Mini Walk: ಮಿನಿ ವಾಕ್ ಎಂದರೇನು? ಇದನ್ನು ಮಾಡಿದರೇ ಏನು ಲಾಭ, ಮಾಡುವುದು ಹೇಗೆ?
ನಿಮ್ಮ ದೇಹವನ್ನು ಆರೋಗ್ಯವಾಗಿಡಲು ಮತ್ತು ರೋಗಗಳಿಂದ ದೂರವಿರಲು ನೀವು ಬಯಸಿದರೆ, ಪ್ರತಿದಿನ ಬೆಳಿಗ್ಗೆ ನಡೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಬೆಳಿಗ್ಗೆ ವಾಕಿಂಗ್ ಅಥವಾ ವ್ಯಾಯಾಮವು ದೇಹವನ್ನು ರೋಗಗಳಿಂದ ದೂರವಿರಿಸಲು ಸಹಾಯ ಮಾಡುತ್ತದೆ. ಪ್ರತಿದಿನ ಬೆಳಿಗ್ಗೆ ವಾಕಿಂಗ್ ಮಾಡುವುದರಿಂದ ನಿಮ್ಮ ದೇಹ ಮತ್ತು ಮನಸ್ಸು ಎರಡನ್ನೂ ಸಂತೋಷದಿಂದ ಇರುತ್ತದೆ.
ಬೆಳಗಿನ ನಡಿಗೆಯು ನಿಮ್ಮನ್ನು ದೈಹಿಕವಾಗಿ ಸಕ್ರಿಯವಾಗಿ ಮತ್ತು ಸದೃಢವಾಗಿಸುವುದಲ್ಲದೆ ಮಾನಸಿಕ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಅನೇಕ ಆರೋಗ್ಯ ತಜ್ಞರು ವ್ಯಾಯಾಮಕ್ಕಿಂತ ವಾಕಿಂಗ್ ಉತ್ತಮ ಎನ್ನುತ್ತಾರೆ. ವಾಕಿಂಗ್ ಇಡೀ ದೇಹದ ರಕ್ತ ಪರಿಚಲನೆ ಸುಧಾರಿಸುತ್ತದೆ. ಜೊತೆಗೆ ತೂಕ ಕೂಡ ನಿಯಂತ್ರಣದಲ್ಲಿರುತ್ತದೆ. ಪ್ರತಿದಿನ ನಡೆಯುವುದು ತುಂಬಾ ಪ್ರಯೋಜನಕಾರಿ.

ವಾಕಿಂಗ್ ಏಕೆ ಮಾಡಬೇಕು?
ವಾಕಿಂಗ್ ಆರೋಗ್ಯಕ್ಕೆ ಅತ್ಯುತ್ತಮ ಫಿಟ್ನೆಸ್ ವ್ಯಾಯಾಮ. ನೀವು ಯಾವುದೇ ಸಮಯದಲ್ಲಿ ಮತ್ತು ಯಾವುದೇ ರೀತಿಯಲ್ಲಿ ನಡೆಯಬಹುದು. ಆದರೆ ಈಗಿನ ಒತ್ತಡದ ಕೆಲಸ ಕಾರ್ಯಗಳಲ್ಲಿ ವಾಕ್ ಮಾಡಲು ಸಹ ಟೈಮ್ ಇರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನೀವು ಮಿನಿ ವಾಕ್ ಮಾಡಬಹುದು. ಮಿನಿ ವಾಕ್ ಇದರಲ್ಲಿ ನೀವು 2 ನಿಮಿಷದಿಂದ 5 ನಿಮಿಷ ಮತ್ತು 10 ನಿಮಿಷಗಳವರೆಗೆ ನಡೆಯಬಹುದು.
ಮಿನಿ ವಾಕ್ ಯಾವಾಗ ಮಾಡಬೇಕು?
ಬ್ಯೂಸಿ ಲೈಫ್ ಸ್ಟೈಲ್ ಹೊಂದಿರುವ ಜನರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ತಮ್ಮ ದೈನಂದಿನ ಕೆಲಸ ಕಾರ್ಯಗಳ ಮಧ್ಯದಲ್ಲಿ ಕೊಂಚ ಸಮಯವನ್ನು ತೆಗೆದಿಟ್ಟುಕೊಂಡು ನಿಮ್ಮ ಆರೋಗ್ಯದ ಕಾಳಜಿ ವಹಿಸಬೇಕು. ವೈದ್ಯರು ಸೂಚಿಸುವಂತೆ 40 ನಿಮಿಷ ವಾಕ್ ಮಾಡಲು ಸಮಯ ಇಲ್ಲದೇ ಇರುವವರು ಮಿನಿ ವಾಕ್ ಮಾಡಿ ಅದರ ಪ್ರಯೋಜನವನ್ನು ಪಡೆಯಬಹುದು.
ಮಿನಿ ವಾಕ್‌ಗಾಗಿ 5-10 ನಿಮಿಷ ಸಾಕು. ಬೆಳಿಗ್ಗೆ 10 ನಿಮಿಷಗಳ ವೇಗದ ವಾಕ್ ಮಾಡುವ ಮೂಲಕ ನೀವು ಉಲ್ಲಾಸದಿಂದ ಇರಬಹುದು. ನೀವು ಕಚೇರಿಯನ್ನು ತಲುಪಿ, ಪಾರ್ಕಿಂಗ್ ಸ್ಥಳದಿಂದ ನೀವು ಒಳಗೆ ಪ್ರವೇಶಿಸುವವರೆಗೆ ನಡೆಯಿರಿ. ಮಧ್ಯಾಹ್ನ ಉಪಹಾರದ ನಂತರ ಒಂದು ಸುತ್ತು ಸ್ಮಾಲ್ ವಾಕ್ ಮಾಡಿ. ನಿಮಗೆ ಕಾಲ್‌ಗಳು ಬಂದಾಗ ಫೋನಿನಲ್ಲಿ ಮಾತನಾಡುತ್ತಲೇ ವಾಕ್ ಮಾಡಿ. ಕಚೇರಿಯಲ್ಲಿ ಪ್ರತಿ 1 ಗಂಟೆಗೆ 5 ನಿಮಿಷಗಳ ಕಾಲ ನೀವು ವಾಕ್ ಬ್ರೇಕ್ ತೆಗೆದುಕೊಳ್ಳಬಹುದು. ಮಧ್ಯಾಹ್ನ ಮತ್ತು ರಾತ್ರಿ ಊಟದ ನಂತರ ಒಂದು ಸುತ್ತು ವಾಕ್ ಮಾಡುವುದು ಬೆಸ್ಟ್.

