Get Updates
Get notified of breaking news, exclusive insights, and must-see stories!

ಬಾಗಲಕೋಟೆಯಲ್ಲಿ ಇವತ್ತು

ಬಾಗಲಕೋಟೆ : ಭಾನುವಾರದಂದು ಸಾಹಿತ್ಯ ಸಮ್ಮೇಳನ ವೇದಿಕೆಯಲ್ಲಿ ಕನ್ನಡ ಕಾವ್ಯ, ಕಾದಂಬರಿ ಮತ್ತು ಸಣ್ಣ ಕತೆ ಕ್ಷೇತ್ರದಲ್ಲಿ ನಡೆದ ಸಾಹಿತ್ಯ ಕೃಷಿಯ ಬಗ್ಗೆ ಮೂರು ದೀರ್ಘ ಗೋಷ್ಠಿಗಳು ನಡೆದವು.

ಬೆಳಗಿನ ಕಾವ್ಯ ಗೋಷ್ಠಿಯಲ್ಲಿ , ಕನ್ನಡದ ಪ್ರಮುಖ ಹಿರಿಯ ಕವಿಗಳ ಕಾವ್ಯ ರಚನಾ ಪ್ರಕ್ರಿಯೆಯಲ್ಲಿ ವ್ಯಕ್ತವಾದ ಕಾಳಜಿ, ಬಿಂಬಿಸಿದ ಸೌಂದರ್ಯ ಮತ್ತು ಅವುಗಳ ಶ್ರೇಷ್ಠತೆಯ ಕುರಿತು ಚರ್ಚೆ ನಡೆಯಿತು. ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ದಲಿತ ಕವಿ ಪ್ರೊ.ಜಿ.ಎಸ್‌.ಸಿದ್ಧಲಿಂಗಯ್ಯ 250 ವರ್ಷಗಳ ಅವಧಿಯಲ್ಲಿ ಕನ್ನಡ ಕಾವ್ಯ ಪ್ರಕಾರವು ಹೊಸ ಚಳವಳಿ, ಕ್ರಾಂತಿಗಳನ್ನು ಕಂಡುಂಡು ಸಮೃದ್ಧವಾಗಿ ಬೆಳೆದಿದೆ ಎಂದರು. ಅಡಿಗ, ಕುವೆಂಪು, ಮತ್ತು ಬೇಂದ್ರೆಯ ಕಾವ್ಯ ಕೃಷಿಯಲ್ಲಿ ಪ್ರೌಢತೆಯಿದ್ದು , ಇವರ ಜೊತೆಗೆ ಮಾಸ್ತಿಯವರ ಕಥನ ಕಾವ್ಯವೂ ವಿಶ್ವ ಶ್ರೇಷ್ಠ ಸಾಹಿತ್ಯದ ಸಾಲಿನಲ್ಲಿ ನಿಲ್ಲುತ್ತದೆ ಎಂದರು. ರಾಷ್ಟ್ರ ಕವಿ ಗೋವಿಂದ ಪೈ ಸಾಹಿತಿ ಮಾತ್ರವಲ್ಲದೆ ವಿದ್ವಾಂಸರಾಗಿದ್ದರು. ಅವರ ಗೋಲ್ಗೋಥಾ ಮತ್ತು ವೈಶಾಖ ಕನ್ನಡ ಕಾವ್ಯ ಬೆಳೆಯಬೇಕಾದ ಪಥವನ್ನು ತೋರಿಸಿಕೊಟ್ಟಿದೆ ಎಂದು ವಿಶ್ಲೇಷಿಸಿದರು.

