Vastu Tips: ಈ ಪಕ್ಷಿಗಳ ಗರಿ ಮನೆಯಲ್ಲಿದ್ದರೆ ನೂರು ವರ್ಷಗಳ ಪುಣ್ಯದ ಫಲ- ಪ್ರಗತಿ ಕಂಡು ಅಸೂಯೆ ಪಡ್ತಾರೆ ಜನ!
ಪ್ರಾಚೀನ ಕಾಲದಿಂದಲೂ ಮನೆಗೆ ಕೆಲವು ಪಕ್ಷಿಗಳ ಆಗಮನ ಅಥವಾ ದರ್ಶನ ಮಂಗಳಕರವಾಗಿದೆ. ಹಾಗಂತ ಎಲ್ಲಾ ಪಕ್ಷಗಳು ಕಾಣಿಸುವುದು ಶುಭವೆಂದು ಹೇಳಲಾಗುವುದಿಲ್ಲ. ಹೀಗಾಗಿ ಶತಮಾನಗಳಿಂದ ಮನೆಯಲ್ಲಿ ಕೆಲವು ನಿರ್ದಿಷ್ಟ ಪಕ್ಷಿಗಳ ಗರಿಯನ್ನು ಇಟ್ಟುಕೊಳ್ಳುವುದು ರೂಢಿಯಲ್ಲಿದೆ. ಇದು ಯಶಸ್ಸಿಗೆ ಕಠಿಣ ಪರಿಶ್ರಮ, ಸರಿಯಾದ ದಿಕ್ಕಿನಲ್ಲಿ ಪ್ರಯತ್ನಗಳು ಮತ್ತು ಸಕಾರಾತ್ಮಕ ಚಿಂತನೆಯ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಎಂದು ಜನರು ನಂಬಿದ್ದಾರೆ. ವಾಸ್ತು ಶಾಸ್ತ್ರದ ಪ್ರಕಾರ ಕೆಲವು ಪಕ್ಷಿಗಳ ಗರಿಗಳನ್ನು ಮನೆಯಲ್ಲಿ ಇಡುವುದರಿಂದ ಜೀವನದಲ್ಲಿ ಐಶ್ವರ್ಯ ಹೆಚ್ಚಾಗಿ ನಾಲ್ಕು ಪಟ್ಟು ಪ್ರಗತಿಯಾಗುತ್ತದೆ.
ವಾಸ್ತು ಶಾಸ್ತ್ರ ಮತ್ತು ಶಕುನ್ ಶಾಸ್ತ್ರದ ಆಧಾರದ ಮೇಲೆ 3 ಮಂಗಳಕರ ಪಕ್ಷಿಗಳ ಗರಿಗಳನ್ನು ಮನೆಯಲ್ಲಿ ಇಡುವುದು ಸಾಕಷ್ಟು ಪ್ರಯೋಜನವನ್ನು ನೀಡುತ್ತದೆ. ಅಲ್ಲದೆ ಕೆಲ ಹಕ್ಕಿಗಳ ರೆಕ್ಕೆಗಳು ಕಂಡುಬಂದರೆ ನಿಮ್ಮ ಅದೃಷ್ಟ ಸುಧಾರಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂದರ್ಥ.

ಆದರೆ ಈ ಪಕ್ಷಿಗಳ ಗರಿಗಳು ಅವುಗಳ ದೇಹದಿಂದ ನೈಸರ್ಗಿಕ ರೀತಿಯಲ್ಲಿ ಬೇರ್ಪಟ್ಟಿರಬೇಕು. ಬಲವಂತವಾಗಿ ಕಿತ್ತುಕೊಳ್ಳಬಾರದು. ಇಲ್ಲದಿದ್ದರೆ ಲಾಭದ ಬದಲು ನಷ್ಟದ ಸಾಧ್ಯತೆಯಿದೆ ಎಂಬುದನ್ನು ನೆನಪಿನಲ್ಲಿಡುವುದು ಮುಖ್ಯ. ಹಾಗಾದರೆ ಈ 3 ಪಕ್ಷಿಗಳು ಯಾವುವು ಎಂದು ಈಗ ತಿಳಿಯೋಣ.
