ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಹಿತ್ಯ ಸಮ್ಮೇಳನ ಕಳೆದ 67 ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. 1915ರಲ್ಲಿ ಬೆಂಗಳೂರಲ್ಲಿ ನಡೆದ ಮೊದಲ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷ ರಾಗಿದ್ದ ಎಚ್‌.ವಿ. ನಂಜುಂಡಯ್ಯನವರಿಂದ ಹಿಡಿದು ಕಳೆದವರ್ಷ ಕನಕಪುರದಲ್ಲಿ ಸಮ್ಮೇಳನಾಧ್ಯಕ್ಷರಾಗಿದ್ದ ಎಸ್‌. ಎಲ್‌. ಭೈರಪ್ಪನವರ ತನಕ, ಕನಿಷ್ಠ 60 ಸಾಹಿತಿಗಳು ಈ ಪಟ್ಟವನ್ನು ಅಲಂಕರಿಸಿದ್ದಾರೆ. ಕನಕಪುರಕ್ಕೂ ಬೆಂಗಳೂರಿಗೂ ಅಂಥ ದೂರವೇನಿಲ್ಲ. ಅಂದರೆ ಸಾಹಿತ್ಯ ಸಮ್ಮೇಳನ ಅರುವತ್ತೇಳು ವರ್ಷಗಳ ನಂತರವೂ ಸಾಕಷ್ಟು ದೂರ ಕ್ರಮಿಸಿಲ್ಲ ಎಂದು ಉಪಮಾತ್ಮಕವಾಗಿ ಗ್ರಹಿಸಿಕೊಳ್ಳಬಹುದು. ಇದೀಗ ಅರುವತ್ತೆಂಟನೆಯ ಸಮ್ಮೇಳನ ಬೆಂಗಳೂರಿಗಿಂತ ಅರೆ ಸಾವಿರ ಮೈಲು ದೂರದ ಬಾಗಲಕೋಟೆಯಲ್ಲಿ ನಡೆಯುತ್ತಿದೆ. ಇದನ್ನು ಹೇಗೆ ರೂಪಕವಾಗಿಸುವುದು ನೀವೇ ಹೇಳಿ ?ಸಾಹಿತ್ಯ ಸಮ್ಮೇಳನಗಳು ಕೊನೆಗೂ ಏನಾಗಿರಬೇಕು ? ವಿದ್ವಜ್ಜನರ ಗೋಷ್ಠಿಯೇ ? ಬಲ್ಲವರ ನೆರವಿಯೇ ? ಸಂವಾದಕ್ಕೊಂದು ಸಂದರ್ಭವೇ ? ಚರ್ಚೆಗೊಂದು ಮಂಚವೇ ? ರಂಗೇರಿಸುವ ರಂಗವೇ ? ಈ ಪ್ರಶ್ನೆಗಳನ್ನು ತಾಯಿ ಭವನೇಶ್ವರಿಯೂ ಕೇಳಲಿಲ್ಲ. ನಾವ್ಯಾರೂ ಉತ್ತರಿಸುವ ಗೋಜಿಗೇ ಹೋಗಲಿಲ್ಲ. ಅದೊಂದು ಜಾತ್ರೆಯಾಗಬೇಕು ಎಂದು ಬಲವಾಗಿ ನಂಬಿದ ಬರಗೂರು ರಾಮಚಂದ್ರಪ್ಪನವರಂಥ ಬಂಡಾಯ ಸಾಹಿತಿಗಳಿದ್ದಾರೆ. ಕವಿಕೋಗಿಲೆಗಳ ಪುಣ್ಯಾ ರಾಮ ಆಗಲಿ ಎಂದು ಹಾರೈಸುವ ಕಾವ್ಯಜೀವಿಗಳಿದ್ದಾರೆ. ಮಾತಿನ ಮಂಟಪವಾಗಲಿ ಎಂದು ಬಯಸುವ ಲಕ್ಷ್ಮೀ ನಾರಾಯಣ ಭಟ್ಟ, ಬಿ.ಸಿ. ರಾಮಚಂದ್ರ ಶರ್ಮರಂಥ ಜಿಹ್ವಾಗ್ರೇಸರರಿದ್ದಾರೆ. ಆದರೆ, ನಮ್ಮ ಅರುವತ್ತೇಳು ಸಮ್ಮೇಳನಗಳ ಪೈಕಿ ಒಂದಾದರೂ, ಹೊಸ ಸಾಹಿತ್ಯ ಚಳುವಳಿಗೆ ಕಾರಣವಾಗಿಯೇ ? ಅಧ್ಯಕ್ಷ ಪಟ್ಟಕ್ಕಾಗಿ ನಡೆಯುವ ಲಾಬಿ, ಜಾತಿ ರಾಜಕೀಯ, ನಂತರ ಗೋಷ್ಠಿಗಳಲ್ಲಿ ಭಾಗವಹಿಸಲು ನಡೆಯುವ ಗಲಾಟೆ, ಊಟ, ತಿಂಡಿ, ವಸತಿ ಸಿಕ್ಕಿಲ್ಲವೆಂಬ ಕೂಗು, ಕಡೆಗಣಿಸಲಾಗಿದೆ ಎಂಬ ಆರೋಪ- ಇವುಗಳಿಂದಾಚೆ ಈ ಸಮ್ಮೇಳನ ಯಾವತ್ತಾದರೂ ಹೊರಬಂದಿದೆಯಾ ?ಇದು ಇವತ್ತಿನ ಸಮಸ್ಯೆಯಲ್ಲ. 1921ರಷ್ಟು ಹಿಂದೆಯೇ ಚಿಕ್ಕಮಗಳೂರಲ್ಲಿ ನಡೆದ ಏಳನೆಯ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕತ್ಷರಾಗಿದ್ದವರು ಕೆ.ಪಿ. ಪುಟ್ಟಣ್ಣ ಶೆಟ್ಟರು. ‘ನಮ್ಮಲ್ಲಿ ಸಾಹಿತ್ಯ ಪ್ರಚಾರ ಜ್ಞಾನ ಹಡಲಿ, ಕನ್ನಡಿಗರು ಮುಂದಕ್ಕೆ ಬರಲಿ, ಕನ್ನಡ ಬಾಳು ಬೆಳೆಯಲಿ’ ಎಂದು ಹಾರೈಸಿದ್ದನ್ನು ಬಿಟ್ಟರೆ ಅವರಿಗೂ ಸಾಹಿತ್ಯಕ್ಕೂ ಏನು ಸಂಬಂಧವೋ ಪುಟ್ಟರಂಗನೇ ಬಲ್ಲ ! ಹರಕೆಯಿಂದ ಸಾಹಿತ್ಯ ಬೆಳೆಯುವಂತಾಗಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ಆ ಕಾಲದ ಸಾಹಿತಿಗಳಿಗೆ ಅನ್ನಿಸಿರಬಹುದು. ಶರಣಾಗತಿಯಿಂದ ಅದು ಬೆಳೆಯುವಂತಾಗಲಿ ಎಂದು ಈ ಕಾಲದವರಿಗೆ ಅನ್ನಿಸುತ್ತಿರುವ ಹಾಗೆ ! ಇಂತಿಪ್ಪ ಪರಿಸ್ಥಿತಿಗಳ ನಡುವೆ ಸಾಹಿತ್ಯ ಸಮ್ಮೇಳನಗಳು ನಡೆಯುತ್ತವೆ. ನಾಡ ನುಡಿಯ ಏಳಿಗೆಗೆ ಅಲ್ಲಿ ನಿರ್ಣಯಗಳನ್ನು ಕೈಗೊಳ್ಳಲಾಗುತ್ತದೆ. ಹಾಗೆ ನಿರ್ಣಯಗಳನ್ನು ಮಂಡಿಸುವವರೂ , ಅನುಮೋದಿಸಿ ಮಂಜೂರು ಮಾಡುವ ಅಧ್ಯಕ್ಷರೂ ಆ ಹೊತ್ತಿಗೆ ಒಂದು ಕಾಲು ಜಗತ್ತಿನಾಚೆ ಇಟ್ಟವರೇ ಆಗಿರುತ್ತಾರೆ. ಹೀಗಾಗಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು ಎಂಬ ಸಾಲು ಅವರ ಶ್ರದ್ಧಾಂಜಲಿಯಲ್ಲಿ ಅದೆಷ್ಟೋ ವರ್ಷಗಳ ನಂತರ ಕಾಣಿಸಿಕೊಳ್ಳುತ್ತದೆಯೇ ವಿನಾ, ಅವರು ತಾವೇ ಮಾಡಿದ ನಿರ್ಣಯಗಳನ್ನು ಮತ್ತೊಮ್ಮೆ ಕೇಳಿಸಿಕೊಳ್ಳುವ ತಪ್ಪು ಮಾಡುವುದಿಲ್ಲ. 70 ಸಮೀಪಿಸದ ಹೊರತು ಅಧ್ಯಕ್ಷ ಪಟ್ಟ ಸಿಗದಿರುವಾಗ, ಆ ವಯಸ್ಸಿನಲ್ಲಿ ನಿರ್ಣಯಗಳನ್ನು ಕೈಗೊಳ್ಳುವ ಅವರನ್ನು ನಾವು ಒತ್ತಾಯಿಸುವ ಹಾಗೂ ಇಲ್ಲ. ಹೀಗಾಗಿ ವರ್ಷಕ್ಕೊಮ್ಮೆ ನಡೆಯುವ ಸಾಹಿತ್ಯ ಸಮ್ಮೇಳನಗಳ ಅರ್ಥವಾದರೂ ಏನು ? ಸಾಹಿತ್ಯಕ್ಕೂ ಸಮ್ಮೇಳನಕ್ಕೂ ಏನು ಸಂಬಂಧ ? ಹಿಂದಿನ ವರ್ಷ ಚರ್ಚಿತವಾದ ವಿಚಾರವನ್ನು ಮುಂದಿನ ಬಾರಿಯೂ ಎತ್ತಿಕೊಂಡು, ಆ ದಿಸೆಯಲ್ಲಿ ಏನೇನಾಗಿದೆ ಎಂದು ಯಾರೊಬ್ಬರಾದರೂ ತಾಳೆ ನೋಡುತ್ತಾರೆಯೇ ? ಕನ್ನಡ ಸಾಹಿತ್ಯ ನಿಂತ ನೀರಾಗಿದೆಯೇ ಎಂದು ಕೇಳುವವರಿಗೆ ಅದು ಯಾವಾಗ ಹರಿಯುವ ನದಿಯಾಗಿತ್ತು ಎನ್ನುವುದು ಗೊತ್ತಿರುತ್ತದೆಯೇ ? ಹೊಸ ನೀರು ಬಂದ ಘಳಿಗೆಯ ಅರಿವಿರುತ್ತದೆಯೇ ? ಹಾಗೆ ನೋಡಿದರೆ ನಮ್ಮ ಪ್ರಮುಖ ಚಳುವಳಿಗಳಿಗೂ ಸಮ್ಮೇಳನಕ್ಕೂ ಸಂಬಂಧವೇ ಇಲ್ಲ. ಅದೊಂದು ಅನಿವಾರ್ಯ ಸರ್ಕಾರಿ ಉತ್ಸವ. ನಾಡು ನುಡಿಯ ಘೋಷಣೆಯ ಬಗ್ಗೆ ಸರ್ಕಾರ ತೋರಿಸುವ ಕನಿಷ್ಠ ಕಾಳಜಿಗೆ ಕನ್ನಡಿ. ಅದು ಯಾವತ್ತೋ ಪಾದರಸ ಕಳಕೊಂಡು, ಪ್ರತಿಫಲಿಸುವ ಶಕ್ತಿಯನ್ನೂ ಕಳಕೊಂಡ ಕನ್ನಡಿ. ಈ ಕಡೆಯಿಂದ ನೋಡಿದವನಿಗೆ ಆ ಕಡೆ ನಿಂತ ಕವಿ ಕಾಣಿಸುತ್ತಾನೆ. ಅದರಲ್ಲೂ ಧಾರವಾಡದಂಥ ಊರುಗಳಲ್ಲಿ every third man is a poet

By Staff
|
Google Oneindia Kannada News

ಸಾಹಿತ್ಯ ಸಮ್ಮೇಳನ ಕಳೆದ 67 ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. 1915ರಲ್ಲಿ ಬೆಂಗಳೂರಲ್ಲಿ ನಡೆದ ಮೊದಲ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷ ರಾಗಿದ್ದ ಎಚ್‌.ವಿ. ನಂಜುಂಡಯ್ಯನವರಿಂದ ಹಿಡಿದು ಕಳೆದವರ್ಷ ಕನಕಪುರದಲ್ಲಿ ಸಮ್ಮೇಳನಾಧ್ಯಕ್ಷರಾಗಿದ್ದ ಎಸ್‌. ಎಲ್‌. ಭೈರಪ್ಪನವರ ತನಕ, ಕನಿಷ್ಠ 60 ಸಾಹಿತಿಗಳು ಈ ಪಟ್ಟವನ್ನು ಅಲಂಕರಿಸಿದ್ದಾರೆ. ಕನಕಪುರಕ್ಕೂ ಬೆಂಗಳೂರಿಗೂ ಅಂಥ ದೂರವೇನಿಲ್ಲ. ಅಂದರೆ ಸಾಹಿತ್ಯ ಸಮ್ಮೇಳನ ಅರುವತ್ತೇಳು ವರ್ಷಗಳ ನಂತರವೂ ಸಾಕಷ್ಟು ದೂರ ಕ್ರಮಿಸಿಲ್ಲ ಎಂದು ಉಪಮಾತ್ಮಕವಾಗಿ ಗ್ರಹಿಸಿಕೊಳ್ಳಬಹುದು. ಇದೀಗ ಅರುವತ್ತೆಂಟನೆಯ ಸಮ್ಮೇಳನ ಬೆಂಗಳೂರಿಗಿಂತ ಅರೆ ಸಾವಿರ ಮೈಲು ದೂರದ ಬಾಗಲಕೋಟೆಯಲ್ಲಿ ನಡೆಯುತ್ತಿದೆ. ಇದನ್ನು ಹೇಗೆ ರೂಪಕವಾಗಿಸುವುದು ನೀವೇ ಹೇಳಿ ?

ಸಾಹಿತ್ಯ ಸಮ್ಮೇಳನಗಳು ಕೊನೆಗೂ ಏನಾಗಿರಬೇಕು ? ವಿದ್ವಜ್ಜನರ ಗೋಷ್ಠಿಯೇ ? ಬಲ್ಲವರ ನೆರವಿಯೇ ? ಸಂವಾದಕ್ಕೊಂದು ಸಂದರ್ಭವೇ ? ಚರ್ಚೆಗೊಂದು ಮಂಚವೇ ? ರಂಗೇರಿಸುವ ರಂಗವೇ ?

ಈ ಪ್ರಶ್ನೆಗಳನ್ನು ತಾಯಿ ಭವನೇಶ್ವರಿಯೂ ಕೇಳಲಿಲ್ಲ. ನಾವ್ಯಾರೂ ಉತ್ತರಿಸುವ ಗೋಜಿಗೇ ಹೋಗಲಿಲ್ಲ. ಅದೊಂದು ಜಾತ್ರೆಯಾಗಬೇಕು ಎಂದು ಬಲವಾಗಿ ನಂಬಿದ ಬರಗೂರು ರಾಮಚಂದ್ರಪ್ಪನವರಂಥ ಬಂಡಾಯ ಸಾಹಿತಿಗಳಿದ್ದಾರೆ. ಕವಿಕೋಗಿಲೆಗಳ ಪುಣ್ಯಾ ರಾಮ ಆಗಲಿ ಎಂದು ಹಾರೈಸುವ ಕಾವ್ಯಜೀವಿಗಳಿದ್ದಾರೆ. ಮಾತಿನ ಮಂಟಪವಾಗಲಿ ಎಂದು ಬಯಸುವ ಲಕ್ಷ್ಮೀ ನಾರಾಯಣ ಭಟ್ಟ, ಬಿ.ಸಿ. ರಾಮಚಂದ್ರ ಶರ್ಮರಂಥ ಜಿಹ್ವಾಗ್ರೇಸರರಿದ್ದಾರೆ.

ಆದರೆ, ನಮ್ಮ ಅರುವತ್ತೇಳು ಸಮ್ಮೇಳನಗಳ ಪೈಕಿ ಒಂದಾದರೂ, ಹೊಸ ಸಾಹಿತ್ಯ ಚಳುವಳಿಗೆ ಕಾರಣವಾಗಿಯೇ ? ಅಧ್ಯಕ್ಷ ಪಟ್ಟಕ್ಕಾಗಿ ನಡೆಯುವ ಲಾಬಿ, ಜಾತಿ ರಾಜಕೀಯ, ನಂತರ ಗೋಷ್ಠಿಗಳಲ್ಲಿ ಭಾಗವಹಿಸಲು ನಡೆಯುವ ಗಲಾಟೆ, ಊಟ, ತಿಂಡಿ, ವಸತಿ ಸಿಕ್ಕಿಲ್ಲವೆಂಬ ಕೂಗು, ಕಡೆಗಣಿಸಲಾಗಿದೆ ಎಂಬ ಆರೋಪ- ಇವುಗಳಿಂದಾಚೆ ಈ ಸಮ್ಮೇಳನ ಯಾವತ್ತಾದರೂ ಹೊರಬಂದಿದೆಯಾ ?

ಇದು ಇವತ್ತಿನ ಸಮಸ್ಯೆಯಲ್ಲ. 1921ರಷ್ಟು ಹಿಂದೆಯೇ ಚಿಕ್ಕಮಗಳೂರಲ್ಲಿ ನಡೆದ ಏಳನೆಯ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕತ್ಷರಾಗಿದ್ದವರು ಕೆ.ಪಿ. ಪುಟ್ಟಣ್ಣ ಶೆಟ್ಟರು. ‘ನಮ್ಮಲ್ಲಿ ಸಾಹಿತ್ಯ ಪ್ರಚಾರ ಜ್ಞಾನ ಹಡಲಿ, ಕನ್ನಡಿಗರು ಮುಂದಕ್ಕೆ ಬರಲಿ, ಕನ್ನಡ ಬಾಳು ಬೆಳೆಯಲಿ’ ಎಂದು ಹಾರೈಸಿದ್ದನ್ನು ಬಿಟ್ಟರೆ ಅವರಿಗೂ ಸಾಹಿತ್ಯಕ್ಕೂ ಏನು ಸಂಬಂಧವೋ ಪುಟ್ಟರಂಗನೇ ಬಲ್ಲ ! ಹರಕೆಯಿಂದ ಸಾಹಿತ್ಯ ಬೆಳೆಯುವಂತಾಗಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ಆ ಕಾಲದ ಸಾಹಿತಿಗಳಿಗೆ ಅನ್ನಿಸಿರಬಹುದು. ಶರಣಾಗತಿಯಿಂದ ಅದು ಬೆಳೆಯುವಂತಾಗಲಿ ಎಂದು ಈ ಕಾಲದವರಿಗೆ ಅನ್ನಿಸುತ್ತಿರುವ ಹಾಗೆ !

ಇಂತಿಪ್ಪ ಪರಿಸ್ಥಿತಿಗಳ ನಡುವೆ ಸಾಹಿತ್ಯ ಸಮ್ಮೇಳನಗಳು ನಡೆಯುತ್ತವೆ. ನಾಡ ನುಡಿಯ ಏಳಿಗೆಗೆ ಅಲ್ಲಿ ನಿರ್ಣಯಗಳನ್ನು ಕೈಗೊಳ್ಳಲಾಗುತ್ತದೆ. ಹಾಗೆ ನಿರ್ಣಯಗಳನ್ನು ಮಂಡಿಸುವವರೂ , ಅನುಮೋದಿಸಿ ಮಂಜೂರು ಮಾಡುವ ಅಧ್ಯಕ್ಷರೂ ಆ ಹೊತ್ತಿಗೆ ಒಂದು ಕಾಲು ಜಗತ್ತಿನಾಚೆ ಇಟ್ಟವರೇ ಆಗಿರುತ್ತಾರೆ. ಹೀಗಾಗಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು ಎಂಬ ಸಾಲು ಅವರ ಶ್ರದ್ಧಾಂಜಲಿಯಲ್ಲಿ ಅದೆಷ್ಟೋ ವರ್ಷಗಳ ನಂತರ ಕಾಣಿಸಿಕೊಳ್ಳುತ್ತದೆಯೇ ವಿನಾ, ಅವರು ತಾವೇ ಮಾಡಿದ ನಿರ್ಣಯಗಳನ್ನು ಮತ್ತೊಮ್ಮೆ ಕೇಳಿಸಿಕೊಳ್ಳುವ ತಪ್ಪು ಮಾಡುವುದಿಲ್ಲ. 70 ಸಮೀಪಿಸದ ಹೊರತು ಅಧ್ಯಕ್ಷ ಪಟ್ಟ ಸಿಗದಿರುವಾಗ, ಆ ವಯಸ್ಸಿನಲ್ಲಿ ನಿರ್ಣಯಗಳನ್ನು ಕೈಗೊಳ್ಳುವ ಅವರನ್ನು ನಾವು ಒತ್ತಾಯಿಸುವ ಹಾಗೂ ಇಲ್ಲ. ಹೀಗಾಗಿ ವರ್ಷಕ್ಕೊಮ್ಮೆ ನಡೆಯುವ ಸಾಹಿತ್ಯ ಸಮ್ಮೇಳನಗಳ ಅರ್ಥವಾದರೂ ಏನು ? ಸಾಹಿತ್ಯಕ್ಕೂ ಸಮ್ಮೇಳನಕ್ಕೂ ಏನು ಸಂಬಂಧ ? ಹಿಂದಿನ ವರ್ಷ ಚರ್ಚಿತವಾದ ವಿಚಾರವನ್ನು ಮುಂದಿನ ಬಾರಿಯೂ ಎತ್ತಿಕೊಂಡು, ಆ ದಿಸೆಯಲ್ಲಿ ಏನೇನಾಗಿದೆ ಎಂದು ಯಾರೊಬ್ಬರಾದರೂ ತಾಳೆ ನೋಡುತ್ತಾರೆಯೇ ? ಕನ್ನಡ ಸಾಹಿತ್ಯ ನಿಂತ ನೀರಾಗಿದೆಯೇ ಎಂದು ಕೇಳುವವರಿಗೆ ಅದು ಯಾವಾಗ ಹರಿಯುವ ನದಿಯಾಗಿತ್ತು ಎನ್ನುವುದು ಗೊತ್ತಿರುತ್ತದೆಯೇ ? ಹೊಸ ನೀರು ಬಂದ ಘಳಿಗೆಯ ಅರಿವಿರುತ್ತದೆಯೇ ?

ಹಾಗೆ ನೋಡಿದರೆ ನಮ್ಮ ಪ್ರಮುಖ ಚಳುವಳಿಗಳಿಗೂ ಸಮ್ಮೇಳನಕ್ಕೂ ಸಂಬಂಧವೇ ಇಲ್ಲ. ಅದೊಂದು ಅನಿವಾರ್ಯ ಸರ್ಕಾರಿ ಉತ್ಸವ. ನಾಡು ನುಡಿಯ ಘೋಷಣೆಯ ಬಗ್ಗೆ ಸರ್ಕಾರ ತೋರಿಸುವ ಕನಿಷ್ಠ ಕಾಳಜಿಗೆ ಕನ್ನಡಿ. ಅದು ಯಾವತ್ತೋ ಪಾದರಸ ಕಳಕೊಂಡು, ಪ್ರತಿಫಲಿಸುವ ಶಕ್ತಿಯನ್ನೂ ಕಳಕೊಂಡ ಕನ್ನಡಿ. ಈ ಕಡೆಯಿಂದ ನೋಡಿದವನಿಗೆ ಆ ಕಡೆ ನಿಂತ ಕವಿ ಕಾಣಿಸುತ್ತಾನೆ. ಅದರಲ್ಲೂ ಧಾರವಾಡದಂಥ ಊರುಗಳಲ್ಲಿ every third man is a poet, ಉಳಿದಿಬ್ಬರು ವಿಮರ್ಶಕರು ! ಓದುಗನನ್ನು ಎಲ್ಲಿಂದ ತರುವುದು ?

ಈ ಸಾರಿಯ ಸಾಹಿತ್ಯ ಸಮ್ಮೇಳನವೂ ಇದಕ್ಕಿಂತ ಭಿನ್ನವಾಗಿರುತ್ತದೆ ಎಂದು ನಾವ್ಯಾರು ನಿರೀಕ್ಷಿಸುವ ಹಾಗಿಲ್ಲ. ಹೊರ ಊರುಗಳಲ್ಲಿ ಕುಳಿತುಕೊಂಡು, ಸಾಹಿತ್ಯಿಕ ರಾಜಧಾನಿಯ ಘಟನಾವಳಿಗಳನ್ನು ಓದಿ ತಿಳಿಯುವವರಿಗೆ ಇದೊಂದು ಸಾಹಿತ್ಯೋತ್ಸವ ಅನ್ನಿಸಬಹುದು. ಆದರೆ ಸಾಹಿತ್ಯದ ಹುಲುಸು ಬೆಳೆ, ಸಮ್ಮೇಳನದ ಮಂಟಪಗಳಲ್ಲಿ ಬೆಳೆಯಲಾರದು. ಅದಕ್ಕೆ ಮುಂಜಾವದ ಮಂಜು, ಸಂಜೆಯ ಗೋಧೂಳಿ, ಹೊನ್ನಾರಿನ ಕಿರುಗಾಯ, ಬತ್ತ ಗೋಧುವೆ ಬಂಗಾರ ಕಳಸದ ಸುಗಂಧ ಎಲ್ಲವೂ ಬೇಕಾಗುತ್ತದೆ.

ಅದು ಸಮ್ಮೇಳನಗಳಲ್ಲಿ ಸಿಗಲಾರದು. ಅಲ್ಲಿ ಚರ್ಚೆ, ಸ್ವಪ್ರತಿಷ್ಠೆ, ಕುರುಡು ಕಾಂಚಾಣದ ಬೆನ್ನತ್ತಿದ ಕುರುಡು ಜನ ನಿಮಗೆ ಎದುರಾಗಬಹುದು. ಇವರೆಲ್ಲರ ನಡುವೆ ಎರಡು ಸಾಲು ಒಳ್ಳೆಯ ಕಾವ್ಯ, ಒಂದು ಅರ್ಥಪೂರ್ಣ ಸಂವಾದ, ಬಹಳ ಕಾಲ ಗುಂಗಿನಲ್ಲಿರುವಂತೆ ಮಾಡುವ ಅತೀವ ಬೆರಗಿನ ಒಂದು ಗೋಷ್ಠಿ ನಡೆದರೆ ಅದು ಕನ್ನಡ ತಾಯಿಯ ಪುಣ್ಯ. ಅಂಥ ಪುಣ್ಯ ಹೋಗಿ ನೋಡುವ ನಿಮ್ಮದೂ, ಓದಿ ಅರಿಯುವ ಎಲ್ಲರದೂ, ಇಲ್ಲಿರುವ ಎಲ್ಲರದೂ ಆಗಲಿ...

ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X