Pomegranate Tree Vastu: ಮನೆಯ ಈ ದಿಕ್ಕಿಗೆ ದಾಳಿಂಬೆ ಗಿಡ ನೆಡಿ... ಆಮೇಲೆ ಏನೆಲ್ಲಾ ಆಗುತ್ತೆ ನೋಡಿ
ಪ್ರತಿಯೊಂದು ಮನೆ ವಾಸ್ತುಪ್ರಕಾರವಾಗಿ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಲಾಗುವುದಿಲ್ಲ. ಆದರೆ ಮನುಷ್ಯನ ಉಳಿವಿಗೆ ಆಹಾರ, ಬಟ್ಟೆ, ವಸತಿ ಹೇಗೆ ಅವಶ್ಯವೋ ಅದೇ ರೀತಿ ವಾಸ್ತುಶಾಸ್ತ್ರ ಪ್ರಕಾರವೂ ವಾಸ್ತು ಇರಬೇಕು. ಅಲ್ಲದೆ ಆ ಸ್ಥಳದಲ್ಲಿ ಇಡುವ ವಸ್ತುಗಳು ವಾಸ್ತು ನಿಯಮಗಳ ಪ್ರಕಾರ ಇರಬೇಕು. ಆಗ ಮಾತ್ರ ಜೀವನ ಸಂತೋಷ ಮತ್ತು ಸಮೃದ್ಧವಾಗಿರುತ್ತದೆ.
ಮುಖ್ಯವಾಗಿ ನಿಮ್ಮ ಮನೆಯಲ್ಲಿ ಗಿಡಗಳನ್ನು ಬೆಳೆಸಲು ನೀವು ಬಯಸಿದರೆ, ಅವುಗಳನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿ ಮತ್ತು ವಾಸ್ತು ಶಾಸ್ತ್ರದಲ್ಲಿ ಹೇಳಲಾದ ನಿಯಮಗಳ ಪ್ರಕಾರ ಬೆಳಸಬೇಕು. ಹಾಗೆ ಇಡುವುದರಿಂದ ಮನೆಯಲ್ಲಿನ ವಾಸ್ತು ದೋಷಗಳು ನಿವಾರಣೆಯಾಗಿ ಜೀವನವು ಯಾವುದೇ ತೊಂದರೆಗಳಿಲ್ಲದೆ ಸುಖಮಯವಾಗಿರುತ್ತದೆ.

ದಾಳಿಂಬೆ ಗಿಡ ಬೆಳಸಬಹುದಾ?
ಕೆಲವು ಗಿಡಗಳು ಮತ್ತು ಮರಗಳನ್ನು ಮನೆಯಲ್ಲಿ ಇರಿಸಿದರೆ ಮನೆಯಲ್ಲಿ ಹಣದ ತೊಂದರೆಗಳು ಉಂಟಾಗುವುದಿಲ್ಲ. ಮನೆಯ ನಿವಾಸಿಗಳು ಬೆಳವಣಿಗೆಯನ್ನು ಕಾಣುತ್ತಾರೆ ಎಂದು ಹೇಳಲಾಗುತ್ತದೆ. ಅವುಗಳಲ್ಲಿ ತುಳಸಿ, ಮನಿ ಪ್ಲಾಂಟ್, ಸ್ನೇಕ್ ಪ್ಲಾಂಟ್ ಸೇರಿದಂತೆ ಇನ್ನೂ ಅನೇಕ ಗಿಡಗಳಿವೆ. ಆದರೆ ನೀವು ದಾಳಿಂಬೆ ಗಿಡವನ್ನು ಮನೆಯಲ್ಲಿ ಇಡಲು ಬಯಸಿದರೆ ಅದನ್ನು ಧಾರಾಳವಾಗಿ ಇಡಬಹುದು.
ದಾಳಿಂಬೆ ಗಿಡದಿಂದ ವಿಷ್ಣು ಮತ್ತು ಲಕ್ಷ್ಮಿ ಆಶೀರ್ವಾದ
ಏಕೆಂದರೆ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ದಾಳಿಂಬೆ ಗಿಡವನ್ನು ಇಡುವುದರಿಂದ ವಿಷ್ಣು ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದ ದೊರೆಯುತ್ತದೆ. ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ ಮತ್ತು ಮನೆಯಲ್ಲಿ ಹಣದ ಕೊರತೆಯಾಗದಂತೆ ನೋಡಿಕೊಳ್ಳುತ್ತದೆ. ಆದರೆ ಅದಕ್ಕಾಗಿ ದಾಳಿಂಬೆ ಗಿಡಕ್ಕೆ ಸಂಬಂಧಿಸಿದ ವಾಸ್ತು ನಿಯಮಗಳನ್ನು ಪಾಲಿಸಬೇಕು.
ಸಮೃದ್ಧಿಯ ಸಂಕೇತ
ವಾಸ್ತು ಪ್ರಕಾರ ದಾಳಿಂಬೆ ಮರವನ್ನು ಅದೃಷ್ಟ, ಸಂತೋಷ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಮರದ ಮೇಲೆ ಬೆಳೆಯುವ ದಾಳಿಂಬೆ ಕೆಂಪು ಬಣ್ಣವನ್ನು ಹೊಂದಿರುತ್ತದೆ ಮತ್ತು ಜೀವನಕ್ಕೆ ಹೊಳಪು ಮತ್ತು ಸಮೃದ್ಧಿಯನ್ನು ತರುತ್ತದೆ.

