ಹೆಚ್ಚು ಶ್ರಮ ಬೇಕಿಲ್ಲ; ಕಿಚನ್ ಟೈಲ್ಸ್, ಚಿಮಣಿಗಳಲ್ಲಿ ಅಂಟಿಕೊಂಡಿರುವ ಜಿಗುಟು ಕಲೆ ತೆಗೆಯಲು ಇಲ್ಲಿದೆ ಸುಲಭ ವಿಧಾನ
ಮನೆಯಲ್ಲಿ ಅಡುಗೆ ಮನೆ ಅನ್ನೋದು ಸಾಕ್ಷಾತ್ ಅನ್ನಪೂರ್ಣೆ ನೆಲೆಸಿರೋ ಜಾಗವೆನ್ನುತ್ತಾರೆ. ಮನೆಯವರು ಎನರ್ಜಿ ಲೆವೆಲ್ ಹೆಚ್ಚಿಸು ಅಡುಗೆ ರೆಡಿ ಆಗೋ ಶಕ್ತಿ ಕೇಂದ್ರವಿದು. ಈ ಜಾಗವನ್ನು ಎಷ್ಟು ಸ್ವಚ್ಛವಾಗಿ ಇಡುತ್ತೇವೋ ಅಷ್ಟು ಮನಸ್ಸಿಗೂ ನೆಮ್ಮದಿ, ಆರೋಗ್ಯಕ್ಕೂ ಒಳ್ಳೇದು. ಮನೆಯವರ ಆರೋಗ್ಯ ನಿರ್ಧರಿಸೋ ಸ್ಥಳವಿದು. ಆಗ ಸಾಕ್ಷಾತ್ ಅನ್ನಪೂರ್ಣೆ ಸಂತುಷ್ಟಳಾಗೋದು ಗ್ಯಾರಂಟಿ.
ಅಡುಗೆ ಬಳಸೋ ಎಣ್ಣೆ, ಮಸಾಲೆ ಕಲೆ ಎಲ್ಲವೂ ಸ್ಟೌವ್, ಟೈಲ್ಸ್, ಚಿಮಣಿ ಹಾಗೂ ಕಿಟಕಿ ರೀಲಿಂಗ್‌ಗಳಲ್ಲಿ ಜಿಡ್ಡು ಜಿಡ್ಡು ಕಲೆ ಸೃಷ್ಟಿಸುತ್ತದೆ. ಇದನ್ನು ಹಾಗೆಯೇ ಬಿಟ್ಟರೆ ಜಿಗುಟು, ಕಮರು. ಅಬ್ಬಾ ನೋಡುವುದೇ ಕಷ್ಟ ಕಷ್ಟ. ಈ ಕಲೆ ಅಡುಗೆ ಮನೆಯ ಸೌಂದರ್ಯವನ್ನೇ ಕೆಡಿಸುತ್ತದೆ. ಅಕಸ್ಮಾತ್ ಚಿಮಣಿಗೆ ಅಂಟಿರೋ ಜಿಡ್ಡು ಜಿನುಗಿ, ಅಡುಗೆ ಬಿದ್ದರೆ ಆರೋಗ್ಯವೂ ಹಾಳು. ಏನಪ್ಪಾ ಮಾಡೋದು, ಪುರುಸೊತ್ತಿಲ್ಲ. ಉಜ್ಜಿ ಉಜ್ಜಿ ಸಾಕಾಗಿ ಹೋಗುತ್ತೆ. ಅಡುಮೆ ಮನೆ ಕ್ಲೀನೇ ಆಗೋಲ್ಲ ಅನ್ನೋ ಕ್ಯಾಟಗರಿಯವರು ನೀವಾದರೆ, ಯೋಜಿಸಬೇಡಿ. ಎಲ್ಲವಕ್ಕೂ ಪರಿಹಾರವಿದೆ. ಈ ಟ್ರಿಕ್ಸ್ ಬಳಸಿದರೆ ತಿಕ್ಕಿ ತಿಕ್ಕಿ ಉಜ್ಜುವುದು ಬೇಡ. ಇಲ್ಲಿವೆ ಕೆಲವು ಸಿಂಪಲ್ ಟಿಪ್ಸ್. ಇವನ್ನು ಫಾಲೋ ಮಾಡಿದರೆ ಅಡುಗೆ ಮನೆ ಫಳ ಫಳ ಹೊಳೆೋದು ಗ್ಯಾರಂಟಿ.

ಕೆಲವು ಸರಳ ವಿಧಾನಗಳನ್ನು ಅನುಸರಿಸುವ ಮೂಲಕ ಅಡುಗೆ ಕೋಣೆಯಲ್ಲಿ ಮನೆ ಮಾಡಿಕೊಂಡಿರುವ ಜಿಗುಟು ಕಲೆಗಳನ್ನು ಸುಲಭವಾಗಿ ತೆಗೆದು ಹಾಕಬಹುದು.
ಉಗುರು ಬೆಚ್ಚಗಿನ ನೀರು ಮತ್ತು ಲಿಕ್ವಿಡ್ ಡಿಶ್ ವಾಶರ್
ಡಿಶ್ ವಾಶರ್ ಲಿಕ್ವಿಡ್ ಅನ್ನು ಉಗುರು ಬೆಚ್ಚಗಿನ ನೀರಿನೊಂದಿಗೆ ಬೆರೆಸಬೇಕು. ನಂತರ ಒಂದು ಮೃದುವಾದ ಬಟ್ಟೆ ಅಥವಾ ಸ್ಪಂಜನ್ನು ಅದ್ದಿ. ಜಿಡ್ಡಿರುವ ಜಾಗದಲ್ಲಿ ಒರೆಸಿ ನೋಡಿ. ಶತ ಶತಮಾನಗಿಂದಲೂ ಇದೆ ಏನೋ ಎನ್ನುವಂಥ ಜಿಗುಟು ಕಲೆಯೂ ಮಾಯವಾಗುತ್ತೆ. ಅಕಸ್ಮಾತ್ ತುಸು ಹೆಚ್ಚೇ ಜಿಡ್ಡಿದೆ ಎಂದಾದರೆ ಬಿಸಿ ನೀರು ಮತ್ತು ಲಿಕ್ವಿಡ್ ಸೋಪಿನ ಮಿಶ್ರಣವನ್ನು ಕಲೆ ಇರುವ ಜಾಗದಲ್ಲಿ ಸ್ವಲ್ಪ ಹೊತ್ತು ಬಿಟ್ಟು ಬಿಡಿ. ಆಮೇಲೆ ತೊಳೆಯಿರಿ. ಕೆಲಸ ಮತ್ತೂ ಸುಲಭವಾಗುತ್ತದೆ.
ಬಿಳಿ ವಿನೆಗರ್
ಎಣ್ಣೆ ಕಲೆ, ಜಿಗುಟನ್ನು ತೆಗೆಯಲು ಬಿಳಿ ವಿನೆಗರ್ ಅನ್ನು ಬಳಸಿ. ಇದು ಕೂಡಾ ಕಲೆಗಳ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಒಂದು ಸ್ಪ್ರೇ ಬಾಟಲಿಯಲ್ಲಿ ನೀರು ಮತ್ತು ವಿನೆಗರ್ ಅನ್ನು ಸಮಾನ ಪ್ರಮಾಣದಲ್ಲಿ ಮಿಕ್ಸ್ ಮಾಡಿ. ಜಿಗುಟು ತುಂಬಾ ಇರುವ ಜಾಗದಲ್ ಇದನ್ನು ಲಿ ಸ್ಪ್ರೇ ಮಾಡಬೇಕು. ಐದರಿಂದ ಹತ್ತು ನಿಮಿಷಗಳವರೆಗೆ ಹಾಗೆಯೇ ಬಿಟ್ಟು ಆಮೇಲೆ ಬಟ್ಟೆಯಿಂದ ಒರೆಸಿ ತೆಗೆಯಿರಿ. ಇದು ಗ್ರೀಸ್ ಅನ್ನ್ನೂ ಸುಲಭವಾಗಿ ತೆಗೆಯಬಲ್ಲದು. ಜೊತೆಗೆ ಕೆಟ್ಟ ವಾಸನೆಯನ್ನೂ ಇಲ್ಲವಾಗಿಸುತ್ತದೆ.
