ಟಿವಿಎಸ್ ಸುಜುಕಿ ಉತ್ಪನ್ನಗಳ ಮಾರಾಟದಲ್ಲಿ ಶೇ.8.6 ಹೆಚ್ಚಳ
ಬೆಂಗಳೂರು : ದ್ವಿಚಕ್ರ ವಾಹನಗಳ ಮಾರುಕಟ್ಟೆಯಲ್ಲಿ ಶೇ. 24 ರ ಪಾಲನ್ನು ಹೊಂದಿರುವ ಟಿವಿಎಸ್ ಸುಜುಕಿ ಲಿಮಿಟೆಡ್ ಪ್ರಸಕ್ತ ಸಾಲಿನಲ್ಲಿ ಕಳೆದ ವರ್ಷಕ್ಕಿಂತ ತನ್ನ ಉತ್ಪನ್ನಗಳ ಮಾರಾಟದಲ್ಲಿ ಶೇ. 8.6 ರ ಹೆಚ್ಚಳವನ್ನು ಸಾಧಿಸಿದೆ.
ಏಪ್ರಿಲ್ 2000 ದಿಂದ ಮಾರ್ಚ್ 2001 ರ ವರೆಗಿನ ವಹಿವಾಟು ವರ್ಷದಲ್ಲಿ , ಕಂಪನಿ 3 ಲಕ್ಷ 54 ಸಾವಿರದ 505 ಮೋಟಾರ್ ಸೈಕಲ್‌ಗಳನ್ನು ಮಾರಿದೆ. ಇದಕ್ಕೆ ಬದಲಾಗಿ ಕಳೆದ ಸಾಲಿನಲ್ಲಿ ಕಂಪನಿ ಮಾರಿದ ಮೋಟಾರ್ ಸೈಕಲ್‌ಗಳ ಸಂಖ್ಯೆ 3,26,325 ಮಾತ್ರ. ಬುಧವಾರ ಕಂಪನಿ ಪ್ರಕಟಿಸಿರುವ ಸುದ್ದಿ ಪ್ರಕಟಣೆ ಈ ಅಂಕಿ ಅಂಶಗಳನ್ನು ತಿಳಿಸಿದೆ.
ಈ ಸಾಲಿನಲ್ಲಿ ಒಟ್ಟು 8,63,559 ವಾಹನಗಳನ್ನು ಮಾರಾಟ ಮಾಡಿರುವ ಕಂಪನಿ, ಕಳೆದ ಸಾಲಿನಲ್ಲಿ 8,35,7577 ವಾಹನಗಳನ್ನು ಮಾರಾಟ ಮಾಡಿತ್ತು . ಕಳೆದ ವರ್ಷದ ಮಾರಾಟದ ಸಂಖ್ಯೆಯಲ್ಲಿ 1,42,575 ಸ್ಕೂಟರ್ ಹಾಗೂ 3,66,479 ಮೊಪೆಡ್ ಸೇರಿವೆ.
ಕಂಪನಿಯ ಮಾರಾಟದಲ್ಲಿ ಮೋಟಾರ್‌ಸೈಕಲ್‌ಗಳ ಪಾಲು ಶೇ.41 ರಷ್ಟಿದ್ದು , ಮೋಟಾರ್‌ಸೈಕಲ್ ಕ್ಷೇತ್ರದಲ್ಲಿ ಟಿವಿಎಸ್ ಸುಜುಕಿ ತನ್ನ ಅಗ್ರಸ್ವಾಮ್ಯವನ್ನು ಮುಂದುವರಿಸಿದೆ ಎಂದು ಕಂಪನಿಯ ಅಧ್ಯಕ್ಷ ಸಿ.ಪಿ. ರಮಣಿ ತಿಳಿಸಿದ್ದಾರೆ. ಕಂಪನಿ ಹೊಸದಾಗಿ ಪರಿಚಯಿಸಿರುವ ಸುಜುಕಿ ಫಿಯೆರೊಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಅವರು ಹೇಳಿದ್ದಾರೆ.
(ಯುಎನ್‌ಐ)












Click it and Unblock the Notifications