ಎಷ್ಟೇ ಸಂಬಳ ಬಂದರೂ ಉಳಿಯೋದಿಲ್ವೇ? ಜೇಬಿಗೆ ಕತ್ತರಿ ಹಾಕುವ 5 ಅಭ್ಯಾಸಗಳನ್ನು ಇಂದೇ ಬಿಟ್ಟು ಬಿಡಿ

ಬೆಂಗಳೂರಿನಲ್ಲಿ ಜೀವನ ನಡೆಸುವುದು ಅಷ್ಟು ಸುಲಭವಲ್ಲ. ಯಾಕೆಂದರೆ ಇಲ್ಲಿ ಖರ್ಚು ನಿಜಕ್ಕೂ ಜಾಸ್ತಿ. ಎಷ್ಟೇ ದುಡಿದರೂ ತಿಂಗಳ ಕೊನೆಯಲ್ಲಿ ಹಣ ಉಳಿಯುವುದಿಲ್ಲ ಎನ್ನುವುದನ್ನು ಬಹಳಷ್ಟು ಮಂದಿ ಹೇಳ್ತಾ ಇರ್ತಾರೆ. ನೀವೂ ಇದನ್ನು ಕೇಳಿರಬಹುದು. ಅದ್ಯಾಕೆ ಹೀಗಾಗುತ್ತದೆ ಎನ್ನುವುದನ್ನು ಇದೀಗ ಕಂಟೆಂಟ್‌ ಕ್ರಿಯೇಟರ್‌ ಒಬ್ಬರು ಎತ್ತಿ ತೋರಿಸಿದ್ದಾರೆ. ಪ್ರತಿ ತಿಂಗಳು ನಮಗೆ ಗೊತ್ತಿಲ್ಲದಂತೆ ನಮ್ಮ ಹಣವನ್ನು ನುಂಗಿ ಹಾಕುವ ಐದು ಸಾಮಾನ್ಯ ಅಭ್ಯಾಸದ ಬಗ್ಗೆ ಅವರು ಹೇಳಿದ್ದಾರೆ.

ಇನ್‌ಸ್ಟಾಗ್ರಾಮ್ @bangalore_viral ಖಾತೆಯಲ್ಲಿ ಅಕ್ಷಯ್ ಸಿಎನ್ ಅನ್ನುವವರು, ನಾವು ಸುಖಾಸುಮ್ಮನೆ ಹಣ ಖರ್ಚು ಮಾಡುವ ಐದು ಅಭ್ಯಾಸಗಳ ಬಗ್ಗೆ ಹೇಳಿದ್ದಾರೆ. ಅವುಗಳು ಇಲ್ಲಿವೆ.

Salary

1. ಫುಡ್‌ ಆರ್ಡರ್‌
2. ಪದೇ ಪದೇ ಕ್ಯಾಬ್ ಮಾಡುವುದು
3. ಅನಗತ್ಯ ಶಾಪಿಂಗ್
4. ಬಳಕೆಯಾಗದ ಚಂದಾದಾರಿಕೆಗಳು
5. ಪ್ರೀ ಪ್ಲಾನ್‌ ಇಲ್ಲದಿರುವ ವೀಕ್‌ ಅಂಡ್‌ ಟ್ರಿಪ್‌ಗಳು

ಈ ಐದು ಅಭ್ಯಾಸಗಳೂ ವ್ಯಕ್ತಿಯ ಸಂಬಳವನ್ನುಅರಿವಿಗೆ ಬಾರದ ರೀತಿಯಲ್ಲಿ ಹೇಗೆ ಖಾಲಿ ಆಗುತ್ತಾ ಹೋಗುತ್ತದೆ ಎನ್ನುವುದನ್ನು ಅವರು ವಿಡಿಯೋ ಮೂಲಕ ವಿವರಿಸಿದ್ದಾರೆ. ನಿಮ್ಮಲ್ಲಿ ಹಣ ಖಾಲಿಯಾಗುವುದಕ್ಕೆ ನೀವು ಕಡಿಮೆ ದುಡಿಯುತ್ತಿರೋದು ಕಾರಣ ಅಲ್ಲ, ಬೇಡದ ವಿಷಯಗಳಿಗೆ ಅದನ್ನು ಖರ್ಚು ಮಾಡುವುದರಿಂದಲೇ ತಿಂಗಳ ಕೊನೆಯಲ್ಲಿ ಕೈ ಬರಿದಾಗುವುದು ಎಂದು ಹೇಳಿದ್ದಾರೆ.

ಸಂಬಳ ಎಷ್ಟು ಮುಖ್ಯ ಎನ್ನುವುದು ಮುಖ್ಯವಲ್ಲ

"ಹೆಚ್ಚಿನ ಜನರು ಒಂದು ಸಲ ಸಂಬಳ ಜಾಸ್ತಿಯಾದ್ರೆ ಮತ್ತೆ ಹಣ ಉಳಿತಾಯ ಮಾಡಬಹುದು ಎನ್ನುವ ಲೆಕ್ಕಾಚಾರದಲ್ಲಿ ಇರ್ತಾರೆ. ಆದರೆ ಇಲ್ಲಿ ಗಮನಿಸಬೇಕಾಗಿರುವ ಅಂಶ ಒಂದಿದೆ. ನಮಗೆ ಎಷ್ಟು ಸಂಬಳ ಇದೆ ಎನ್ನುವುದು ಮುಖ್ಯ ಅಲ್ಲ. ನಾವು ಅದನ್ನು ಯಾವುದಕ್ಕೆ ಮತ್ತು ಹೇಗೆ ಖರ್ಚು ಮಾಡ್ತೇವೆ ಅನ್ನೋದು ಮುಖ್ಯ. ತಿಂಗಳಿಗೆ 40,000 ಗಳಿಸುವ ವ್ಯಕ್ತಿ ಕೂಡಾ ಉಳಿತಾಯ ಮಾಡ್ತಾರೆ. ಆದ್ರೆ ಕೆಲವರ ಸಂಬಳ 1 ಲಕ್ಷ ದಾಟಿದ್ರೂ ತಿಂಗಳ ಕೊನೆಯಲ್ಲಿ ಅವ್ರ ಕೈಯ್ಯಲ್ಲಿ ನಯಾ ಪೈಸೆ ಉಳಿಯೋದಿಲ್ಲ. ಹಾಗಾದ್ರೆ ಇಲ್ಲಿ ನಿಮಗೆ ಎಷ್ಟು ಸಂಬಳ ಇದೆ ಎನ್ನೋದು ಮುಖ್ಯ ಅಲ್ಲ, ಖರ್ಚು ಯಾವ ರೀತಿ ಆಗ್ತಾ ಇದೆ ಅನ್ನೋ ಅರಿವು ಮುಖ್ಯ.

ಶಾಪಿಂಗ್‌ ಮಾಡುವುದು ತಪ್ಪಲ್ಲ ಆದರೆ...

ಸಣ್ಣಪುಟ್ಟ ಖರ್ಚುಗಳು ಹೇಗೆ ಪ್ರಮುಖ ಮಾಸಿಕ ವೆಚ್ಚಗಳಾಗಿ ಬದಲಾಗುತ್ತವೆ ಎಂಬುದನ್ನು ಅಕ್ಷಯ್ ವಿವರಿಸಿದ್ದಾರೆ. ಹೊರಗಿನಿಂದ ಫುಡ್‌ ಆರ್ಡರ್‌ ಮಾಡಿ ತಿನ್ನುವುದು ದುಬಾರಿಯಲ್ಲ. ಆದರೆ ಈ ಅಭ್ಯಾಸವನ್ನು ರೂಢಿಸಿಕೊಳ್ಳೋದು ತಪ್ಪು.ಹೀಗಾದಾಗ ಬಜೆಟ್‌ ಮೇಲೆ ಕೆಳಗಾಗಿ ಬಿಡುತ್ತದೆ. 300 ರೂ.ಕ್ಯಾಬ್ ಸವಾರಿ ದೊಡ್ಡ ವಿಷಯವೇನಲ್ಲ, ಆದ್ರೆ ತಿಂಗಳಿಗೆ 20 ದಿನ ಕ್ಯಾಬ್‌ನಲ್ಲೇ ಹೋಗುತ್ತೇನೆ ಎಂದರೆ ಆರು ಸಾವಿರ ರೂಪಾಯಿ ಅಲ್ಲಿದೆ ಡಮಾರ್.‌ ಶಾಪಿಂಗ್‌ ಮಾಡುವುದು ತಪ್ಪಲ್ಲ, ಆದ್ರೆ ಅಗತ್ಯ ಇರುವ ವಸ್ತುವನ್ನು ಮಾತ್ರ ಖರೀದಿಸಿ ತಂದ್ರೆ ಒಳ್ಳೆಯದು.

