ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಶಸ್ತಿ ಸಿಕ್ಕಿರೋದ್ರಿಂದ ರೆಕಗ್ನಿಷನ್‌ ಅಂತೂ ಸಿಕ್ಕಿದೆ.

By Staff
|
Google Oneindia Kannada News
  • ಪ್ರಶಸ್ತಿ ಬಂದಮೇಲೆ ಅವಕಾಶಗಳು ಹುಡುಕಿಕೊಂಡು ಬರುತ್ತಿವೆಯಾ? ಸಿನಿಮಾದಲ್ಲಿ ಹಾಡೋಕೆ ಛಾನ್ಸೇನಾದರೂ ಸಿಕ್ಕಿದೆಯಾ?
ಮೊದಲು ಟ್ರ್ಯಾಕ್‌ ಹಾಡಿಸಿ, ನಂತರ ಕೆಸೆಟ್ಟಿನಲ್ಲಿ ನನ್ನ ಹಾಡು ರೆಕಾರ್ಡ್‌ ಮಾಡಿಕೊಳ್ಳುತ್ತಿದ್ದವರು ಈಗ ನೇರವಾಗಿ ಹಾಡುವಂತೆ ಕೇಳುತ್ತಿದ್ದಾರೆ. ಆದರೆ ಈವರೆಗೆ ಯಾವುದೇ ಸಿನಿಮಾಗೆ ಹಾಡೋ ಆಫರ್‌ ಬಂದಿಲ್ಲ.

  • ಇದೇ ಪ್ರಶಸ್ತಿ ಪಡೆದಿರುವ ಬೆಂಗಳೂರಿನ ಅರ್ಚನಾ ಉಡುಪ ನಿಮಗೆ ಗೊತ್ತೆ ? ಅವರಿಗೆ ಪ್ರಶಸ್ತಿ ಸಿಕ್ಕ ಮೇಲೆ ಹೆಚ್ಚು ಅವಕಾಶಗಳು ಸಿಕ್ಕಿವೆಯಾ?
ಹ್ಞಾಂ ಗೊತ್ತು. ನಾನು ಅವ್ಳು ಒಳ್ಳೆ ಫ್ರೆಂಡ್ಸ್‌. ಟ್ರ್ಯಾ ಕ್‌ಗೆ, ಕೋರಸ್‌ಗೆ ಒಟ್ಟಾಗಿ ಹಾಡ್ತಿದೀವಿ. ಯಾರಿಗೆ ಸಾಲುತ್ತೆ ಸಂಬಳ ಹಾಗೂ ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಸಿನಿಮಾಗಳಲ್ಲಿ ಅರ್ಚ-ನಾ-ಗೆ- ಹಾಡೋ ಅವಕಾಶ ಸಿಕ್ಕಿದೆ. ಇಂಥ ಎರಡು ಮೂರು ಅವಕಾಶಗಳನ್ನ ಬಿಟ್ಟರೆ ಅಂಥಾ ಹೇಳಿಕೊಳ್ಳುವಂಥ ಅವಕಾಶಗಳೇನೂ ಸಿಕ್ಕಿಲ್ಲ.

  • ಟ್ರ್ಯಾಕ್‌ನಿಂದ ಹಿನ್ನೆಲೆ ಗಾಯಕ/ಗಾಯಕಿಯಾಗಿ ಯಾರಿಗೂ ಬಡ್ತಿ ಸಿಕ್ಕಿಲ್ವ?
ನಂಗೆ ತಿಳಿದಿರೋ ಮಟ್ಟಿಗೆ ಬಹಳ ಕಡಿಮೆ. ಪ್ರೀತ್ಸೆ ಚಿತ್ರದ ಟೈಟಲ್‌ ಸಾಂಗ್‌ ಹಾಡಿದ ಹೇಮಂತ್‌ ಕುಮಾರ್‌ ಕೂಡ ಟ್ರ್ಯಾಕ್‌ ಸಿಂಗರ್‌. ಆ ಹಾಡನ್ನ ಉದಿತ್‌ ನಾರಾಯಣ್‌ ಹಾಡಬೇಕಿತ್ತು. ಭಾಷೆಯ ಕಾರಣ ಅವರಿಗೆ ಹಾಡಲು ಬಹಳ ಕಷ್ಟವಾಯಿತು. ರಾಕ್‌ಲೈನ್‌ ವೆಂಕಟೇಶ್‌, ಹೇಮಂತ್‌ ವಾಯ್ಸನ್ನೇ ಉಳಿಸಿಕೊಳ್ಳೋಣ ಅಂದರು. ಹೇಮಂತ್‌ಗೆ ಬ್ರೇಕ್‌ ಸಿಕ್ತು ಅಂದುಕೊಂಡೆ. ಆದರೆ ಅದಾದ ನಂತರ ಅವರಿಗೆ ಅವಕಾಶಗಳೇನೂ ಸಿಗಲಿಲ್ಲ. ಹತ್ತು ಹದಿನೈದು ವರ್ಷಗಳಿಂದ ಕೋರಸ್‌ಗೇ ಹಾಡುತ್ತಿರುವ ಅನೇಕ ಗಾಯಕಿಯರಿದ್ದಾರೆ. ಕುಸುಮ, ಮಂಗಳ ಇವರೆಲ್ಲಾ ತುಂಬಾ ಚೆನ್ನಾಗಿ ಹಾಡುತ್ತಾರಾದರೂ ಪೂರ್ಣ ಪ್ರಮಾಣದ ಹಿನ್ನೆಲೆ ಗಾಯಕಿಯರಾಗಿ ಬಡ್ತಿ ಮಾತ್ರ ಸಿಕ್ಕಿಲ್ಲ.

  • ನಿಮ್ಮ ಗುರಿ ಏನು?
ಪ್ಲೇ ಬ್ಯಾಕ್‌ ಸಿಂಗರ್‌ ಆದ್ರೆ ಸಂತೋಷ. ಆದರೆ, ಅದು ಈವತ್ತಿನ ಸ್ಥಿತಿಯಲ್ಲಿ ಸುಲಭವಲ್ಲ. ನನಗೆ ನನ್ನದೇ ಆದ ಸುಗಮ ಸಂಗೀತದ ತಂಡ ಕಟ್ಟಬೇಕು ಅನ್ನೋ ಆಸೆ ಇದೆ. ನೆನೆಗುದಿಗೆ ಬಿದ್ದಿರುವ ಸುಗಮ ಸಂಗೀತಕ್ಕೆ ಜೀವ ಕೊಡಬೇಕೆಂಬುದು ನನ್ನ ಕನಸು, ಗುರಿ.

  • ನೀವು ಯಾವ ಯಾವ ಭಾಷೆಗಳಲ್ಲಿ ಹಾಡುತ್ತೀರಿ?
ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ. ತೆಲುಗು, ತಮಿಳು ಅರ್ಥವಾಗುತ್ತಾದ್ರೂ ಹಾಡುಗಳನ್ನ ಕನ್ನಡದಲ್ಲೇ ಬರೆದುಕೊಂಡು ಹಾಡ್ತೀನಿ. ಹಿಂದಿ ಚೆನ್ನಾಗಿ ಬರುತ್ತೆ.

backಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X