ಕಾದಂಬರಿ ಬೆಳವಣಿಗೆಗೆ ಬದುಕಿನ ವೇಗ ಅಡ್ಡ

ಕಾದಂಬರಿ ಕ್ಷೇತ್ರದ ಬೆಳವಣಿಗೆಯ ವೇಗ ಕಡಿಮೆಯಾಗಿದ್ದರೂ ಬೆಳಕಿಗೆ ಬಂದಿರುವ ಕಾದಂಬರಿಗಳ ಗುಣಮಟ್ಟ ಕುಸಿದಿಲ್ಲ ಎಂದು ಗೋಷ್ಠಿಯ ಅಧ್ಯಕ್ಷತೆ ವಹಿಸಿದ ಡಾ. ಎಂ.ಜಿ. ಬಿರಾದಾರ ಹೇಳಿದರು. ಜನಪ್ರಿಯತೆಯನ್ನು ಪಡೆದುಕೊಂಡ ಸಾಹಿತ್ಯ ಪ್ರಕಾರವಾಗಿದ್ದರೂ ಕಾದಂಬರಿಗಳನ್ನು ಪ್ರಕಟಿಸುವುದುಕ್ಕೆ ಪ್ರಕಾಶಕರೂ ಮುಂದೆ ಬರದಿರುವುದು ಈ ಪ್ರಕಾರ ಬೆಳೆಯದಿರಲು ಒಂದು ಕಾರಣ ಎಂದ ಬಿರಾದಾರ ಸಾಕಷ್ಟು ಜನಪ್ರಿಯ ಕಾದಂಬರಿಗಳನ್ನು ಬರೆದ ಎಸ್‌.ಎಲ್‌. ಭೈರಪ್ಪ ಅವರ ಕಾದಂಬರಿಯ ಬಗ್ಗೆ ಮಾತನಾಡುತ್ತಾ, ಭೈರಪ್ಪನವರ ಜನಪ್ರಿಯತೆಯ ಬಗ್ಗೆ ಮತ್ಸ ರದಿಂದ ಮಾತನಾಡುವುದು, ಅವರ ಕಾದಂಬರಿಯಲ್ಲಿ ಪ್ರತಿಗಾಮಿತನ ಇದೆ ಎಂದು ಹೇಳುವುದು ತಪ್ಪು ಎಂದರು. ನಿರಂಜನ ಅವರು ಬಂಡಾಯ ಚಿಂತನೆಯ ಕಾದಂಬರಿಯನ್ನು ಬರೆದರೆ, ಅನಕೃ ಪ್ರಗತಿಶೀಲ ಚಳುವಳಿಯನ್ನು ಹುಟ್ಟು ಹಾಕಿದರು. ಆದರೂ ಉತ್ತಮ ಕಾದಂಬರಿಗಳು ಕನ್ನಡದಲ್ಲಿ ವಿರಳವಾಗಿದೆ. ಅಲ್ಲದೆ ಕಾದಂಬರಿ ಪ್ರಕಾರ ಬೆಳೆಯುವುದಕ್ಕೆ ತ್ವರಿತ ಗತಿಯಲ್ಲಿ ಬದಲಾಗುತ್ತಿರುವ ಬದುಕಿನ ಶೈಲಿ, ವೇಗ ಅಡ್ಡವಾಗುತ್ತಿವೆ ಎಂದರು.

