ಬಿಇಎಲ್ : ವಹಿವಾಟು 1706 ಕೋಟಿ, ಲಾಭ 196 ಕೋಟಿ
ಬೆಂಗಳೂರು : ದೇಶದ ಎಲೆಕ್ಟ್ರಾನಿಕ್ಸ್ ಕಂಪನಿಗಳಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿರುವ ಭಾರತ್ ಎಲೆಕ್ಟ್ರಾನಿಕ್ಸ್ ಕಂಪನಿ (ಬಿಇಎಲ್) ಮಾರ್ಚ್ 31 ಕ್ಕೆ ಕೊನೆಗೊಂಡ ಆರ್ಥಿಕ ವರ್ಷದ ತನ್ನ ವಹಿವಾಟಿನಲ್ಲಿ ಕಳೆದ ವರ್ಷಕ್ಕಿಂತ ಶೇ. 14 ರ ಹೆಚ್ಚಳವನ್ನು ಸಾಧಿಸಿದೆ. ಇದರಿಂದಾಗಿ ಬಿಇಎಲ್ 196 ಕೋಟಿ ರುಪಾಯಿಗಳ ತೆರಿಗೆ ಪೂರ್ವ ಲಾಭ ಗಳಿಸಿದಂತಾಗಿದೆ.
ಕಳೆದ ಸಾಲಿನಲ್ಲಿ 1494 ಕೋಟಿ ರುಪಾಯಿಗಳ ವಹಿವಾಟು ನಡೆಸಿದ್ದ ಬಿಇಎಲ್ ಪ್ರಸಕ್ತ ಸಾಲಿನಲ್ಲಿ 1706 ಕೋಟಿ ರುಪಾಯಿಗಳ ವಹಿವಾಟು ನಡೆಸಿದೆ. ತೆರಿಗೆ ಪೂರ್ವ ಲಾಭದ ಪ್ರಮಾಣ, 166 ಕೋಟಿ ರುಪಾಯಿಗಳಿಂದ 196 ಕೋಟಿ ರುಪಾಯಿಗಳಿಗೆ ಅಂದರೆ, ಪ್ರತಿಶತ 18 ರಷ್ಟು ಏರಿಕೆ ಕಂಡಿದೆ.
(ಇನ್ಫೋ ವಾರ್ತೆ)












Click it and Unblock the Notifications