ಯದುಗಿರಿಯ ಮೌನದ ಕೊಳದಲ್ಲಿ ಮತ್ತೊಮ್ಮೆ ಶ್ರೀಹರಿಚರಿತೆಯ ಅಲೆ
ಮೇಲುಕೋಟೆ : ಜಗತ್ಪ್ರಸಿದ್ಧ ಚೆಲುವನಾರಾಯಣ ಮತ್ತೊಂದು ರೋಮಾಂಚನಕ್ಕೆ ರೆಡಿಯಾಗುತ್ತಿದ್ದಾನೆ. ಯದುಗಿರಿಯ ಮೌನ ಕೊಳವೂ ಚೆಲುವನಾರಾಯಣನ ಕಾತರಕ್ಕೆ ಜೊತೆಯಾಗಿದೆ. ಆದರೆ ಈ ಸಂಭ್ರಮಕ್ಕೆ ವೈರಮುಡಿ ಕಾರಣವಲ್ಲ . ಅದಿನ್ನೂ ದೂರವಿದೆ.
ಶ್ರೀಹರಿಚರಿತೆಯ ಕವಿ ಉಳಿಸಿಹೋದ ಪದಗಳ ಪುಳಕಕ್ಕೆ ಮೈಯ್ಯಾಡ್ಡಲು ಮೇಲುಕೋಟೆಯ ಪ್ರತಿಕಣವೂ ಸಿದ್ಧವಾಗಿವೆ. ಇದೇ ಜನವರಿ 30- ಮಂಗಳವಾರ ಚೆಲುವನಾರಾಯಣನೂರಿನಲ್ಲಿ - ವಿವೇಕೋಲ್ಲಾಸಿನಿ ಸಭಾಮಂಟಪದಲ್ಲಿ ನವೋದಯದ ಪ್ರಮುಖ ಕವಿ ಪು.ತಿ. ನರಸಿಂಹಾರ್ ಅವರ ಗೀತಸುಧೆ. ಆಧುನಿಕ ಮಹಾಕಾವ್ಯ ಶ್ರೀಹರಿಚರಿತೆಯ ಬಿತ್ತರ ಮಹತ್ತರಗಳ ಬಗ್ಗೆ ಮಾತುಕತೆ. ನಾಡಿನ ಸಾಹಿತ್ಯಾಸಕ್ತ ಸಹೃದಯರು ಈ ಸಂದರ್ಭದಲ್ಲಿ ಸಾಕ್ಷಿಯಾಗುತ್ತಾರೆ.
ಕಾರ್ಯಕ್ರಮ ನಡೆಯುವುದು ಪುತಿನ ಟ್ರಸ್ಟ್ (ರಿ), ಬೆಂಗಳೂರು ಹಾಗೂ ಕೇಂದ್ರ ಸಾಹಿತ್ಯ ಆಕಾಡೆಮಿಗಳ ಸಂಯುಕ್ತ ಆಶ್ರಯದಲ್ಲಿ . ಕಾರ್ಯಕ್ರಮಕ್ಕೆ ಎರಡು ಮುಖ. ಶ್ರೀಹರಿಚರಿತೆ ಕುರಿತ ವಿಚಾರಸಂಕಿರಣ ಮೊದಲ ಮುಖವಾದರೆ, ಮತ್ತೊಂದು ಮುಖದಲ್ಲಿ ಪ್ರತಿಭಾವಂತೆ ಕವಯತ್ರಿ ಎಚ್.ಎಲ್.ಪುಷ್ಪ ಅವರ ಗಾಜುಗೋಳ ಕವನ ಸಂಕಲನಕ್ಕೆ 1999 ನೇ ಸಾಲಿನ ಪುತಿನ ಕಾವ್ಯ ಪ್ರಶಸ್ತಿ ಪ್ರದಾನ .
ಚಿಂತನ ಮಂಥನ- ಗಾನಗೋಷ್ಠಿ : ವಿಚಾರಗೋಷ್ಠಿ ಎರಡು ಹಂತಗಳಲ್ಲಿ ನಡೆಯುತ್ತದೆ. ವಿಚಾರಗೋಷ್ಠಿ - 1 ರ ಅಧ್ಯಕ್ಷತೆಯನ್ನು ಹಿರಿಯ ಕವಿ ಡಾ. ಜಿ.ಎಸ್. ಶಿವರುದ್ರಪ್ಪ ವಹಿಸುವರು. ಈ ಗೋಷ್ಠಿಯಲ್ಲಿ ಡಾ. ಶ್ರೀರಾಮಭಟ್ಟ ಅವರು ಸಂಸ್ಕೃತ ಭಾಗವತ ಮತ್ತು ಶ್ರೀಹರಿಚರಿತೆ ಬಗ್ಗೆ ಮಾತನಾಡಿದರೆ, ಕನ್ನಡ ಮಹಾಕಾವ್ಯ ಚರಿತ್ರೆ ಮತ್ತು ಶ್ರೀಹರಿಚರಿತೆ ಕುರಿತಂತೆ ಪ್ರೊ. ಎಂ.ಎಚ್. ಕೃಷ್ಣಯ್ಯ ತಮ್ಮ ಅಭಿಪ್ರಾಯ ಮಂಡಿಸುವರು.
ಪ್ರೊ. ಸುಜನಾ ಅವರ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ - 2 ನಡೆಯುತ್ತದೆ. ಈ ಗೋಷ್ಠಿಯಲ್ಲಿ ಹರಿದಾಸರ ಕೀರ್ತನೆ ಮತ್ತು ಶ್ರೀಹರಿಚರಿತೆ ಬಗ್ಗೆ ಡಾ.ಎಚ್.ಎಸ್.ವೆಂಕಟೇಶಮೂರ್ತಿ ವಿಷಯ ಮಂಡಿಸುವರು. ಪ್ರೊ. ಚಿ. ಶ್ರೀನಿವಾಸರಾಜು, ಗೋಕುಲ ನಿರ್ಗಮನ ಮತ್ತು ಶ್ರೀಹರಿಚರಿತೆ ಕುರಿತು ಮಾತನಾಡುವರು. ಅಂದಹಾಗೆ, ಇಡೀ ಕಾರ್ಯಕ್ರಮಕ್ಕೆ ಪ್ರಸ್ತಾವನೆಯ ಕವಚ ತೊಡಿಸುವ ಕೆಲಸ ಅಗ್ರಹಾರ ಕೃಷ್ಣ ಮೂರ್ತಿ ಅವರದ್ದು . ಕೆ.ಎಸ್. ಅಚ್ಯುತನ್ ವಂದನೆ ಸಲ್ಲಿಸುವರು.
ಹಾಡು ಹೊನಲು : ಎರಡು ಕಂತುಗಳ ವಿಚಾರ ಮಂಥನದ ನಂತರ ಮನಸ್ಸಿಗೆ ಲಗ್ಗೆ ಹಾಕುವ ಕೊನೆಯ ಸರದಿ ಮೈಥಿಲಿ ಮಂಡ್ಯಂ ಹಾಗೂ ಅವರ ತಂಡದ್ದು . ಪುತಿನ ಅವರ ಕೃಷ್ಣ ಭಕ್ತಿ , ಭಾವಗೀತ ಯದುಗಿರಿಯ ಮೌನ ಕೊಳವನ್ನು ಕದಡಿ ಅಲ್ಲೇ ಲೀನವಾಗುವುವು.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications