ಲಕ್ಷ್ಮಿಗೆ ಎಷ್ಟೆಲ್ಲಾ ಹೆಸರುಗಳಿವೆ ಎಂಬುದನ್ನು ನೀವೇ ನೋಡಿ!
ಭಾಗ್ಯದ ಲಕ್ಷ್ಮಿ ಬಾರಮ್ಮ ಎಂದು ಕರೆಯದವರ್ಯಾರು? ಲಕ್ಷ್ಮಿಯ ಕೃಪೆ ನಮ್ಮ ಮೇಲಿರಲಿ ಎಂದು ಎಲ್ಲರೂ ಸದಾ ಆಶಿಸುತ್ತಾರೆ. ಈ ಲಕ್ಷ್ಮೀದೇವಿಗೆ ಹತ್ತಾರು ಹೆಸರುಗಳು.
1. ಪದ್ಮ : ಕಮಲದಲ್ಲಿ ಹುಟ್ಟಿದವಳು ಎನ್ನಲಾಗಿದ್ದು, ಪದ್ಮ, ಪದ್ಮಜಾ ಎಂದು ಕರೆಯಲಾಗಿದೆ.
2. ಪದ್ಮಪ್ರಿಯೆ : ಕಮಲದ ಹೂವನ್ನು ಇಷ್ಟಪಡುವವಳು.
3. ಪದ್ಮಮಾಲಾಧರ ದೇವಿ : ಕಮಲದ ಹೂವಿನ ಹಾರವನ್ನು ಧರಿಸಿರುವವಳು.
4. ಪದ್ಮಮುಖಿ : ಕಮಲದ ಹೂವಿನಂತೆ ಮುಖ ಉಳ್ಳವಳು.
5. ಪದ್ಮಾಕ್ಷಿ : ಕಮಲದಂತೆ ಕಣ್ಣುಳ್ಳವಳು.
6. ಪದ್ಮ ಹಸ್ತ : ಕೈಯಲ್ಲಿ ಕಮಲ ಹಿಡಿದವಳು.
7. ಪದ್ಮ ಸುಂದರಿ : ಕಮಲದ ಹೂವಿನಂತೆ ಚೆಲುವೆ
8. ಶ್ರೀದೇವಿ : ಸಂಪತ್ತು, ಭಾಗ್ಯ, ಐಶ್ವರ್ಯ ಕೊಡುವವಳು.
9. ಚಂಚಲ : ಒಂದು ಕಡೆ ಇರದವಳು. ಸ್ಥಿರವಾಗಿ ನಿಲ್ಲದವಳು.
10. ಇಂದಿರಾ : ಸುಂದರವಾದ ದೇವತೆ.
11. ವೈಷ್ಣವಿ : ವಿಷ್ಣುವಿನ ಹೆಂಡತಿ
12. ಜಲಜಾ : ನೀರಿನಿಂದ ಹುಟ್ಟಿದವಳು
13. ಐಶ್ವರ್ಯ : ಸಂಪತ್ತಿನ ಒಡತಿ
ಅಷ್ಟ ಲಕ್ಷ್ಮಿಯರು
1. ಆದಿಲಕ್ಷ್ಮಿ : ಆರಂಭಕ್ಕೆ ಕಾರಣವಾದವಳು.
2. ಧಾನ್ಯ ಲಕ್ಷ್ಮಿ
3. ಧೈರ್ಯ ಲಕ್ಷ್ಮಿ
4. ಗಜ ಲಕ್ಷ್ಮಿ
5. ಸಂತಾನ ಲಕ್ಷ್ಮಿ
6. ವಿಜಯ ಲಕ್ಷ್ಮಿ
7. ವಿದ್ಯಾ ಲಕ್ಷ್ಮಿ
8. ಧನ ಲಕ್ಷ್ಮಿ
(ಓದುಗರೇ, ಲಕ್ಷ್ಮಿಗೆ ಸಂಬಂಧಿಸಿದ ಇನ್ನಷ್ಟು ಹೆಸರುಗಳು ನಿಮಗೆ ಗೊತ್ತಿದ್ದರೆ, ನಮಗೆ ತಿಳಿಸಿ. ಪಟ್ಟಿ ಬೆಳೆಸಿ)
ಪೂರಕ ಓದಿಗೆ:












Click it and Unblock the Notifications