ಸೇವಂತಿ ಪ್ರಸಂಗ : ಕನ್ನಡದ ಕಿಟಕಿಯಾಳಗೆಬರ್ನಾಡ್ ಷಾ ಮುಖ!
ಬೆಂಗಳೂರು : ವೈಶಾಲಿ ಕಾಸರವಳ್ಳಿ ಅವರ ನಿರ್ದೇಶನದ ಸೇವಂತಿ ಪ್ರಸಂಗ ನಾಟಕ ಭಾನುವಾರ ಬೆಂಗಳೂರಿನ ಜಯನಗರದ ಎಚ್. ಎನ್. ಕಲಾಕ್ಷೇತ್ರದಲ್ಲಿ ಸಂಜೆ 6.45ಕ್ಕೆ ಪ್ರದರ್ಶನಗೊಳ್ಳಲಿದೆ.
ವೈಶಾಲಿ ಕಾಸರವಳ್ಳಿ ಅವರ ಜೀವನದ ಮಹಾತ್ವಾಕಾಂಕ್ಷೆಯ ಈ ನಾಟಕ, ಜಾರ್ಜ್ ಬರ್ನಾಡ್ ಷಾ ಅವರ ಪಿಗ್‌ಮಾಲಿನ್ ಕೃತಿಯನ್ನು ಆಧರಿಸಿದೆ. ಇದರ ಕನ್ನಡ ರೂಪಾಂತರವನ್ನು ಜಯಂತ್ ಕಾಯ್ಕಿಣಿ ಮಾಡಿದ್ದಾರೆ. ಪಿಗ್‌ಮಾಲಿನ್ ಈ ಹಿಂದೆ ಇಂಗ್ಲಿಷ್‌ನಲ್ಲಿ ಮೈ ಫೇರ್ ಲೇಡಿ ಎಂಬ ಹೆಸರಿನಲ್ಲಿ ಚಲನಚಿತ್ರವಾಗಿತ್ತು.
ವೈಶಾಲಿ ಕಾಸರವಳ್ಳಿ ಅವರು ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಪತ್ನಿ. ಅದಕ್ಕಿಂತಲೂ ಹೆಚ್ಚಾಗಿ ನೂರಾರು ಧಾರಾವಾಹಿ, ಹತ್ತಾರು ಸಿನಿಮಾ ಹಾಗೂ 50ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸುತ್ತಾ 25 ವರ್ಷಗಳಿಂಗ ಕಲಾರಂಗದ ಸಂಬಂಧದ ಜೊತೆಗೆ ಬೆಳೆಯುತ್ತಿರುವವರು.
ಹಯವದನ ನಾಟಕಕ್ಕೆ ಬಿ.ವಿ. ಕಾರಂತರೊಂದಿಗೆ ಸಹನಿದೇಶಕರಾಗಿಯೂ ದುಡಿದಿರುವ ವೈಶಾಲಿ ಕಾಸರವಳ್ಳಿ ಅವರ ಸ್ವತಂತ್ರ ನಿದೇಶನದ ಮೊದಲ ನಾಟಕ, ಸೇವಂತಿ ಪ್ರಸಂಗ. ಈ ನಾಟಕ ಮುಂಚೆ ಕಳೆದ ಸೆಪ್ಟಂಬರ್ 9ರಂದು ಮೊದಲ ಪ್ರದರ್ಶನ ಕಂಡಿತ್ತು.
ನಾಟಕಕ್ಕೆ ಖ್ಯಾತ ನಿರ್ದೇಶಕ ಬಿ.ವಿ . ಕಾರಂತ್ ಸಂಗೀತ ನೀಡಿದ್ದಾರೆ. ಪಾತ್ರವರ್ಗದಲ್ಲಿ ಪೂಜಾ ಲೋಕೇಶ್, ಶ್ರೀನಿವಾಸಪ್ರಭು, ಎಚ್. ಎಸ್. ಪಾರ್ವತಿ ಅವರ ಮಗಳು ವಿದ್ಯಾ, ಬಸವರಾಜ ಮುರಗೋಡು, ಶ್ರೀನಿವಾಸ್ ಮೇಷ್ಟ್ರು, ದಮಯಂತಿ, ಅನಿರುದ್ಧ ಜಟ್ಕಾರ್, ಶೋಭಾ ಇದ್ದಾರೆ.
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications