ಯಾವ ಸೀಮೆಯ ವೀರಪ್ಪ?
*ಮೈ.ಶ್ರೀ. ನಟರಾಜ
ನೀನ್ಯಾವ ಸೀಮೆ ವೀರಪ್ಪ ?
ಮೀಸೆ ಮಾತ್ರ ಜೋರಪ್ಪ
ಆನೆ ದಂತ ಚೋರಪ್ಪ
ಕಾಡಲಿ ಅವಿತು ಕೂರಪ್ಪ
ದಮ್ಮಿದ್ರೆ ಊರಿಗೆ ಬಾರಪ್ಪ
ಪುಡಾರಿ ಗುಂಪಿಗೆ ಸೇರಪ್ಪ
ಓಟಿಗೆ ನಿಂತು ಗೆಲ್ಲಪ್ಪ
ಕಣ್ಣಾ ಮುಚ್ಚಾಲೆ ಯಾಕಪ್ಪ
ನಮ್ಮಯ ಪ್ರೀತಿಯ ಅಣ್ಣಾವ್ರು
ಕನ್ನಡ ನಾಡಿಗೆ ದೊಡ್ಡವ್ರು
ಯಾರಿಗೂ ತೊಂದ್ರೆ ಕೊಡದವ್ರು
ಎಲ್ಲರ ಗೌರವ ಪಡೆದವ್ರು
ಎಲ್ಲರ್ನೂ ಬಿಟ್ಟು ಅವರನ್ಯಾಕ್ ಹಿಡ್ದೆ ?
ಒಳ್ಳೆಯವರನ್ ಸತಾಯಿಸಿ ಏನ್ ಕಡ್ದೆ ?
ಇಬ್ರನ್ ಬಿಟ್ಟು ಅಣ್ಣಾವ್ರನ್ ಬಿಡದೆ
ಹಬ್ಬ ಹರಿದಿನ ಇಲ್ಲದಂಗ್ ಮಾಡ್ದೆ
ಕನ್ನಡ ಜನರನು ಕೆಣಕದಿರೋ,
ತಾಳಮೆ ಪರೀಕ್ಷಿಸಿ ಮರುಗದಿರೋ
ನಕ್ಕೀರ ಪಕ್ಕೀರ ಎನ್ನದಿರೋ
ಬೂಟಾಟಿಕೆ ನಾಟಕ ಮಾಡದಿರೋ
ಎಲ್ಲಿಂದ ಕದ್ಯೋ ಅಲ್ಗೇ ತಂದು
ಅಣ್ಣಾವ್ರನ್ನು ಬಿಟ್ಟು ತಪ್ಪಾಯ್ತು ಅನ್ನು
ಕಾನೂನಿನ ಕಾಲಿಗ್ ಶರಣು ಅಂದು
ಹರಣದ್ ಕತೇನ ಮುಗಿಸೋ ಇನ್ನು
ಮುಖಪುಟ / ಸಾಹಿತ್ಯ ಸೊಗಡು![]()
![]()












Click it and Unblock the Notifications