Get Updates
Get notified of breaking news, exclusive insights, and must-see stories!

ಹೃದಯದ ರೋಗಕ್ಕೂ ಮಧುಮೇಹಕ್ಕೂ ಏನು ಸಂಬಂಧ? ಇಲ್ಲಿದೆ ಮಾಹಿತಿ!

ಮಧುಮೇಹ ಇದೀಗ ಹೆಚ್ಚಿನ ಜನರನ್ನು ಕಾಡಲಾರಂಭಿಸಿದೆ. ಬಹುತೇಕ ಜನರಿಗೆ ತಮಗೆ ಮಧುಮೇಹ ಬಂದಿದೆ ಎಂಬುದು ಗೊತ್ತಾಗುವ ಹೊತ್ತಿಗೆ ಅದು ಉಲ್ಭಣದ ಸ್ಥಿತಿಯನ್ನು ತಲುಪಿರುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಕಾಯಿಲೆಗಳು ಬರೀ ವಯೋವೃದ್ಧರನ್ನಷ್ಟೆ ಕಾಡುತ್ತಿಲ್ಲ. ಚಿಕ್ಕ ವಯಸ್ಸಿಗೆ ಹಲವು ಕಾಯಿಲೆಗಳು ಅಡರಿಕೊಳ್ಳಲಾರಂಭಿಸಿವೆ. ಇದಕ್ಕೆ ಕಾರಣಗಳು ಹಲವು ಇರಬಹುದಾದರೂ ಬದಲಾದ ಜೀವನ ಶೈಲಿ, ಒತ್ತಡದ ಬದುಕು ಬಹುಮುಖ್ಯವಾಗಿದೆ ಎನ್ನುವುದನ್ನು ತಳ್ಳಿಹಾಕುವಂತಿಲ್ಲ.

ಇತ್ತೀಚೆಗಿನ ದಿನಗಳಲ್ಲಿ ಮಧುಮೇಹ ಮತ್ತು ಅದರ ಪರಿಣಾಮದಿಂದ ನಮ್ಮನ್ನು ಕಾಡಬಹುದಾದ ಇತರೆ ಕಾಯಿಲೆಗಳ ಬಗ್ಗೆಯೂ ಸಂಶೋಧನೆಗಳು ನಡೆಯುತ್ತಿವೆ. ಹೀಗಾಗಿ ಮಧುಮೇಹದ ಕುರಿತಂತೆ ನಿರ್ಲಕ್ಷ್ಯ ವಹಿಸದೆ ವೈದ್ಯರು ನೀಡುವ ಸಲಹೆಗಳಂತೆ ಜೀವನ ನಡೆಸುವುದನ್ನು ಕಲಿಯುವುದು ಇಂದಿನ ಅಗತ್ಯವಾಗಿದೆ. ಇಲ್ಲದೆ ಹೋದರೆ ಮಧುಮೇಹ ಉಲ್ಭಣಗೊಂಡು ಬೇರೆ, ಬೇರೆ ತರಹದ ಕಾಯಿಲೆಗಳಿಗೆ ಆಹ್ವಾನ ನೀಡುವ ಸಾಧ್ಯತೆಯೂ ಇಲ್ಲದಿಲ್ಲ.

Understanding the Link Between Diabetes and Heart Health

ವೈದ್ಯರು ಹೇಳುವ ಪ್ರಕಾರ ಮಧುಮೇಹಕ್ಕೂ ಹೃದಯದ ಆರೋಗ್ಯಕ್ಕೂ ನಿಕಟ ಸಂಬಂಧವಿದೆಯಂತೆ. ಆದರೆ ಈ ವಿಚಾರ ನಮಗೆ ಅರ್ಥವೇ ಆಗುವುದಿಲ್ಲ. ಹೀಗಾಗಿ ಆ ಬಗ್ಗೆ ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ನಿರ್ಲಕ್ಷ್ಯವಂತು ಮಾಡಿಯೇ ಮಾಡುತ್ತಿರುತ್ತೇವೆ. ಆದ್ದರಿಂದ ಮಧುಮೇಹ ಸಮಸ್ಯೆ ಇದ್ದವರು ಒಮ್ಮೆ ಹೃದಯದ ತಪಾಸಣೆ ಮಾಡಿಸಿಕೊಂಡರೆ ಒಳ್ಳೆಯದು. ಇದು ಬಲತ್ಕಾರವಂತು ಅಲ್ಲ. ಆದರೆ ನಮ್ಮ ಸಮಾಧಾನಕ್ಕೋಸ್ಕರ ಮಾಡಿಸಿಕೊಂಡು ಯಾವುದೇ ತೊಂದರೆಯಿಲ್ಲ ಎಂಬ ವರದಿ ಕೈ ಸೇರಿದರೆ ತುಸು ನೆಮ್ಮದಿ ತರಬಹುದು.

