• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೇತುರಾಮಾಯಣ!

By Staff
|

ಈಗಾಗಲೇ ನಾವು ಅಮೂಲ್ಯ ಹಸ್ತ ಪ್ರತಿಗಳನ್ನು, ಶಿಲಾಶಾಸನಗಳನ್ನು ಕಳೆದುಕೊಂಡಿದ್ದೇವೆ. ಅಜ್ಞಾನ ಆಸೆಬುರುಕತನಗಳಿಂದಾಗಿ ನಷ್ಟವಾದವುಗಳ ಸಾಲಿಗೆ ರಾಮಸೇತು ಸೇರಬಾರದು. ಬನ್ನಿ ತಡೆಯೋಣ..


Ramsetu image from NASAಭಾರತದ, ಭಾರತೀಯತೆಯ ಇತಿಹಾಸ ಹುದುಗಿರುವುದು ಅದರ ಕಾವ್ಯಗಳಲ್ಲಿ. ರಾಮಾಯಣ, ಭಾರತ, ಭಾಗವತಾದಿ ಗ್ರಂಥಗಳಲ್ಲಿ. ನಮ್ಮ ಪರಂಪರೆ, ವೈಚಾರಿಕತೆ, ವಿಜ್ಞಾನ, ಇಹ-ಪರಗಳೆರಡರ ಕಾಳಜಿ ಈ ಗ್ರಂಥಗಳಲ್ಲಿದೆ. ಮುಖ್ಯವಾಗಿ ನಿತ್ಯಾನಿತ್ಯ ವಿವೇಕ, ಅದರ ಅಧಾರದಮೆಲೆ ಯಾವುದಕ್ಕೆ ಎಷ್ಟು ಬೆಲೆ ಎಂಬುದು ನಿರ್ಣೀತವಾಗಬೇಕು.

ಈ ಹಿನ್ನೆಲೆಯಲ್ಲಿ ರಾಮಸೇತು ಧ್ವಂಸೋತ್ಸಾಹಿಗಳ ಅವಿವೇಕವನ್ನು ಪರಾಮರ್ಶಿಸಬೇಕು. ಪರಂಪರಾಗತ ವಾಗಿ ಬಂದಿರುವ ಸ್ಮಾರಕಗಳನ್ನು ರಕ್ಷಿಸಿ, ಅಭಿಮಾನದಿಂದ ಅದನ್ನು ಇತರರಿಗೆ ತೋರಿಸಿ, ತಮ್ಮ ಪೂರ್ವೀಕರ ಸಾಧನೆಯನ್ನು ನೆನಪಿಸಿಕೊಂಡು ಹೆಮ್ಮೆಪಡುವುದು ಯಾವುದೇ ರಾಷ್ಟ್ರದವನ ಕರ್ತವ್ಯ. ಭಾರತವಾಸಿಗಳಲ್ಲಿ ಹಲವರು ಹಣದಾಸೆಗಾಗಿ ಲೌಕಿಕ ಪ್ರಯೋಜನಗಳಿಗಾಗಿ ತಮ್ಮ ಸ್ಮಾರಕಗಳನ್ನು ಬಲಿಕೊಡಲು ಮುಂದಾಗಿರುವುದು ಖಂಡನೀಯ. ಈಗಾಗಲೇ ನಾವು ಅಮೂಲ್ಯ ಹಸ್ತ ಪ್ರತಿಗಳನ್ನು, ತಾಡೋಲೆಗಳನ್ನು, ತಾಮ್ರಪತ್ರಗಳನ್ನು, ಶಿಲಾಶಾಸನಗಳನ್ನು ಕಳೆದುಕೊಂಡಿದ್ದೇವೆ. ಅಜ್ಞಾನ ಆಸೆಬುರುಕತನಗಳಿಂದಾಗಿ ನಷ್ಟವಾದವುಗಳ ಸಾಲಿಗೆ ರಾಮಸೇತು ಸೇರಬಾರದು.