ದಾಳಿಂಬೆ ಮರವನ್ನು ಎಲ್ಲಿ ನೆಡಬೇಕು?
ವಾಸ್ತು ಪ್ರಕಾರ ದಾಳಿಂಬೆ ಮರವನ್ನು ಮನೆಯ ಮುಂದೆ ಅಥವಾ ಪ್ರವೇಶದ್ವಾರದ ಬಲಭಾಗದಲ್ಲಿ ನೆಡುವುದು ಉತ್ತಮ. ಮನೆಯ ಈ ಭಾಗದಲ್ಲಿ ದಾಳಿಂಬೆ ಮರವನ್ನು ಇಟ್ಟರೆ ಲಕ್ಷ್ಮಿ ದೇವಿಯು ಪ್ರಸನ್ನಳಾಗುತ್ತಾಳೆ. ಈ ಸ್ಥಳದಲ್ಲಿ ನೆಟ್ಟಾಗ ಅದು ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಅದೃಷ್ಟವನ್ನು ತರುತ್ತದೆ. ಮುಖ್ಯವಾಗಿ ದಾಳಿಂಬೆ ಗಿಡವನ್ನು ಮನೆಯಲ್ಲಿ ಬೆಳೆಸಿದರೆ ಮನೆಯಲ್ಲಿ ಹಣದ ಕೊರತೆ ಇರುವುದಿಲ್ಲ.
ದಾಳಿಂಬೆ ಮರವನ್ನು ಯಾವ ದಿಕ್ಕಿನಲ್ಲಿ ನೆಡಬೇಕು?
ವಾಸ್ತು ಶಾಸ್ತ್ರದ ಪ್ರಕಾರ ದಾಳಿಂಬೆ ಗಿಡವನ್ನು ಮನೆಯಲ್ಲಿ ಇಡಲು ಆಗ್ನೇಯ ದಿಕ್ಕು ಉತ್ತಮವಾಗಿದೆ. ಈ ದಿಕ್ಕಿಗೆ ದಾಳಿಂಬೆ ಗಿಡ ಬೆಳೆಸಿದರೆ ಮನೆಯ ಆರ್ಥಿಕ ಸ್ಥಿತಿ ಗಟ್ಟಿಯಾಗುವುದಲ್ಲದೆ ಹಣದ ಸಮಸ್ಯೆ ಎಂದೂ ಬರುವುದಿಲ್ಲ.
ದಾಳಿಂಬೆ ಮರವನ್ನು ಯಾವ ದಿಕ್ಕಿನಲ್ಲಿ ನೆಡಬಾರದು?
ವಾಸ್ತು ಪ್ರಕಾರ ದಾಳಿಂಬೆ ಮರವನ್ನು ದಕ್ಷಿಣ ದಿಕ್ಕಿನಲ್ಲಿ ನೆಡಬಾರದು. ಈ ದಿಕ್ಕಿನಲ್ಲಿ ಇರಿಸಿದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಹರಿವು ಹೆಚ್ಚಾಗುತ್ತದೆ. ಮನೆಯಲ್ಲಿ ನೆಗೆಟಿವ್ ಎನರ್ಜಿ ಜಾಸ್ತಿಯಾದರೆ ಆ ಮನೆಯ ಜನರಲ್ಲಿ ಸಮಸ್ಯೆಗಳು ಹೆಚ್ಚಾಗುತ್ತವೆ ಮತ್ತು ಮನೆ ಸದಾ ಚಡಪಡಿಕೆಯಿಂದ ಕೂಡಿರುತ್ತದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)











Click it and Unblock the Notifications