ಮಧುಮೇಹ ಉಲ್ಭಣಗೊಂಡಷ್ಟು ಸಮಸ್ಯೆ ತಪ್ಪಿದಲ್ಲ

ಈಗೀಗ ಹೃದಯ ಕೈಕೊಡುವುದು ಜಾಸ್ತಿಯಾಗುತ್ತಿದೆ. ಚಿಕ್ಕವಯಸ್ಸಿನವರು ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಇದನ್ನು ತಪ್ಪಿಸುವ ಸಲುವಾಗಿ ಒಮ್ಮೆ ತಪಾಸಣೆ ಮಾಡಿಕೊಳ್ಳುವುದು ಒಳ್ಳೆಯದೇ. ತುಂಬಾ ಜನ ಅಯ್ಯೋ ನನಗೇನಾಗಿದೆ? ನಾನೇಕೆ ಪರೀಕ್ಷೆ ಮಾಡಿಕೊಳ್ಳಬೇಕು ಎಂಬ ಧೋರಣೆ ತಾಳುತ್ತಿರುತ್ತಾರೆ. ಅಂತಹವರು ಒಂದು ವಿಚಾರವನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಕೆಲವೊಂದು ಕಾಯಿಲೆಗಳನ್ನು ಪತ್ತೆ ಹಚ್ಚಿ ಆರಂಭದಲ್ಲಿಯೇ ಚಿಕಿತ್ಸೆ ಪಡೆಯುವುದು ಜಾಣತನವಾಗುತ್ತದೆ. ಅದರಲ್ಲೂ ಮಧುಮೇಹ ನಮ್ಮನ್ನು ಕಾಡಿತೆಂದರೆ ಅದನ್ನು ವಾಸಿ ಮಾಡಲು ಸಾಧ್ಯವಿಲ್ಲ. ನಿಯಂತ್ರಣದಲ್ಲಿಟ್ಟುಕೊಳ್ಳಬಹುದಷ್ಟೆ.

ಇವತ್ತಿನ ಪರಿಸ್ಥಿತಿಯಲ್ಲಿ ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲಾಗದೆ ಹಲವರು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಮಸ್ಯೆಗಳಲ್ಲಿ ಹೃದಯದ ಕಾಯಿಲೆಯೂ ಒಂದಾಗಿದೆ ಎಂದರೆ ಅಚ್ಚರಿಯಾಗಬಹುದು ಆದರೆ ಇದು ಸತ್ಯ. ಹೀಗಾಗಿ ಇದರ ಬಗ್ಗೆ ಎಚ್ಚರಿಕೆ ವಹಿಸುವುದು ಮುಖ್ಯವಾಗುತ್ತದೆ. ಏಕೆಂದರೆ ಮನುಷ್ಯರ ರಕ್ತದಲ್ಲಿನ ಸಕ್ಕರೆಯ ಅಂಶ ಜಾಸ್ತಿ ಆದಾಗ ಅದು ಗ್ಲೂಕೋಸ್‌ ಮೇಲೆ ಮಾತ್ರವಲ್ಲದೆ, ಹೃದಯದ ಕೆಲಸದ ಮೇಲೆ ಮತ್ತು ಒಟ್ಟಾರೆ ಹೃದಯರಕ್ತನಾಳಗಳ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ರಹದಾರಿ ಮಾಡಿಕೊಡುತ್ತದೆ.

Understanding the Link Between Diabetes and Heart Health

ಡಾ. ಗಣೇಶ ಕೃಷ್ಣನ್ ಅಯ್ಯರ್ ಹೇಳುವುದೇನು?

ಸಂಶೋಧನೆಯೊಂದು ಹೇಳುವ ಪ್ರಕಾರ ಮಧುಮೇಹ ಹೊಂದಿರುವ ವ್ಯಕ್ತಿಗಳು ತಮ್ಮ ಜೀವನದ ಒಂದು ಹಂತದಲ್ಲಿ ಹೃದ್ರೋಗಕ್ಕೆ ತುತ್ತಾಗುವ ಅಪಾಯ ಜಾಸ್ತಿ ಇರುತ್ತದೆ. ರಕ್ತದ ಸಕ್ಕರೆ ಮಟ್ಟವು ಜಾಸ್ತಿಯಾದಾಗ ರಕ್ತನಾಳಗಳು ಮತ್ತು ಹೃದಯದ ಕಾರ್ಯನಿರ್ವಹಣೆಯಲ್ಲಿ ನೇರ ಭಾಗಿಯಾಗುವ ನರಗಳಿಗೆ ಹಾನಿ ಉಂಟಾಗುತ್ತದೆ. ಹೀಗಾಗಿ ಈ ಬಗ್ಗೆ ಎಚ್ಚರಿಕೆ ವಹಿಸಿ ಎಂಬ ಸಲಹೆಯನ್ನು ಸಂಶೋಧನೆ ನೀಡಿದೆ. ಇಲ್ಲಿ ಸಮಸ್ಯೆಗೆ ನಾವೇ ಮಾಡಬಹುದಾದ ಪರಿಹಾರವೆಂದರೆ ಅದು ಮಧುಮೇಹವನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುವುದಾಗಿದೆ.

ಇನ್ನು ಈ ಕುರಿತಂತೆ ಮಾಹಿತಿ ನೀಡಿರುವ ಬೆಂಗಳೂರಿನ ಸಹಕಾರ ನಗರದ ಆಸ್ಟರ್ ಸಿಎಂಐ ಹಾಸ್ಪಿಟಲ್ ನ ಚೀಫ್ ಸಿವಿಟಿಎಸ್ ಸರ್ಜನ್ ಡಾ. ಗಣೇಶಕೃಷ್ಣನ್ ಅಯ್ಯರ್ ಅವರು, ಭಾರತದಲ್ಲಿ ಮಧುಮೇಹದಿಂದ ಬಳಲುತ್ತಿರುವ ಹಲವಾರು ಜನರು ತಮಗೆ ಹೃದಯ ಸಂಬಂಧಿ ಸಮಸ್ಯೆಗಳು ಕಾಡುತ್ತಿರುವುದಾಗಿ ಹೇಳುತ್ತಿರುತ್ತಾರೆ. ಜತೆಗೆ ಆತಂಕಕಾರಿ ವಿಚಾರವೇನೆಂದರೆ ಯುವ ಪೀಳಿಗೆಯಲ್ಲೂ ಇಂತಹ ಸಮಸ್ಯೆ ಕಂಡು ಬರುತ್ತಿದೆ. ಒಂದು ವೇಳೆ ಮಧುಮೇಹವನ್ನು ಸರಿಯಾಗಿ ನಿರ್ವಹಿಸದಿದ್ದರೆ ಅದರಿಂದ ಅಧಿಕ ರಕ್ತದೊತ್ತಡ, ಕೆಟ್ಟ ಕೊಲೆಸ್ಟ್ರಾಲ್ ಮತ್ತು ಹೆಚ್ಚಿನ ಟ್ರೈಗ್ಲಿಸರೈಡ್‌ ಗಳಂತಹ ಹೃದಯರಕ್ತನಾಳದ ಕಾಯಿಲೆಯನ್ನುಂಟು ಮಾಡುವ ಅಪಾಯ ಇರುತ್ತದೆ ಎಂದಿದ್ದಾರೆ.

ಡಾ. ಕೆನ್ನೆತ್ ಲೀ ನೀಡುವ ಸಲಹೆ ಪಾಲಿಸಿ

ಇಂತಹ ಸಂದರ್ಭಗಳಲ್ಲಿ ಗ್ಲೂಕೋಸ್ ಏರಿಳಿತಗಳನ್ನು ತಪ್ಪಿಸುವ ಕಡೆಗೆ ಜನರು ಹೆಚ್ಚಿನ ಗಮನ ನೀಡುವುದು ಅವಶ್ಯ. ಈ ಹಿನ್ನೆಲೆಯಲ್ಲಿ ಜನರು ಹೃದಯದ ಆರೋಗ್ಯಕ್ಕೆ ಪೂರಕವಾಗಿರುವ ಆಹಾರ ಸೇವನೆ, ನಿಯಮಿತ ವ್ಯಾಯಾಮ ಮತ್ತು ಸಿಜಿಎಂನಂತಹ ಸಾಧನಗಳ ಮೂಲಕ ಗ್ಲೂಕೋಸ್ ಮಟ್ಟದ ಮೇಲೆ ನಿಗಾ ವಹಿಸುವುದು ಮುಂತಾದ ಕ್ರಮಗಳನ್ನು ಪಾಲಿಸುವಂತೆ ಅವರು ಮಧುಮೇಹಿಗಳಿಗೆ ಉತ್ತಮ ಸಲಹೆಗಳನ್ನು ನೀಡಿದ್ದಾರೆ.