Ramsetu or Adams bridge?ಇದುವರೆಗೆ ನಮಗೆ ರಾಮಾಯಣದಿಂದ ತಿಳಿದದ್ದು ; ರಾಮನು ಸೇತುವೆ ನಿರ್ಮಿಸಿದ್ದನೆಂಬ ಕಥೆ. ರಾಮಾಯಣದ ಕಾಲಕ್ಕೆ ಸೇರಿದ್ದೆಂಬ ಹಲವು ಜಾಗಗಳನ್ನು ನಾವು ಈಗಲೂ ಆಸ್ತೆಯಿಂದ ಕಾಣುತ್ತೇವೆ. ರಾಮ ನಿರ್ಮಿಸಿದ ಸೇತುವೆ ಇದೆ ಎಂಬ ಅರಿವು ಜನ ಸಾಮಾನ್ಯರಿಗೆ ಮೂಡಿದ್ದು ಸರ್ಕಾರದ ಸೇತುಸಮುದ್ರಂ ಪ್ರಾಜೆಕ್ಟಿನ ಪ್ರಾರಂಭದ ನಂತರ. ಏಕಕಾಲಕ್ಕೆ ಹೆಮ್ಮೆ ಹಾಗೂ ವಿಷಾದಪಡುವ ಸಂದರ್ಭಎದುರಾದದ್ದು ಈಗ. ನಾಸಾ ಸೆರೆಹಿಡಿದ ಚಿತ್ರಗಳು ಸೇತುವೆ ಇರುವುದನ್ನು ಖಚಿತಪಡಿಸಿರುವುದು, ರಾಮಾಯಣದ ಸೇತು ಪ್ರಸಂಗಕ್ಕೆ ಪುಷ್ಟಿ ದೊರೆತಂತಾಗಿದೆ.

ನಾವೀಗ ಒತ್ತಿ ಒತ್ತಿ ಹೇಳಲೇಬೇಕಾಗಿದೆ ರಾಮಸೇತು ಎಂಬುದು ಮಾನವ ನಿರ್ಮಿತವಲ್ಲ, ಬದಲಾಗಿ ದೇವನಿರ್ಮಿತ ಅಥವಾ ದೇವಮಾನವ ನಿರ್ಮಿತ ಎಂದು.

ಪ್ರಾಚೀನ ಕಟ್ಟಡಗಳ ಐತಿಹಾಸಿಕ ನಿವೇಶನಗಳ ಕುರಿತಾಗಿ ಹೇಳುವಾಗ ಅಥವಾ ಹೆಸರಿಸುವಾಗ ಪಾಶ್ಚಾತ್ಯರು, ತಮ್ಮ ಮೂಗಿನ ನೇರಕ್ಕೆ ಹೊಂದುವ ಅಂಶಗಳನ್ನು ಮಾತ್ರಾ ಸ್ವೀಕರಿಸುವುದು ತಪ್ಪು. ಇತರ ಅಂಶಗಳನ್ನು ಕಡೆಗಣಿಸುವುದು ಇತಿಹಾಸಕ್ಕೆ ಮಾಡುವ ಅಪಚಾರ. ಇಂತಹ ಅಪಚಾರ ಮಾಡುವುದೂ ಯಾವತ್ತಿನಿಂದಲೂ ನಡೆದೇ ಇದೆ. ನಮ್ಮ ಅನಂತಮೂರ್ತಿಗಳೂ, ಕಾರ್ನಾಡರುಗಳಿಗೂ, ಥಾಪರರುಗಳಿಗಿದು ಬಹು ಆಪ್ಯಾಯಮಾನ. ಹೀಗಾಗಿ ರಾಮಸೇತು ಆಡಂ ಬ್ರಿಡ್ಜ್ಗ್ ಆಗುತ್ತದೆ., ಕನ್ಯಾಕುಮಾರಿ ಕನ್ನಿಮೇರಿಯಾಗುತ್ತಾಳೆ.

