ದ್ವಿತೀಯ ಭಾಷೆಯಾಗಿ ತಮಿಳು, ಥರವಲ್ಲ ತೆಗಿ ನಿನ್ನ ತಂಬೂರಿ!
* ಎನ್. ತ್ಯಾಗರಾಜಮೂರ್ತಿ
ತಮಿಳನ್ನು ಕರ್ನಾಟಕದಲ್ಲಿ ದ್ವಿತೀಯ ಭಾಷೆಯನ್ನಾಗಿ ಅಂಗೀಕರಿಸುವುದು ಅಗತ್ಯವಿಲ್ಲ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ.
ತಮಿಳುನಾಡಿನಲ್ಲಿ ತೆಲುಗನ್ನು ದ್ವಿತೀಯ ಭಾಷೆಯನ್ನಾಗಿ ಅಂಗೀಕರಿಸುವ ಬಗ್ಗೆ ಕನ್ನಡಿಗರದ್ದು ಯಾವುದೇ ತಕರಾರಿಲ್ಲ . ಇಷ್ಟಕ್ಕೂ ಆ ವಿಷಯ ಕನ್ನಡಿಗರಿಗೆ ಸಂಬಂಧಿಸಿದ್ದೇ ಅಲ್ಲ . ಅದು ಸಂಪೂರ್ಣವಾಗಿ ತಮಿಳರಿಗೆ ಸಂಬಂಧಿಸಿದ ಸಂಗತಿ.
ತಮಿಳರ ವ್ಯವಹಾರಗಳೇನೇ ಇರಲಿ. ಕರ್ನಾಟಕದಲ್ಲಿ ದ್ವಿತೀಯ ಭಾಷೆಯನ್ನಾಗಿ ತಮಿಳನ್ನು ಅಂಗೀಕರಿಸುವುದನ್ನು ನಾವು ತೀವ್ರವಾಗಿ ಪ್ರತಿಭಟಿಸಲೇಬೇಕು. ಕರ್ನಾಟಕದಲ್ಲಿರುವ ತಮಿಳರು ತಮ್ಮ ಮನೆಗಳಲ್ಲಿ ತಮಿಳನ್ನೇ ಬಳಸುತ್ತಾರೆ. ಆದರೆ, ಕನ್ನಡಿಗರು ಯಾವತ್ತೂ ಯಾವುದೇ ಭಾಷೆಯನ್ನು ಅಥವಾ ಭಾಷಿಕರನ್ನು ಅಗೌರವದಿಂದ ಕಂಡಿದ್ದಿಲ್ಲ . ಬದಲಿಗೆ ದೇಶದ ಎಲ್ಲಾ ಭಾಗಗಳ ಜನರಿಗೆ ಕರ್ನಾಟಕ ಆಶ್ರಯ ಒದಗಿಸುತ್ತಾ ಬಂದಿದೆ. ಎಲ್ಲ ರಾಜ್ಯಗಳ ಜನತೆಗೂ ಬೆಂಗಳೂರೆಂದರೆ ಇಷ್ಟ. ಈ ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ಈ ನೆಲದ ಭಾಷೆ ಹಾಗೂ ಸಮೃದ್ಧ ಸಂಸ್ಕೃತಿಯನ್ನು ಹೊಂದಿರುವ ಭಾಷೆಯಾದ ಕನ್ನಡವನ್ನು ಗೌರವಿಸುವುದು, ಪ್ರೀತಿಸುವುದು ಅಗತ. ಕನ್ನಡಕ್ಕಾಗುವ ಯಾವುದೇ ವಿಧವಾದ ಅಗೌರವ ಒಪ್ಪತಕ್ಕದ್ದಲ್ಲ .
ವಾರ್ತಾಸಂಚಯ
ಮುಖಪುಟ / ಸಾಹಿತ್ಯ ಸೊಗಡು![]()
![]()












Click it and Unblock the Notifications