keyboard_backspace

ದಕ್ಷಿಣ ಆಫ್ರಿಕಾದಲ್ಲಿ ಕೊರೊನಾವೈರಸ್ ಬಿ.1.1.529 ರೂಪಾಂತರ ತಳಿ ಪತ್ತೆ

Google Oneindia Kannada News

ನವದೆಹಲಿ, ನವೆಂಬರ್ 26: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ಕಡಿಮೆಯಾಯಿತು ಎನ್ನುವಷ್ಟರಲ್ಲೇ ದಕ್ಷಿಣ ಆಫ್ರಿಕಾರದಲ್ಲಿ ಹೊಸ ರೂಪಾಂತರ ತಳಿ ಪತ್ತೆಯಾಗಿದೆ. ಪ್ರಾರಂಭಿಕ ಹಂತದಲ್ಲಿ ಕಡಿಮೆ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಬೇರೆ ರಾಷ್ಟ್ರಗಳಿಗೂ ರೂಪಾಂತರ ತಳಿ ಹರಡಿರುವ ಅಪಾಯ ಎದುರಾಗಿದೆ.

ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೊವಿಡ್-19 ಹೊಸ ರೂಪಾಂತರ ತಳಿಯ ಬಗ್ಗೆ ಸೂಕ್ಷ್ಮಾಣುರೋಗಶಾಸ್ತ್ರದ ತಜ್ಞರು ಪರೀಕ್ಷೆ ನಡೆಸುತ್ತಿದ್ದಾರೆ. ಹೊಸ ತಳಿಯ ಲಕ್ಷಣಗಳು ಮತ್ತು ಅವುಗಳ ಪರಿಣಾಮ ಹೇಗಿರಲಿದೆ ಎಂಬುದನ್ನು ಪತ್ತೆ ಮಾಡುತ್ತಿದ್ದಾರೆ.

ಕೋವಿಡ್‌ ಹೊಸ ರೂಪಾಂತರ: ಈ 3 ದೇಶದಿಂದ ಆಗಮಿಸುವವರಿಗೆ ಕಟ್ಟುನಿಟ್ಟಾದ ಸ್ಕ್ರೀನಿಂಗ್ಕೋವಿಡ್‌ ಹೊಸ ರೂಪಾಂತರ: ಈ 3 ದೇಶದಿಂದ ಆಗಮಿಸುವವರಿಗೆ ಕಟ್ಟುನಿಟ್ಟಾದ ಸ್ಕ್ರೀನಿಂಗ್

ದಕ್ಷಿಣ ಆಫ್ರಿಕಾದಲ್ಲಿ ಇದುವರೆಗೂ ವಿವಿಧ ರೂಪಾಂತರ ತಳಿಗಳು ಸೇರಿದಂತೆ ಒಟ್ಟು 29,52,500 ಕೊವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗಿವೆ. ಕೊರೊನಾವೈರಸ್ ಸೋಂಕಿನಿಂದ 89,771 ಜನ ಪ್ರಾಣ ಬಿಟ್ಟಿದ್ದರೆ, 2,843,961 ಸೋಂಕಿತರು ಗುಣಮುಖರಾಗಿದ್ದಾರೆ. ಇದರ ಹೊರತಾಗಿ 18,768 ಸಕ್ರಿಯ ಪ್ರಕರಣಗಳಿವೆ. ಆದರೆ ಇತ್ತೀಚೆಗೆ ಪತ್ತೆಯಾಗಿರುವ ಹೊಸ ಕೊವಿಡ್-19 ಸೋಂಕಿನ ರೂಪಾಂತರ ತಳಿಯ ಬಗ್ಗೆ ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳನ್ನು ಮುಂದೆ ಓದಿ.