ಮಾಸ್ತಿ ಕತೆಗಳ ಕ್ಯಾನ್ವಾಸ್‌ ಯಾರಿಗೂ ದಕ್ಕಿಲ್ಲ

ಸಣ್ಣ ಕತೆಯ ಬಗ್ಗೆ ನಡೆದ ಗೋಷ್ಠಿಯಲ್ಲಿ , ಬದುಕಿನ ತಲ್ಲಣ , ನೋವುಗಳು ಅನುಭವ ಮತ್ತು ಸ್ಪಂದನವಾಗಿ ಕನ್ನಡದಲ್ಲಿ ಸಾಕಷ್ಟು ಕತೆಗಳು ಬಂದಿವೆ. ಸಣ್ಣ ಕತೆಗಳ ಜನಕ ಮಾಸ್ತಿಯಿಂದ ಹಿಡಿದು ಕುಂದಾಪುರ ಕನ್ನಡದ ಸೊಗಡಿನಲ್ಲಿ ಕತೆ ಬರೆದ ವೈದೇಹಿಯವರೆಗೆ ಕತಾ ಲೋಕದಲ್ಲಿ ವೈವಿಧ್ಯಮಯ ಕತೆಗಳು ಬಂದಿವೆ ಎಂದು ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಪ್ರೊ.ಬಿ.ಎ. ವಿವೇಕ ರೈ ಹೇಳಿದರು. ಗೊರೂರು, ಕೆ.ಸದಾಶಿವ, ಮತ್ತು ಚಿತ್ತಾಲರ ಸಣ್ಣ ಕತೆಗಳ ಕುರಿತು ಪ್ರಬಂಧ ಮಂಡಿಸಿದ ಪ್ರೊ.ಸಿ.ವಿ. ಪಾಟೀಲ್‌ ಇವರೆಲ್ಲರೂ ವ್ಯಕ್ತಿ ಕೇಂದ್ರಿತ ಚಿಂತನೆಯ ಮೂಲಕ ಸಮಷ್ಠಿ ಚಿಂತನೆಯ ಕತೆಗಳನ್ನು ಬರೆದವರು ಎಂದು ಹೇಳಿದರು.

ಮಾಸ್ತಿವಯವರ ಕತೆಗಳ ಕ್ಯಾನ್ವಾಸ್‌ ಮತ್ತೆ ಯಾವ ಕನ್ನಡದ ಕತೆಗಾರನಿಗೂ ದಕ್ಕಲಿಲ್ಲ ಎನ್ನುವ ಅಭಿಪ್ರಾಯ ಗೋಷ್ಠಿಯಲ್ಲಿ ವ್ಯಕ್ತವಾಯಿತು. ಅದೇ ರೀತಿ ದೇವನೂರು ಮಹಾದೇವರ ಮೊದಲ ಒಂದೆರಡು ಕತೆಗಳನ್ನು ಬಿಟ್ಟರೆ ಉಳಿದ ಕತೆಗಳಲ್ಲಿ ದೇವನೂರು ಬದುಕನ್ನು ಹಾಸ್ಯ, ವ್ಯಂಗ್ಯಗಳ ಮೂಲಕ ಕಾಣುತ್ತಾರೆ ಎನ್ನುವ ಅಭಿಪ್ರಾಯವೂ ವ್ಯಕ್ತವಾಯಿತು.

ಕವಿಗೋಷ್ಠಿ ಯಲ್ಲಿ ನಡೆದದ್ದು ಗದ್ದಲ

ಸಂಜೆ ನಡೆದ ಕವಿಗೋಷ್ಠಿ ಜನರ ಗದ್ದಲದ ನಡುವೆ ಅಪೂರ್ಣಗೊಂಡಿತು. ಗೋಷ್ಠಿಯಲ್ಲಿ ಜನಪ್ರಿಯ, ಹಿರಿಯ ಕವಿಗಳು ಭಾಗವಹಿಸದ ಕಾರಣ ನಿರಾಶರಾದ ಜನರು ಕವಿಗೋಷ್ಠಿಯ ಬಗೆಗೆ ಆಕ್ರೋಶ ವ್ಯಕ್ತಪಡಿಸಿದರು. ಅಧ್ಯಕ್ಷರಿಗೆ ಕೂಡ ಭಾಷಣ ಮಾಡಲು, ಕವಿತೆ ಓದಲು ಅಡ್ಡಿಪಡಿಸಿದರು. ವಿಶೇಷ ಉಪನ್ಯಾಸಗಳು ಕೂಡ ಹೊಸ ವಿಷಯಗಳ ಮಂಡನೆ ಹಾಗೂ ಚರ್ಚೆಗೆ ಅವಕಾಶ ಕೊಡದೆ ಮುಗಿದದ್ದು ಜನರನ್ನು ನಿರಾಶೆಗೊಳಿಸಿತು.

ಸಾಹಿತ್ಯ ಸೊಗಡು / ನಡೀರಿ ಹೋಗೋಣ ಬಾಗಲಕೋಟೆಗೆ / ಫೀಡ್‌ಬ್ಯಾಕ್‌
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+