಮಹೋತ್ಸವ ಏರ್ಪಡಿಸಿ, 200ಕ್ಕೂ ಹೆಚ್ಚು ಜೋಡಿಗಳಿಗೆ ಮದುವೆ ಮಾಡಿಸಿದ್ದರು.

ಮೊನ್ನೆ ಮೊನ್ನೆಯಷ್ಟೇ ಬಾದಾಮಿಯಲ್ಲಿ ನಡೆದ ಸಾವಿರ ಜೋಡಿ ಸಾಮೂಹಿಕ ವಿವಾಹದಲ್ಲಿ ಬಾಲ್ಯ ವಿವಾಹಗಳೂ ನಡೆಯಿತು ಎಂದು ಆಪಾದಿಸಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಹಾಗೂ ವಿವಾಹದ ನೇತೃತ್ವ ವಹಿಸಿದ್ದ ಸಚಿವ ಬಿ.ಬಿ. ಚಿಮ್ಮನಕಟ್ಟಿ ಅವರ ರಾಜೀನಾಮೆಗೆ ಪ್ರತಿಪಕ್ಷಗಳು ಮಾಡುತ್ತಿರುವ ಒತ್ತಾಯ ಯೋಗೀಶ್ವರ್‌ ಅವರ ಉತ್ಸಾಹಕ್ಕೆ ತಣ್ಣೀರೆರೆಚಿಲ್ಲ.

(ಇನ್‌ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+