New Covid-19 variant B.1.1.529 detected in South Africa: All you need to know in kannada

ದಕ್ಷಿಣ ಆಫ್ರಿಕಾದಲ್ಲಿ ಕೊವಿಡ್-19 ಹೊಸ ರೂಪಾಂತರ:

* ಹೊಸ ರೂಪಾಂತರ ತಳಿಯನ್ನು ಬಿ.1.1.529 ಎಂದು ಕರೆಯಲಾಗುತ್ತದೆ.

* ಇದು ರೂಪಾಂತರಗಳ "ಅತ್ಯಂತ ಅಸಾಮಾನ್ಯ ತಳಿ"ಯನ್ನು ಹೊಂದಿದೆ, ಏಕೆಂದರೆ ಅವುಗಳು ದೇಹದ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ತಪ್ಪಿಸುತ್ತವೆ. ಮತ್ತು ಅದು ಹೆಚ್ಚು ಹರಡುವುದಕ್ಕೆ ಸಹಾಯ ಮಾಡುತ್ತವೆ ಎಂದು ವಿಜ್ಞಾನಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

* ದಕ್ಷಿಣ ಆಫ್ರಿಕಾದಲ್ಲಿ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಗೌತೆಂಗ್ ಪ್ರದೇಶದಲ್ಲಿ ವೇಗವಾಗಿ ಹರಡಿರುವ ಬಗ್ಗೆ ರೋಗನಿರ್ಣಯ ಪ್ರಯೋಗಾಲಯವು ತಿಳಿಸಿದೆ, ಅಲ್ಲದೇ ಇತರೆ ಎಂಟು ಪ್ರದೇಶಗಳಲ್ಲೂ ರೂಪಾಂತರ ವೈರಸ್ ಪತ್ತೆಯಾಗಿರುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ.

* ದಕ್ಷಿಣ ಆಫ್ರಿಕಾದಲ್ಲಿ ಒಟ್ಟು 100 ಮಂದಿಯಲ್ಲಿ ಬಿ.1.1.529 ರೂಪಾಂತರ ತಳಿಯ ಮಾದರಿ ಪತ್ತೆಯಾಗಿದೆ.

* ಕೊರೊನಾವೈರಸ್ ಸೋಂಕಿನ ಹೊಸ ರೂಪಾಂತರ ತಳಿಯು ಬೋಟ್ಸ್ವಾನ್ ಮತ್ತು ಹಾಂಗ್ ಕಾಂಗ್ ರಾಷ್ಟ್ರಗಳಲ್ಲಿಯೂ ಪತ್ತೆಯಾಗಿದೆ. ದಕ್ಷಿಣ ಆಫ್ರಿಕಾದಿಂದ ವಾಪಸ್ ಆದ ಹಾಂಗ್ ಕಾಂಗ್ ಪ್ರಜೆಯಲ್ಲಿ ಬಿ.1.1.529 ರೂಪಾಂತರ ತಳಿಯ ಮಾದರಿ ಪತ್ತೆಯಾಗಿದೆ.

* ಹೊಸ ರೂಪಾಂತರ ಬಿ.1.1.529 ತಳಿಯ ಕೊರೊನಾವೈರಸ್ ಸೋಂಕಿನ ಶೇ.90ರಷ್ಟು ಪ್ರಕರಣಗಳು ದಕ್ಷಿಣ ಆಫ್ರಿಕಾದ ಗೌತೆಂಗ್ ಪ್ರದೇಶದಲ್ಲಿಯೇ ಪತ್ತೆಯಾಗಿವೆ ಎಂದು ವಿಜ್ಞಾನಿಗಳು ನಂಬಿದ್ದಾರೆ.