ನವಿಲು
ಮನೆಯಲ್ಲಿ ನವಿಲು ಗರಿಗಳನ್ನು ಇಡುವ ಸಂಪ್ರದಾಯ ಬಹಳ ಪುರಾತನವಾದದ್ದು. ಇದು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ತರುತ್ತದೆ. ದೇವರ ಆಶೀರ್ವಾದವನ್ನು ಹೆಚ್ಚಿಸುತ್ತದೆ. ದೇವರುಗಳಲ್ಲಿ ನವಿಲು ಕಾರ್ತಿಕೇಯನಿಗೆ ಸಂಬಂಧಿಸಿದೆ. ದೇವತೆಗಳಲ್ಲಿ ಅದು ತಾಯಿ ಸರಸ್ವತಿಗೆ ತುಂಬಾ ಹತ್ತಿರದಲ್ಲಿದೆ. ಅಲ್ಲದೆ ನವಿಲು ಕಲೆ ಮತ್ತು ಸಂಸ್ಕೃತಿಯ ವಾಹಕವೆಂದು ಪರಿಗಣಿಸಲಾಗಿದೆ. ಜೊತೆಗೆ ನವಿಲಿನ ಗರಿಯನ್ನು ಸ್ವಾಭಾವಿಕವಾಗಿ ಕಂಡುಕೊಳ್ಳುವ ವ್ಯಕ್ತಿಗೆ ಶೀಘ್ರದಲ್ಲೇ ಅದೃಷ್ಟ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ.
ಇನ್ನೂ ನವಿಲು ಗರಿಗಳು ಕೃಷ್ಣನ ಕಿರೀಟವನ್ನು ಅಲಂಕರಿಸಿರುವುದು ನಾವು ನೊಡಿದ್ದೇವೆ. ಹೀಗಾಗಿ ವಾಸ್ತು ಶಾಸ್ತ್ರದಲ್ಲಿಯೂ ನವಿಲು ಗರಿಯನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ನವಿಲು ಗರಿಗಳನ್ನು ಸರಿಯಾದ ದಿಕ್ಕಿನಲ್ಲಿ ಇಡುವುದರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಇದು ಮನೆಗೆ ಶಾಂತಿ ಮತ್ತು ಸಮೃದ್ಧಿಯನ್ನು ತರಲು ಸಹಾಯ ಮಾಡುತ್ತದೆ. ದೀಪಾವಳಿ, ಧನತೇರಸ್, ಸರಸ್ವತಿ ಪೂಜೆ ಮತ್ತು ಅಕ್ಷಯ ತೃತೀಯ ದಿನದಂದು ನವಿಲು ಗರಿಗಳನ್ನು ಮನೆಗೆ ತಂದರೆ ನೂರು ವರ್ಷದ ಪುಣ್ಯದ ಫಲ ಸಿಗಲಿದೆ ಎಂದು ನಂಬಲಾಗುತ್ತದೆ.

ನೀಲಕಂಠ
ಹಿಂದೂ ಧರ್ಮದಲ್ಲಿ ನೀಲಕಂಠ ಪಕ್ಷಿಯನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ನೀಲಿ ಕುತ್ತಿಗೆ ಮತ್ತು ಹಳದಿ ಕೊಕ್ಕು ಇದರ ಪ್ರಮುಖ ಆಕರ್ಷಣೆಯಾಗಿದೆ. ನೀಲಕಂಠ ಪಕ್ಷಿಯ ಗರಿಯನ್ನು ಮನೆಯಲ್ಲಿ ಇಡುವುದರಿಂದ ಅನೇಕ ಪ್ರಯೋಜನಗಳಿವೆ. ಹಿಂದೂ ಧರ್ಮದಲ್ಲಿ ಈ ಪಕ್ಷಿಯನ್ನು ಶಿವನ ಅವತಾರವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಅದರ ಗರಿಯನ್ನು ಮನೆಯಲ್ಲಿ ಇಡುವುದು ಶುಭವೆಂದು ಪರಿಗಣಿಸಲಾಗುತ್ತದೆ.