ಅಪ್ಲಿಕೇಶನ್‌ಗಳ ಸಬ್‌ಸ್ಕ್ರಿಪ್ಶನ್‌

ಇನ್ನು ಪುನರಾವರ್ತಿತ ಡಿಜಿಟಲ್ ಪೇಮೆಂಟ್‌ಗಳು ಮತ್ತು ಸಾಮಾಜಿಕ ಖರ್ಚುಗಳ ಬಗ್ಗೆಯೂ ಅವರು ಗಮನ ಸೆಳೆದಿದ್ದಾರೆ. ನೀವು ಒಂದು ದಿನವೂ ಓಪನ್‌ ಮಾಡಿಯೂ ನೋಡದ ಅಪ್ಲಿಕೇಶನ್‌ಗಳಿಗೆ ಹಣ ಪಾವತಿಸುತ್ತಿದ್ದೀರಿ ಎಂದಾದರೆ ಆ ಹಣ ವೇಸ್ಟ್‌ ಆಗುತ್ತುದೆ ಎಂದೇ ಅರ್ಥ. ಈ ಸಬ್‌ ಸ್ಕ್ರಿಪ್ಶನ್‌ ಹಣ ಚಿಕ್ಕದಾಗಿ ಕಾಣಬಹುದು. ಆದ್ರೆ ಹನಿ ಹನಿ ಕೂಡಿದರೆನೇ ಹಳ್ಳ ಎನ್ನುವುದನ್ನು ಮರೆಯಬಾರದು. ಇನ್ನು ವೀಕ್‌ ಅಂಡ್‌ ಪ್ಲಾನ್‌ಗಳು ತಪ್ಪಲ್ಲ. ಕೈಯ್ಯಲ್ಲಿ ದುಡ್ಡಿಲ್ಲದಿದ್ದರೂ ಪ್ರತೀ ವಾರ ಹೊರಗೆ ಹೋಗಬೇಕು ಎನ್ನುವುದು ತಪ್ಪು.

ಶಾಪಿಂಗ್‌ ವೇಳೆ ಇದೊಂದು ಪ್ರಶ್ನೆ ಮುಖ್ಯ

ಏನೇ ಖರೀದಿ ಮಾಡಿ ಆದ್ರೆ ಅದಕ್ಕೆ ಮುಂಚೆ ನಿಮ್ಮನ್ನೇ ನೀವು ಪ್ರಶ್ನೆ ಮಾಡಿಕೊಳ್ಳಿ. ಈ ವಸ್ತು ಖರೀದಿಸಿದ 30 ದಿನಗಳ ಬಳಿಕವೂ ತೆಗೆದುಕೊಳ್ಳುವಾಗ ಇದ್ದಷ್ಟೇ ಖುಷಿ ಇರುವುದದೇ? ನಿಮ್ಮ ಮನಸ್ಸು ಹೌದು ಎಂಧು ಉತ್ತರಿಸಿದರೆ ಸರಿ, ಇಲ್ಲಾ ಎಂದಾದರೆ ಆ ವಸ್ತುವಿನ ಅಗತ್ಯ ನಿಮಗಿಲ್ಲ ಎಂದರ್ಥ.

ಈ ವಿಡಿಯೋಗೆ ಸಾಮಾಜಿಕ ಮಾಧ್ಯಮದಲ್ಲಿ ಬಾರೀ ಪ್ರತಿಕ್ರಿಯೆ ಸಿಕ್ಕಿದೆ. ಇದರಲ್ಲಿ ಹೊಸದೇನಿದೆ? ಇದರಿಂದ ಪ್ರತಿದಿನ ನಮ್ಮ ಹಣ ಖರ್ಚಾಗುತ್ತದೆ ಎನ್ನುವುದು ಗೊತ್ತಿರುವ ವಿಚಾರ ಎಂದು ಒಬ್ಬರು ರಿಯಾಕ್ಟ್‌ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+