* "ಕೊರೊನಾವೈರಸ್ ಹೊಸ ರೂಪಾಂತರ ತಳಿಯ ಬಗ್ಗೆ ಅಂಕಿ-ಅಂಶಗಳು ಕಡಿಮೆಯಾಗಿದೆ. ಹೊಸ ರೂಪಾಂತರದ ಬಗ್ಗೆ ತಿಳಿದುಕೊಳ್ಳಲು ಕಣ್ಗಾವಲು ವ್ಯವಸ್ಥೆಯನ್ನು ರಚಿಸಬೇಕಾಗಿದೆ. ರೂಪಾಂತರ ತಳಿಯ ಪರಿಣಾಮ ಸೇರಿದಂತೆ ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ ನಮ್ಮ ತಜ್ಞರು ಹೆಚ್ಚು ಅವಧಿ ಇದರ ಮೇಲೆ ಕೆಲಸ ಮಾಡುತ್ತಿದ್ದಾರೆ," ಎಂದು ದಕ್ಷಿಣ ಆಫ್ರಿಕಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಕಮ್ಯುನಿಕಬಲ್ ಡಿಸೀಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

* ಹೊಸ ರೂಪಾಂತರ ವೈರಸ್ ಕುರಿತು ಚರ್ಚೆ ನಡೆಸುವುದಕ್ಕಾಗಿ ಶುಕ್ರವಾರ ವಿಶ್ವ ಆರೋಗ್ಯ ಸಂಸ್ಥೆಯ ರೋಗಾಣು ಕಾರ್ಯ ತಂಡದ ತುರ್ತು ಸಭೆ ಕರೆಯುವಂತೆ ದಕ್ಷಿಣ ಆಫ್ರಿಕಾ ಮನವಿ ಮಾಡಿಕೊಂಡಿದೆ.

* ಸರ್ಕಾರವು ಕಠಿಣ ನಿರ್ಬಂಧಗಳನ್ನು ವಿಧಿಸುತ್ತದೆಯೇ ಇಲ್ಲವೇ ಎಂದು ಈಗಲೇ ಹೇಳುವುದು ಸೂಕ್ತವಾಗಿರುವುದಿಲ್ಲ ಎಂದು ಆರೋಗ್ಯ ಸಚಿವ ಜೋ ಫಾಹ್ಲಾ ಹೇಳಿದ್ದಾರೆ.

* ಕಳೆದ ವರ್ಷ ಇದೇ ದಕ್ಷಿಣ ಆಫ್ರಿಕಾದಲ್ಲಿ ಕೊರೊನಾವೈರಸ್ ಸೋಂಕಿನ ಬೀಟಾ ರೂಪಾಂತರ ತಳಿ ಪತ್ತೆಯಾಗಿತ್ತು. ಬೀಟಾ ತಳಿ ಎಂಬುದು ವಿಶ್ವ ಆರೋಗ್ಯ ಸಂಸ್ಥೆಯು ಪಟ್ಟಿ ಮಾಡಿದ ನಾಲ್ಕು ರೋಗಾಣುಗಳ ಪೈಕಿ ಒಂದಾಗಿದ್ದು, ಲಸಿಕೆಯು ಈ ರೋಗಾಣುವಿನ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ ಎಂದು ತಿಳಿದು ಬಂದಿತ್ತು.

* ದೇಶವು ಈ ವರ್ಷದ ಆರಂಭದಲ್ಲಿ C.1.2 ಎಂಬ ಮತ್ತೊಂದು ರೂಪಾಂತರ ಪತ್ತೆ ಆಗಿತ್ತು, ಆದರೆ ಇದು ಹೆಚ್ಚು ಸಾಮಾನ್ಯವಾದ ಡೆಲ್ಟಾ ರೂಪಾಂತರವನ್ನು ಸ್ಥಳಾಂತರಿಸಲಿಲ್ಲ. ಇತ್ತೀಚಿನ ತಿಂಗಳುಗಳಲ್ಲಿ ಅನುಕ್ರಮವಾದ ಸಣ್ಣ ಶೇಕಡಾವಾರು ಜೀನೋಮ್‌ಗಳನ್ನು ಮಾತ್ರ ಹೊಂದಿದೆ.

English summary
New Covid-19 variant detected in South Africa: Here is all you need to know about B.1.1.529 variant of Covid-19 in kannada.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X