ಮಿನಿ ವಾಕ್ ಎಷ್ಟು ಸಮಯ ನಡೆಯಬೇಕು?
ನೀವು ಆರಂಭದಲ್ಲಿ 10 ನಿಮಿಷದ ನಡಿಗೆಯಿಂದ ಆರಂಭಿಸಿ. ಮಿನಿ ವಾಕ್‌ಗಳ ಮೂಲಕ ನೀವು ವಾರಕ್ಕೆ ಕನಿಷ್ಠ 150 ನಿಮಿಷಗಳ ಕಾಲ ನಡೆಯಬೇಕು. ಈ ರೀತಿಯಾಗಿ, ನೀವು ಆರೋಗ್ಯವಂತರಾಗಿದ್ದರೆ. ಇನ್ನು ಆರೋಗ್ಯ ಸಧೃಡವಾಗಿದ್ದರೆ ವಾರದ ಬಳಿಕ ನಿಮ್ಮ ವಾಕಿಂಗ್ ಸಮಯವನ್ನು ಹೆಚ್ಚಿಸಿಕೊಳ್ಳಿ.
ಆರಂಭದಲ್ಲಿ ವಾಕ್ ಮಾಡುವಾಗ ಓಡುವ ರೀತಿಯಲ್ಲಿ ನಡೆಯಬೇಕು. ನಂತರ ವೇಗದ ನಡಿಗೆಗೆ ವಾಕಿಂಗ್ ಶಿಫ್ಟ್ ಮಾಡಬೇಕು. ನಿಮಗೆ ಯಾವುದೇ ಸಮಸ್ಯೆ ಇಲ್ಲದಿದ್ದಾಗ, ನಿಮ್ಮ ನಡಿಗೆಯ ವೇಗವನ್ನು 2-3 ವಾರಗಳಲ್ಲಿ ಹೆಚ್ಚಿಸಬಹುದು.
ಮಿನಿ ವಾಕ್‌ನಿಂದ ಏನು ಪ್ರಯೋಜನ?
ಈ ಮಿನಿ ನಡಿಗೆಯಿಂದ ನೀವು ಹಲವು ಲಾಭಗಳನ್ನು ಪಡೆಯುತ್ತೀರಿ. ಮಿನಿ ವಾಕ್ ತೂಕವನ್ನು ತ್ವರಿತವಾಗಿ ಕಡಿಮೆ ಮಾಡುವುದಲ್ಲದೆ ನಿಮ್ಮ ಹೃದಯವನ್ನು ಆರೋಗ್ಯವಾಗಿಡುತ್ತದೆ. ಮಧುಮೇಹ ಮತ್ತು ಕೊಲೆಸ್ಟ್ರಾಲ್‌ನಂತಹ ಅಪಾಯಕಾರಿ ಕಾಯಿಲೆಗಳನ್ನು ಮಿನಿ ವಾಕ್‌ಗಳಿಂದ ದೂರವಿಡಬಹುದು.












Click it and Unblock the Notifications