Understanding the Link Between Diabetes and Heart Health

ಇನ್ನು ಅಬೋಟ್ ನ ಡಯಾಬಿಟಿಸ್ ವಿಭಾಗದ ವೈದ್ಯಕೀಯ ವ್ಯವಹಾರಗಳ ನಿರ್ದೇಶಕರಾದ ಡಾ. ಕೆನ್ನೆತ್ ಲೀ ಅವರು ಕೂಡ ಹಲವಾರು ಉಪಯುಕ್ತ ಸಲಹೆಗಳನ್ನು ನೀಡಿದ್ದು, ಅದರಂತೆ ಹೇಳುವುದಾದರೆ ಮಧುಮೇಹವನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಬೇಕಾದರೆ ಗ್ಲೂಕೋಸ್ ಮಟ್ಟದ ಮೇಲೆ ನಿಯಮಿತವಾಗಿ ಗಮನ ಇಡುವುದು ಬಹಳ ಮುಖ್ಯ. ಕಂಟಿನ್ಯೂಯಸ್ ಗ್ಲೂಕೋಸ್ ಮಾನಿಟರಿಂಗ್ (ಸಿಜಿಎಂ) ಸಾಧನಗಳನ್ನು ಬಳಸಿಕೊಂಡು ಮಧುಮೋಹ ಇರುವವರು ತಮ್ಮ ಗ್ಲೂಕೋಸ್ ಮಟ್ಟವನ್ನು ಗಮನಿಸುತ್ತಿರಬೇಕು. ಈ ಸಾಧನದಿಂದ ಗ್ಲೂಕೋಸ್ ಮಟ್ಟವನ್ನು ತಿಳಿದುಕೊಳ್ಳಲು ಬೆರಳಿಗೆ ಸೂಜಿಯನ್ನು ಚುಚ್ಚಿಕೊಳ್ಳುವ ಅಗತ್ಯ ಇರುವುದಿಲ್ಲ.

ಟೈಮ್ ಇನ್ ರೇಂಜ್ ಮಾಪನ ಬಳಸಿ

ಈ ಸಾಧನಗಳು ಟೈಮ್ ಇನ್ ರೇಂಜ್ (ಟಿಐಆರ್) ನಂತಹ ಬಹಳ ಮುಖ್ಯವಾದ ಮಾಪನಗಳನ್ನು ಹೊಂದಿವೆ. ಈ ಮಾಪನವು ಒಂದು ದಿನದಲ್ಲಿ ವ್ಯಕ್ತಿಗಳ ಗ್ಲೂಕೋಸ್ ಮಟ್ಟ ನಿರ್ದಿಷ್ಟ ರೇಂಜ್ ನಲ್ಲಿಯೇ ಇದ್ದ ಒಟ್ಟು ಸಮಯವನ್ನು ತಿಳಿಸುತ್ತದೆ. ಒಬ್ಬ ವ್ಯಕ್ತಿಯ ಗ್ಲೂಕೋಸ್ ಮಟ್ಟವು ನಿರ್ದಿಷ್ಟ ರೇಂಜ್ ನಲ್ಲಿಯೇ ಹೆಚ್ಚು ಸಮಯ ಇದ್ದರೆ ಹೃದಯರಕ್ತನಾಳದ ಕಾಯಿಲೆಯ ಸಂಭವ ಕಡಿಮೆಯಾಗುತ್ತದೆ. ಟಿಐಆರ್ ನಲ್ಲಿ ಶೇ.10ರಷ್ಟು ಹೆಚ್ಚಳ ಉಂಟಾದರೆ ವ್ಯಕ್ತಿಯ ಕರೋಟಿಡ್ ಆರ್ಟರಿಗಳು ಅಸಹಜವಾಗಿ ದಪ್ಪವಾಗುವ ಅಪಾಯ ಶೇ.6.4ರಷ್ಟು ಜಾಸ್ತಿ ಆಗುತ್ತದೆ. ಆದ್ದರಿಂದ ಹೃದಯರಕ್ತನಾಳದ ಕಾಯಿಲೆಯಿಂದ ದೂರವಿರಲು ಹೆಚ್ಚು ಟಿಐಆರ್ ಅನ್ನು ಹೊಂದುವುದು ಬಹಳ ಮುಖ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ಮಧುಮೇಹ ಇರುವವರು ವೈದ್ಯರ ಸಲಹೆಯಂತೆ ಜೀವನ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಅಲ್ಲದೆ ಸಮಸ್ಯೆಗಳು ಕಂಡು ಬಂದಾಗ ನಿರ್ಲಕ್ಷ್ಯ ವಹಿಸದೆ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕಾಗುತ್ತದೆ. ಮಧುಮೇಹ ಉಲ್ಭಣಗೊಂಡಷ್ಟು ಅದರಿಂದ ಆರೋಗ್ಯದ ಮೇಲೆ ಬೇರೆ ಬೇರೆ ರೀತಿಯ ಪರಿಣಾಮಗಳಾಗುವ ಸಾಧ್ಯತೆಯಿರುವುದರಿಂದ ಈ ಬಗ್ಗೆ ಎಚ್ಚರಿಕೆ ವಹಿಸುವುದು ತುಂಬಾ ಒಳ್ಳೆಯದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+