ಪ್ರಪಂಚದ ಇತರ ಸಂಸ್ಕೃತಿಗಳಲ್ಲಿ ಭಾರತೀಯ ನೀಲಕಂಠ ಪಕ್ಷಿಯನ್ನು ಶುಭವೆಂದು ಕಾಣಲಾಗುತ್ತದೆ. ಕೆಲವು ಗ್ರಂಥಗಳಲ್ಲಿ ನೀಲಕಂಠ ಪಕ್ಷಿಯನ್ನು ದೇವದೂತರ ಸಂದೇಶವಾಹಕ ಎನ್ನಲಾಗಿದೆ. ಆದ್ದರಿಂದ ಅದರ ಗರಿಯನ್ನು ಮನೆಯಲ್ಲಿ ಇಡುವುದರಿಂದ ಧನಾತ್ಮಕ ಶಕ್ತಿ ಹೆಚ್ಚಾಗುವುದು ಖಚಿತ. ನೀಲಕಂಠ ಪಕ್ಷಿಯ ಗರಿಯು ದುಷ್ಟ ಕಣ್ಣಿನಿಂದ ರಕ್ಷಿಸುತ್ತದೆ ಮತ್ತು ಮನೆಯಲ್ಲಿ ಸಂತೋಷ ಮತ್ತು ಶಾಂತಿಯನ್ನು ತರುತ್ತದೆ ಎಂದು ನಂಬಲಾಗುತ್ತದೆ.

ಪಾರಿವಾಳ
ವಾಸ್ತು ಪ್ರಕಾರ ಪಾರಿವಾಳಗಳ ಗರಿಗಳನ್ನು ಇಡುವ ಮನೆಗಳಿಗೆ ಸಮಸ್ಯೆಗಳು ಎದುರಾಗುವುದಿಲ್ಲ. ಪಾರಿವಾಳದ ಗರಿಯನ್ನು ಮನೆಯಲ್ಲಿ ಇಡುವುದು ಒಳ್ಳೆಯದು ಮತ್ತು ಸಂತೋಷವನ್ನು ತರುತ್ತದೆ. ಪಾರಿವಾಳದ ಗರಿಯನ್ನು ಬಿಳಿ ಬಟ್ಟೆಯಲ್ಲಿ ಕಟ್ಟುವುದು ಒಳ್ಳೆಯದು ಎಂದು ಹಲವರು ಭಾವಿಸುತ್ತಾರೆ. ಮನೆಯಲ್ಲಿ ಪಾರಿವಾಳದ ಗರಿಗಳನ್ನು ಇಡುವುದರಿಂದ ಮನೆಯಲ್ಲಿ ಶಾಂತಿ ಮತ್ತು ಸೌಹಾರ್ದತೆಯ ವಾತಾವರಣ ಉಂಟಾಗುತ್ತದೆ.
ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯ ಕೃಪೆಯಿಂದ ಮನೆಯಲ್ಲಿ ವಾಸಿಸುವವರ ಆದಾಯವು ಹೆಚ್ಚಾಗುತ್ತದೆ. ಪ್ರತಿಯೊಬ್ಬರೂ ತಮ್ಮ ತಮ್ಮ ಕೆಲಸಗಳಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸುತ್ತಾರೆ. ನೆರೆಹೊರೆಯವರು ಮತ್ತು ಸ್ಥಳೀಯರು ಅಸೂಯೆಪಡುವಷ್ಟು ಇದು ತುಂಬಾ ಪ್ರಗತಿಗೆ ಕಾರಣವಾಗುತ್ತದೆ.












Click it and Unblock the Notifications