ದ.ಕ. ಹಾಲು ಉತ್ಪಾದಕರ ಒಕ್ಕೂಟಕ್ಕೆ ಐಎಸ್‌ಒ-9002 ಪ್ರಮಾಣ ಪತ್ರ

ಮಂಗಳೂರು : ದಕ್ಷಿಣ ಕನ್ನಡದ ಹಾಲು ಉತ್ಪಾದಕರ ಒಕ್ಕೂಟ ಪ್ರತಿಷ್ಠಿತ ಐಎಸ್‌ಒ 9002 ಪ್ರಮಾಣ ಪತ್ರವನ್ನು ಪಡೆದಿದೆ.

ಮಂಗಳೂರಿನಲ್ಲಿ , ಬುಧವಾರ ನಡೆದ ಸಮಾರಂಭದಲ್ಲಿ ಜರ್ಮನಿ ದೇಶದ ಟಿಯುವಿ ಸಂಸ್ಥೆ ನೀಡುವ ಈ ಪ್ರಮಾಣ ಪತ್ರವನ್ನು, ಎಚ್‌. ಆರ್‌. ಸಂಪತ್‌ ಅವರು ಒಕ್ಕೂಟದ ಅಧ್ಯಕ್ಷ ಸವಣೂರು ಸೀತಾರಾಮ ರೈ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸೀತಾರಾಮ ರೈ ಅವರು ರಾಜ್ಯದ 13 ಹಾಲು ಉತ್ಪಾದಕ ಒಕ್ಕೂಟಗಳ ಪೈಕಿ ಐಎಸ್‌ಓ 9002 ಪ್ರಮಾಣ ಪತ್ರ ಪಡೆಯುತ್ತಿರುವ ಮೊದಲ ಒಕ್ಕೂಟ ಇದಾಗಿದೆ ಎಂದು ಹೇಳಿದರು.

ಈ ಪ್ರಮಾಣ ಪತ್ರ ದ.ಕ. ಹಾಲು ಉತ್ಪಾದಕರ ಒಕ್ಕೂಟದ ಉತ್ಪನ್ನ ಮತ್ತು ಉತ್ಪಾದನಾ ವಿಧಾನದ ಬಗ್ಗೆ ಗುಣಮಟ್ಟ ಖಾತ್ರಿ ಒದಗಿಸುವುದರಿಂದ ಯುರೋಪಿಯನ್‌ ಸಮುದಾಯಕ್ಕೆ ಡೈರಿ ಉತ್ಪನ್ನಗಳನ್ನು ಮಾರಾಟ ಮಾಡಲು ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಿದರು. ಉಡುಪಿ ಮತ್ತು ದ.ಕ. ಜಿಲ್ಲೆಗಳಲ್ಲಿ ಒಟ್ಟು 358 ಹಾಲು ಉತ್ಪಾದಕ ಸಂಘಗಳನ್ನು ಹೊಂದಿದ ಈ ಒಕ್ಕೂಟದಲ್ಲಿ 46 ಸಂಘಗಳು ಮಹಿಳೆಯರಿಂದ ನಿರ್ವಹಿಸಲ್ಪಡುತ್ತಿವೆ.

(ಮನಂಗಳೂರು ಪ್ರತಿನಿಧಿಯಿಂದ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+