ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನವರಿ 28 ರಿಂದ ದೆಹಲಿಯಲ್ಲಿ ಕನ್ನಡ ಸಂಸ್ಕೃತಿಯ ಸವಿಯೂಟ

By Staff
|
Google Oneindia Kannada News

(ಇನ್ಫೋ ವಿಶೇಷ ವಾರ್ತೆ)

ನವದೆಹಲಿ : ಭಕ್ತಿ- ಭಾವ- ಜಾನಪದ ಗೀತೆಗಳು, ನಾಟಕ, ಸಿನಿಮಾ, ಭರತನಾಟ್ಯ- ಕೂಚುಪುಡಿ ಇನ್ನೂ ಏನೇನೋ ಉಂಟು. ರಾಜಧಾನಿಯಲ್ಲಿರುವ ಕನ್ನಡಿಗರೇ ಮಿಸ್‌ ಮಾಡಿಕೊಳ್ಳಬೇಡಿ. ಜನವರಿ 24ರಿಂದ 28ರವರೆಗೆ ಕರ್ನಾಟಕ ಉತ್ಸವ.

ಕಾರ್ಯಕ್ರಮಗಳ ಪಟ್ಟಿ ಇಂತಿದೆ...

  • ಜನವರಿ 24, ಬೆಳಗ್ಗೆ : ತೀನ್‌ಮೂರ್ತಿ ಭವನದ ಸಭಾಂಗಣದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಉತ್ಸವವನ್ನು ಉದ್ಘಾಟಿಸುವರು. ವಾರ್ತಾ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್‌ ಸಮಾರಂಭದ ಅಧ್ಯಕ್ಷತೆ ವಹಿಸುವರು. ನೃತ್ಯ ಕಲಾವಿದೆ ಪ್ರತಿಭಾ ಪ್ರಹ್ಲಾದ್‌ ಮುಖ್ಯ ಅತಿಥಿ.
ಮಧ್ಯಾಹ್ನ : ವಿಚಾರ ಸಂಕಿರಣ. ವಿಷಯ- ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಅಭಿವೃದ್ಧಿ ಅವಕಾಶ. ಪ್ರಬಂಧ ಮಂಡಿಸುವವರು - ಬೆಂಗಳೂರು ಸಾಫ್ಟ್‌ವೇರ್‌ ಟೆಕ್‌ ಪಾರ್ಕ್‌ ಆಫ್‌ ಇಂಡಿಯಾ ನಿರ್ದೇಶಕ ಬಿ.ವಿ.ನಾಯ್ಡು, ಮೇಜರ್‌ ಸಿಸ್ಟಮ್ಸ್‌ ಆಡಳಿತ ನಿರ್ದೇಶಕ ಬಿ.ವಿ.ವೆಂಕಟೇಶ್‌ ಮತ್ತು ಅಸ್ತ್ರ ಜೆನೆಕಾ ಉಪಾಧ್ಯಕ್ಷ ಕುಮುದ್‌ ಸಂಪತ್‌.

ಸಂಜೆ 6 ಗಂಟೆ : ಪ್ರೊ.ಬಿ.ಕೆ. ಚಂದ್ರಶೇಖರ್‌ ಅವರಿಂದ ಸಾಂಸ್ಕೃತಿಕ ಉತ್ಸವ ಉದ್ಘಾಟನೆ. ರಂಗ ಕಲಾವಿದೆ ಅರುಂಧತಿ ನಾಗ್‌ ಮುಖ್ಯ ಅತಿಥಿ. ಲೋಕ ವಿ.ಶಂಕರ್‌ ಅವರಿಂದ ಕರ್ನಾಟಕ ಸಂಗೀತದ ಕೊಳಲು ವಾದನ. ಮಂಡ್ಯ ಗೆಳೆಯರ ಬಳಗದಿಂದ ಬಿ.ವಿ.ಕಾರಂತ್‌ ನಿರ್ದೇಶನದ ಸೇವಂತಿ ನಾಟಕ ಪ್ರದರ್ಶನ.

  • ಜನವರಿ 25 ಸಂಜೆ 6 ಗಂಟೆ : ಸಂಗೀತಾ ಕಟ್ಟಿ ಭಾವಗೀತೆ ಹಾಡಲಿದ್ದಾರೆ. ನಂತರ ಅನುರಾಧ ಅಂಬಲ್ಪಾಡಿ ಕೂಚುಪುಡಿ ನೃತ್ಯ ಪ್ರದರ್ಶಿಸುವರು. ತದ ನಂತರ ಮಲ್ಲಮ್ಮ ಮೇಗೇರಿ ಮತ್ತು ತಂಡ ಶ್ರೀ ಕೃಷ್ಣ ಪಾರಿಜಾತ ಪ್ರದರ್ಶನ ನೀಡಲಿದೆ.
  • ಜನವರಿ 26 ಸಂಜೆ 6 ಗಂಟೆ : ಕರ್ನಾಟಕ ಭವನದಲ್ಲಿ ಡಾ. ಚಂದ್ರಶೇಖರ ಕಂಬಾರರ ಸಾಂಬಶಿವ ಪ್ರಹಸನ ನಾಟಕ ಪ್ರದರ್ಶನ. ಅಭಿನಯ- ಮಂಡ್ಯ ಗೆಳೆಯರ ಬಳಗ. ನಿದೇಶನ- ಅಶೋಕ ಬಾದರದಿನ್ನಿ.
  • ಜನವರಿ 27 ಸಂಜೆ 6 : ಶ್ರೀರಾಮ್‌ ಸೆಂಟರ್‌ನಲ್ಲಿ ಸಾಂಸ್ಕೃತಿಕ ಉತ್ಸವದ ಸಮಾರೋಪ. ಬಾನಂದೂರು ಕೆಂಪಯ್ಯ, ವೇಮಗಲ್‌ ನಾರಾಯಣ ಸ್ವಾಮಿ, ಪುರಂಧರ ಭರಣಿ, ರಮಾ ಭರಣಿ ಮತ್ತು ಎನ್‌.ಜಯರಾಂ ಜಾನಪದ ಗೀತೆಗಳನ್ನು ಹಾಡಲಿದ್ದಾರೆ. ಬೆಂಗಳೂರಿನ ವಾರ್ತಾ ಇಲಾಖೆಯ ಸಂಗೀತ- ನಾಟಕ ವಿಭಾಗದಿಂದ ನೀ ನೀನಾದರೆ ನೀ ನಾನೇನಾ ಹಾಸ್ಯ ನಾಟಕ ಪ್ರದರ್ಶನ.
  • ಜನವರಿ 28 : ಆಂಧ್ರ ಭವನದಲ್ಲಿ ಸಿನಿಮಾ ಉತ್ಸವ. ಸ್ಪರ್ಶ, ಪ್ರೀತ್ಸೆ ಹಾಗೂ ಗಂಧದಗುಡಿ ಚಿತ್ರಗಳ ಪ್ರದರ್ಶನ.

    ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X