ಹಠಮಾರಿ ಕಲೆ ತೆಗೆಯಲು ಅಡಿಗೆ ಸೋಡಾ
ಅಡುಗೆ ಮನೆ ಕ್ಯಾಬಿನೆಟ್ಸ್ ಅಥವಾ ಟೈಲ್ಸ್ ಬಹಳ ಸಮಯದವರೆಗೆ ಕ್ಲೀನ್ ಮಾಡದಿದ್ದರೆ ಆ ಕಲೆ ಜಾಸ್ತಿಯಾಗಿರುತ್ತದೆ. ಇದನ್ನು ತೆಗೆಯಲು ಅಡುಗೆ ಸೋಡಾ ಬೆಸ್ಟ್. ನೀರಲ್ಲಿ ಸ್ವಲ್ಪ ಅಡುಗೆ ಸೋಡಾ ಬೆರೆಸಿ ಗಟ್ಟಿ ಪೇಸ್ಟ್ ಮಾಡಿಕೊಳ್ಳಿ. ಆಮೇಲೆ ಕಲೆಗಳಿರುವ ಜಾಗದಲ್ಲಿ ಜಾಗದಲ್ಲಿ ಈ ಪೇಸ್ಟ್ ಅನ್ನು ಹಚ್ಚಿ. ಸ್ವಲ್ ಟೈಮ್ ಬಿಟ್ಟು ಸ್ಪಂಜ್ ತೆಗೆದುಕೊಂಡು ಚೆನ್ನಾಗಿ ಉಜ್ಜಿದರೆ ಕಲೆ ಮಂಗಮಾಯವಾಗುವುದು. ಇಲ್ಲಿ ಹೆಚ್ಚು ಎಫೋರ್ಟೇ ಬೇಡ. ನಿಧಾನವಾಗಿ ಉಜ್ಜಿದರೂ ಕಲೆ, ಕೊಳೆಗೆ ಮುಕ್ತಿ ಹಾಡಬಹುದು.
ಮರದ ವಸ್ತುಗಳನ್ನು ಕ್ಲೀನ್ ಮಾಡುವಾಗ ಜೋಪಾನ
ವುಡನ್ ಕ್ಯಾಬಿನೆಟ್ಸ್ ಅಥವಾ ರ್ಯಾಕ್ಸ್ ಸ್ವಚ್ಛಗೊಳಿಸುವಾಗ ಹೆಚ್ಚು ನೀರು ಬಳಸಬಾರದು. ಅಡುಗೆ ಮನೆಯಲ್ಲಿ ಮರದ ಇಂಟಿರಿಯರ್ ಮಾಡಿಸಿದ್ದರೆ ಇದರ ಬಗ್ಗೆ ಎಚ್ಚರ ಇರಲಿ. ಮರದ ಕ್ಯಾಬಿನೆಟ್ ಅಥವಾ ರ‍್ಯಾಕ್ಸ್ ಸ್ವಲ್ಪ ಒದ್ದೆಯಾದ ಬಟ್ಟೆಯಿಂದ ಒರೆಸಿ ಕ್ಲೀನ್ ಮಾಡಿ ಸಾಕು.
ಎಣ್ಣೆ ಕಲೆ, ಕೊಳೆ ಅಂಟಿ ಕೂರದಂತೆ ಏನು ಮಾಡಬೇಕು
1. ಪ್ರತಿ ಸಲ ಅಡುಗೆ ಮಾಡುವಾಗಲೂ ಚಿಮಣಿ ಅಥವಾ ಎಕ್ಸಾಸ್ಟ್ ಫ್ಯಾನ್ ಅನ್ನು ಆನ್ ಮಾಡಿ ಕೊಳ್ಳಿ.
2. ಸ್ಟೌವ್ ಮತ್ತು ಸ್ಟೌವ್ ಹಿಂದಿನ ಟೈಲ್ಸ್, ಅಡುಗೆ ಮನೆಯ ಕೌಂಟರ್‌ಗಳನ್ನು ಪ್ರತಿ ದಿನವೂ ಕ್ಲೀನ್ ಮಾಡಿ.
3. ಎಣ್ಣೆ ಮತ್ತು ಮಸಾಲೆ ಪಾತ್ರೆಗಳನ್ನು ಮುಚ್ಚಿಡಿ.
4. ತಿಂಗಳಿಗೊಮ್ಮೆಯಾದರೂ ಅಡುಗೆಮನೆಯ ಡೀಪ್ ಕ್ಲೀನ್ ಮಾಡಿಸಿ.
5. ಚಿಮಣಿ ಫಿಲ್ಟರ್ ಅನ್ನು ಪದೆ ಪದೇ ಸ್ವಚ್ಛಗೊಳಿಸಿ.


Click it and Unblock the Notifications
