ಅನಾಮಿಕ ಚೆಲುವೆಯರ ವನವಿಹಾರ

ರಂಗನತಿಟ್ಟು ಪಕ್ಷಿ ಧಾಮ ರಂಗನ ತಿಟ್ಟು ಪಕ್ಷಿಧಾಮ ಮೈಸೂರು ಜಿಲ್ಲೆಯಲ್ಲಿರುವ ಒಂದು ಸುಂದರ ತಾಣ. ಜೂನ್‌ ತಿಂಗಳಿನಿಂದ ನವೆಂಬರ್‌ ತಿಂಗಳವರೆಗೆ ಇಲ್ಲಿ ನೂರೆಂಟು ಬಗೆಯ ಪಕ್ಷಿಗಳು ದೇಶ ವಿದೇಶಗಳಿಂದ ಆಗಮಿಸಿ, ಸಂತಾನೋತ್ಪತ್ತಿಯ ನಂತರ ಮರಳುತ್ತವೆ. ಎಷ್ಟೋ ಹಕ್ಕಿಗಳು ಇಲ್ಲೇ ಬೀಡು ಬಿಟ್ಟು ನೆಲೆಸಿರುವುದೂ ಉಂಟು.

ಕಾವೇರಿ ನದಿಯ ತಡದಲ್ಲಿ ಇರುವ ಈ ಸುಂದರ ಪರಿಸರವನ್ನು ಪಕ್ಷಿಧಾಮವನ್ನಾಗಿ ಪರಿವರ್ತಿಸಲಾಗಿದೆ. ಸಂರಕ್ಷಿಸಲಾಗಿದೆ. ಪ್ರವಾಸಿಗರನ್ನು ಆಕರ್ಷಿಸಲು ವಿವಿಧ ಅನುಕೂಲತೆಗಳನ್ನು ಮಾಡಿಕೊಡಲಾಗಿದೆ. ಸುಮಾರು 0.67 ಚದರ ಕಿಲೋ ಮೀಟರ್‌ ಪ್ರದೇಶದಲ್ಲಿರುವ ಈ ಧಾಮದಲ್ಲಿ ಬೋಟಿಂಗ್‌ ಆಕರ್ಷಣೆಯೂ ಇದೆ.

ರಂಗನತಿಟ್ಟು ಒಂದು ಪುಟ್ಟ ದ್ವೀಪದಂತಿದೆ. ಈ ಪುಟ್ಟ ಪ್ರದೇಶವನ್ನು ಕಾವೇರಿ ನದಿ ಸುತ್ತುವರಿದಿದೆ. 67.57 ಹೆಕ್ಟೇರ್‌ ಪ್ರದೇಶದಲ್ಲಿರುವ ಪಕ್ಷಿಧಾಮವನ್ನು 1926ರಲ್ಲಿ ನಿರ್ಮಿಸಲಾಯಿತು. ಬೆಂಗಳೂರಿನಿಂದ 125 ಕಿ.ಮೀಟರ್‌ ದೂರದಲ್ಲೂ, ಮೈಸೂರಿನಿಂದ ಸುಮಾರು 16 ಕಿ.ಮೀಟರ್‌ ದೂರದಲ್ಲಿರುವ ಈ ದ್ವೀಪ ಪ್ರದೇಶ ಮೈಸೂರು ಹುಲಿ ಟಿಪ್ಪೂ ಸುಲ್ತಾನಾಳಿದ ಶ್ರೀರಂಗಪಟ್ಟಣಕ್ಕೆ ಕೇವಲ 3 ಕಿ.ಮೀಟರ್‌ ದೂರದಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+