ಹ್ಯೂಸ್ಟನ್ ಹುಳೀ ಹೆಂಡ
*ಡಾ. ಮೈ.ಶ್ರೀ. ನಟರಾಜ್
ಡೊಳ್ಳು ಕುಣಿತದ ದೋಂಡೂ ಬಾಯಿ
ಅಮೇರಿಕಾ ನೋಡಿ ಬಿಟ್ಟಳು ಬಾಯಿ
ಟೆಕ್ಸಾಸ್‌ನಲ್ಲೂ ತೆಂಗಿನ ಕಾಯಿ
ಮೆಕ್ಸಿಕೋ ಮಣ್ಣಿನ ಮೆಣಸಿನ ಕಾಯಿ
ಹಿಂದೂ ಮುಂದೂ ನೋಡದೆ ದೋಂಡೂಜೋಡಿ ಮರಗಳ ಹೋಟೆಲ್ ಸೇರಿ
ಕಾಂಪೌಂಡ್ ಆಚೆ ಬೇಲೀ ಹಾರಿ
ಎಲ್ಲಿ ಎತ್ತ ಎನ್ನುತ ಕೋರಿ
ಹುಡುಕಿದರಣ್ಣ ಪಬ್ಬಿನ ದಾರಿ
ತರಿಸಿದಳಣ್ಣ ಘಂ ಘಂ ಗುಂಡು
ಕುಡಿಯುವ ಇವಳ ವೈಖರಿ ಕಂಡು
ಮುತ್ತಿದರಣ್ಣ ಗಂಡ್ಗಳ ಹಿಂಡು
ಪ್ರೀತಿಯ ತೋರುವ ಮೀಸೆಯ ಮುಖಗಳುತಂಡದ ಭಂಡರ ದೊಡ್ಡ ಮುಖಂಡ
ಕೌಬಾಯಿ ಹ್ಯಾಟಿನ ಮಹಾ ಪ್ರಚಂಡ
ತರಿಸಿದ
ಏರಿದ ಅಮಲಲಿ ಖುಷಿಯನು ಕಂಡ
ಕೇಳದೆ ಕೊಡಿಸುವ ಕೊಡುಗೆಯ ಕೈಗಳು
ಮತ್ತಿನ ಕಣ್ಗಳು ಮುತ್ತಿನ ತುಟಿಗಳು
ಎಲ್ಲೂ ಇಲ್ಲದ ಟೆಕ್ಸಾಸ್ ಗುಣಗಳು
ಮತ್ತೇರಿದ ಕಣ್ಣಲಿ ಪ್ರೀತಿಯ ಛಾಯೆ
ಕೌಬಾಯ್ ಕಂಪೆನಿ ತಂದಿತು ಮಾಯೆ
ಅಲ್ಲೇಕೆ ಹುಟ್ಟಿದೆ ಕನ್ನಡ ತಾಯೆ
ಆಗಬಹುದಿತ್ತು ನಾ ಪಶುಬಾಲಜಾಯೆ
ಹುಡುಕತ ಬಂದ ದೋಂಡೂ ಗಂಡಹೀರುತ ಕುಳಿತಿಹ ಹೆಂಡಿರ ಕಂಡ
ಪೇಟವ ಬಿಟ್ಟು ಹ್ಯಾಟಿಗೆ ಒಲಿದಳೆ
ಎನ್ನುತ ಚೀರಿ ಕಿರುಚ್ಕೊಂಡ
ಉರಿಯುವ ದೋಂಡೂ ಗಂಡನ ಕರೆಸಿಹಬ್ಬದ ದಿನವೂ ಹಳೇ ಗಂಡ
ಸಿಗಬಾರದಿತ್ತೇ ಬಿಳೇ ಗಂಡ
ಕಳೀ ಬಾರದಿತ್ತೇ ಇಡೀ ಜೀವನವ
ಹೀರುತ ಹೂಸ್ಟನ್ ಹುಳೀ ಹೆಂಡ
ಗುಂಪಿಗೆ ಸೇರೋ ಎನ್ನುತ ಒಲಿಸಿ
ಇನ್ನೊಂದು ಸುತ್ತು ಪಾನಕ ತರಿಸಿ
ಘಂ-ಘಂ ಗುಂಡನು ಹಾಕಿದರು
ಕೌಬಾಯ್ ಗುಂಪನು ಸೇರಿಸಿಕೊಂಡುದ ಮಹಿಮೆ
ಕನ್ನಡ ತಾಯಿಯ ಪ್ರೀತಿಯ ಚಿಲುಮೆ
ಸಮಯ ಸ್ಫೂರ್ತಿಯ ದೋಂಡೂ ಹಿರಿಮೆ
ಕುಣಿತಕೆ ಗೆಜ್ಜೆಯ ಕಟ್ಟಿದರು
ಗಂಡನ ಸೊಂಟವ ಬಳಸಿಕ್ಕೊಂಡು
ಡೊಳ್ಳು ಕುಣಿತವ ಮಾಡಿದರು
ಕನ್ನಡದಲಿ ಕುಣಿದಾಡಿದರು ! ಮುಖಪುಟ / ಸಾಹಿತ್ಯ ಸೊಗಡು












Click it and Unblock the Notifications