ಸರಕಾರದ ಯಾವ ಕಾರ್ಯಕ್ರಮಗಳೂ, ಪ್ರಾಯೋಜನೆಗಳೂ ಪಾರದರ್ಶಕವಾಗಿರುವುದಿಲ್ಲ. ಯಾವ ಯಾವುದೋ ಒತ್ತಡದಗುಂಪುಗಳ ಹಿತಾಸಕ್ತಿಗನುಗುಣವಾಗಿ ಸರ್ಕಾರ ಕಾರ್ಯನಿರ್ವಹಿಸುತ್ತದೆ ಎಂಬುದೀಗ ಎಲ್ಲರಿಗೂ ತಿಳಿದಿರುವ ಗುಟ್ಟು. ಈ ಹಿನ್ನೆಲೆಯಲ್ಲೂ ಸಹ ಸರಕಾರದ ಸೇತುಸಮುದ್ರಂ ಪ್ರಾಜೆಕ್ಟ್ ಯಾರ ಹಿತಕ್ಕಾಗಿ ಎಂಬ ಪ್ರಶ್ನೆ ದುರುಗುಟ್ಟುತ್ತಿದೆ.

Ramsetu or Adams bridge?ಅನೇಕ ಭೂಗರ್ಭ ಶಾಸ್ತ್ರಜ್ಞರು, ಪರಿಸರ ತಜ್ಞರು, ಆರ್ಥಿಕ ತಜ್ಞರು, ಈ ಯೋಜನೆ ಲಾಭದಾಯಕವಲ್ಲ, ಬದಲಾಗಿ ಅಪಾಯಕಾರಿ ಎಂದು ಸಾರುತ್ತಿದ್ದರೂ ಸರಕಾರ ಮಾತ್ರಾ ಮುನ್ನುಗ್ಗುತ್ತಿರುವುದು ತಪ್ಪು. ಸಂಬಂಧಪಟ್ಟ ವರದಿಗಳನ್ನು, ಅಂಕಿ ಅಂಶಗಳನ್ನು ತೆರೆದಿಡದೆ ಮುಗುಮ್ಮಾಗಿ ಕಾಲಪರಿಮಿತಿಯಲ್ಲಿ ಯೋಜನೆ ಪೂರ್ಣಗೊಳಿಸುವ ಅತುರ ತೋರುತ್ತಿರುವುದು ಭಾರತೀಯತೆಯನ್ನು ಪ್ರೀತಿಸುವ ಎಲ್ಲರಿಗೂ ಆತಂಕದ ವಿಷಯವಾಗಿದೆ.

ಕೇವಲ ಕುರುಡು-ಕಾಂಚಾಣದ ಬೆನ್ನು ಹತ್ತುವುದು ಭಾರತೀಯತೆಯಲ್ಲ. ನಮ್ಮ ಶಾಸ್ತ್ರಗಳು, ಸಾಧು ಸಂತರು,ಜಾತಿ ಮತ ಭಾಷೆ ಭೇದವಿಲ್ಲದೆ ಸಾರಿರುವ ಸಾರ್ವಕಾಲಿಕ, ಏಕೈಕ ಸತ್ಯ ವೆಂದರೆ, ಸಂಯಮದಜೀವನ, ಲೌಕಿಕ ಸುಖಗಳನ್ನು ಎಲ್ಲಿಟ್ಟಿರಬೇಕೋ ಅಲ್ಲಿಟ್ಟಿರತಕ್ಕದ್ದು ಎಂಬುದು. ಆದರೆ ನಮ್ಮ ದೇಶಕ್ಕೆ ನಿಶ್ಚಿತ ಲಾಭದ ಭರವಸೆಯೇನೂ ಇಲ್ಲದ ಸೇತು ನಾಶನ, ಜಾತಿ ಕೆಟ್ಟೂ ಸುಖಪಡದಂತಾಗುವ ಅಪಾಯವಿದೆ.

ಯಾರ ಯಾರ ಲಾಭಕ್ಕಾಗಿ ತಮ್ಮನ್ನು ತಾವು ಮಾರಿಕೊಳ್ಳುತ್ತಿದ್ದಾರೆಯೋ ಈ ಸೇತುನಾಶಕ ಪಡೆಗಳವರು. ಆರ್.ಎಸ್.ಎಸ್ ಮತ್ತು ವಿ.ಹಿಂ.ಪ ಗುಂಪಿನವರು ವಿರೋಧಿಸುತ್ತಿದ್ದಾರೆಂಬ ಕಾರಣಕ್ಕೆ ಸೆಕ್ಯುಲರ್ ಬ್ರಿಗೇಡ್ ನವರು ಇದನ್ನು ಮಾಡಿಯೇ ತೀರುವ ಪಣ ತೊಟ್ಟಿರುವಂತೆ ತೋರುತ್ತಿದೆ. ಕನಿಷ್ಠ ಈ ಯೋಜನೆಯ ಪುನರ್ ಪರಿಶೀಲನೆಗಾದರೂ ಒಲವು ತೋರುತ್ತಿಲ್ಲ. ವಿಚಾರ ವಿನಿಮಯಕ್ಕೆ ಅವಕಾಶಕೊಡುತ್ತಿಲ್ಲ. ನ್ಯಾಯಾಲಯಕ್ಕೆ ಅದರದೇ ಆದ ಇತಿ-ಮಿತಿಗಳಿವೆ.

ಯಾವ ಸಾಂಸ್ಕೃತಿಕ ಹಿನ್ನೆಯೂ ಇಲ್ಲದೆ , ಕೇವಲ ಬೇಟೆಗಾರ ಜೀವನವನ್ನು ,ಸೂಟು-ಬೂಟಿನ ಥಳುಕಿನ ನಾಗರೀಕತೆಯಲ್ಲಿ ಹುದುಗಿಸಿ ಬದುಕುತ್ತಿರುವ ಅಮೆರಿಕಾ ಎಂಬ ದೇಶ, ಪ್ರಪಂಚದಾದ್ಯಂತ ತನ್ನ ಲಾಭಕೋರತನ, ತನ್ನ ಕಂಪನಿಗಳ ಹಿತಾಸಕ್ತಿ , ಬೆಂದಮನೆಯಲ್ಲಿ ಹಿರಿಯುವ ಧೂರ್ತತನ. ಇವುಗಳಿಂದಾಗಿ ವಿಶ್ವದಾದ್ಯಂತ ಅನೇಕ ರೀತಿಯಲ್ಲಿ ಅಸಮಾಧಾನ ಅತೃಪ್ತಿಯನ್ನು ಹುಟ್ಟುಹಾಕುತ್ತಿದೆ.

ಎಲ್ಲೆಲ್ಲಿ ಸಂಪನ್ಮೂಲಗಳು ದೊರೆತರೂ, ವ್ಯಾಪಾರಾವಕಾಶ ದೊರೆತರೂ ಎಲ್ಲವನ್ನೂ ಸ್ವಾಹಾಮಾಡುವ ಹೊಟ್ಟೆಬಾಕ ಈ ಹಿರಿಯಣ್ಣ. ‘ದೊಣ್ಣೆಯುಳ್ಳವನದೇ ಎಮ್ಮೆ’ ಎನ್ನುವರೀತಿಯಲ್ಲಿ ಹುಂಕಾರಮಾಡುತ್ತಿದೆ. ಈ ಕೊಳ್ಳುಬಾಕನಿಗೆ ಭಾರತೀಯತೆ ಮರೆತ ಭಾರತವಾಸಿಗಳು ಮಣೆಹಾಕುತ್ತಿರುವುದು ದುರದೃಷ್ಟಕರ.

ಆಸ್ತಿಕರು, ಆಸಕ್ತರೆಲ್ಲರೂ ಈ ಸೇತು ನಾಶನ ಪ್ರಾಜೆಕ್ಟ್ ಗೆ ವಿರೋಧವ್ಯಕ್ತಪಡಿಸಬೇಕು, ತಮ ತಮಗೆ ಲಭ್ಯವಿರುವ ಮಾಧ್ಯಮದ ಮೂಲಕ. ಕವಿ ವಾಣಿಯ ಸ್ಮರಣೆಯಾಗದಿದ್ದೀತೆ ಭಾರತವೆಂಬುದು ಬರಿಮಣ್ಣಲ್ಲಾ…

ರಾಮಾಯಣದ ಪ್ರತ್ಯಕ್ಷ ಸಾಕ್ಷಿಯಾದ ಶ್ರೀರಾಮಸೇತುವೆ ಉಳಿಯುವುದೇ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more