ಗಂಡ - ಹೆಂಡತಿ ನಡುವೆ ಜಗಳ ತಪ್ಪಿಸಲು ಸಿಂಪಲ್ ಟಿಪ್ಸ್!
ಗಂಡ ಮತ್ತು ಹೆಂಡತಿಯ ನಡುವೆ ಆಗಾಗ ಜಗಳಗಳು ಆಗುವುದು ಸಾಮಾನ್ಯ. ಸುಖ ಸಂಸಾರಕ್ಕೆ ಒಂದಷ್ಟು ಸೂತ್ರಗಳಿದ್ದರೆ ಈ ಜಗಳಗಳಿಗೆ ಬ್ರೇಕ್ ಹಾಕಬಹುದು. ಪತಿ ಹಾಗೂ ಪತ್ನಿ ನಡುವೆ ವೈಮನಸ್ಸು ತಪ್ಪಿಸುಲು ಹಾಗೂ ಖುಷಿಯಿಂದ ಇರುವುದಕ್ಕೆ ಇಲ್ಲೊಂದಿಷ್ಟು ಸರಳ ಸೂತ್ರಗಳಿವೆ. ಗಂಡ ಮತ್ತು ಹೆಂಡತಿಯ ನಡುವಿನ ಜಗಳಗಳು ಆಗದಂತೆ ತಪ್ಪಿಸಲು, ಮುಕ್ತವಾಗಿ ಮಾತನಾಡಲು ಹಾಗೂ ಅರ್ಥ ಮಾಡಿಕೊಂಡು ನಡೆಯುವುದಕ್ಕೆ ಇಲ್ಲೊಂದಷ್ಟು ಸಿಂಪಲ್ ಟಿಪ್ಸ್‌ಗಳು ಇವೆ. ಇವು ಸುಖ ಸಂಸರಾಕ್ಕೆ ಇರುವ ಸರಳ ಸೂತ್ರಗಳು. ಇದನ್ನು ನೀವು ಅಳವಡಿಸಿಕೊಂಡರೆ ಪದೇ ಪದೇ ಜಗಳವಾಗುವುದನ್ನು ಸರಳವಾಗಿ ತಪ್ಪಿಸಲು ಸಾಧ್ಯವಿದೆ.
ಸುಖ ಸಂಸಾರಕ್ಕೆ 12 ಸೂತ್ರಗಳು ಎನ್ನುವಂತೆ ನೀವು ಕೂಡ ನಿಮ್ಮ ದಾಂಪತ್ಯ ಜೀವನದಲ್ಲಿ ಕೆಲವೊಂದು ಸೂತ್ರಗಳನ್ನು ಅಳಡಿಸಿಕೊಂಡರೆ ಮನೆಯಲ್ಲಿ ಪದೇ ಪದೇ ಜಗಳವಾಗುವುದನ್ನು ತಪ್ಪಿಸಬಹುದು. ಹಾಗಾದರೆ ಗಂಡ - ಹೆಂಡತಿ ಮನೆಯಲ್ಲಿ ಜಗಳವಾಡದೆ ಸಂಸಾರ ನಡೆಸುವುದು ಹೇಗೆ ಎನ್ನುವ ಟಿಪ್ಸ್ ಇಲ್ಲಿದೆ.

ಈ ವಿಷಯಗಳನ್ನು ಗಮನಿಸಿ: ಸಾಮಾನ್ಯವಾಗಿ ಮನೆಯ ಹಿರಿಯರು ಹೇಳುವಂತೆ ಮದುವೆಯಾದ ಮೊದಲ ಒಂದು ವರ್ಷದ ಅವಧಿಯಲ್ಲಿ ಪತಿ ಹಾಗೂ ಪತ್ನಿಯ ನಡುವೆ ಹೆಚ್ಚು ಜಗಳಗಳು ಆಗುತ್ತಿರುತ್ತವೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ಸಮಯವದು. ಇನ್ನು ಒಂದು ವರ್ಷ ಕಳೆದರೆ ಮುಂದೆ ಗಂಡ ಮತ್ತು ಹೆಂಡತಿಯ ನಡುವೆ ಜಗಳಗಳು ಕಡಿಮೆಯಾಗುತ್ತವೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದಕ್ಕೆ ಇಷ್ಟು ಸಮಯ ಬೇಕು.
ಇದಾದ ಮೇಲೆ ನಿಮ್ಮ ನಡುವೆ ಯಾವ ವಿಷಯಕ್ಕೆ ಅಥವಾ ಯಾವ ಸಂದರ್ಭ ವಾದ - ವಿವಾದ, ಕೋಪ ಬರುತ್ತದೆ ಎನ್ನುವುದನ್ನು ಗುರುತಿಸಿ. ಆ ವಿಷಯಗಳ ಬಗ್ಗೆ ಚರ್ಚೆ ಮಾಡುವಾಗ ಅಥವಾ ಮಾತನಾಡುವಾಗ ಹೆಚ್ಚು ಜಾಗರೂಕರಾಗಿರಿ. ಧ್ವನಿ ನಿಯಂತ್ರಣದಲ್ಲಿರಲಿ. ಮುಖ್ಯವಾಗಿ ತುಂಬಾ ಸಮಯದಲ್ಲಿ ಜಗಳಗಳಿಗೆ ಏರು ಧ್ವನಿಯಲ್ಲಿ ಮಾತನಾಡುವುದೇ ಮುಖ್ಯ ಕಾರಣವಾಗುತ್ತದೆ. ಶಾಂತವಾಗಿ ಮಾತನಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.

ಗುಡ್ ಕಮ್ಯೂನಿಕೇಷನ್: ಒಳ್ಳೆಯ ಕಮ್ಯೂನಿಕೇಷನ್ ಹಲವು ಸಮಸ್ಯೆಗಳಿಗೆ ಪರಿಹಾರವಾಗಬಲ್ಲದು. ಪತಿ ಅಥವಾ ಪತ್ನಿಯೊಂದಿಗೆ ಆರೋಪ ಮಾಡುವ ಬದಲು, ನಾನು ಹಿಂಗ್ ಅಂದ್ಕೊಂಡೆ ಅಥವಾ ನಾನು ಈ ರೀತಿ ಅಂದುಕೊಂಡಿದ್ದೇ ಅಂತ ಹೇಳಿ. ಯಾವುದಾದರು ಮಿಸ್ ಕಮ್ಯೂನಿಕೇಷನ್ ಆದಾಗ ಈ ರೀತಿ ಅದನ್ನು ಸರಿಪಡಿಸಿಕೊಳ್ಳಿ. ಕೋಪಕ್ಕಿಂತ ನಿಮ್ಮ ಭಾವನೆಯನ್ನು ಹಂಚಿಕೊಳ್ಳಿ.
ಸರಿಯಾಗಿ ಕೇಳಿಸಿಕೊಳ್ಳಿ: ಸರಿಯಾಗಿ ಅಥವಾ ಗಮನವಿಟ್ಟು ಕೇಳಿಸಿಕೊಳ್ಳುವುದರಿಂದ ನೀವು ಪದೇ ಪದೇ ಜಗಳ ಆಗುವುದನ್ನು ತಪ್ಪಿಸುವುದಕ್ಕೆ ಅವಕಾಶ ಇದೆ. ಯಾವುದಾದರೂ ವಿಷಯವನ್ನು ಪೂರ್ತಿಯಾಗಿ ಕೇಳಿಸಿಕೊಳ್ಳಿ. ಇದರಿಂದ ಮಿಸ್ ಕಮ್ಯೂನಿಕೇಷನ್ ಆಗುವುದನ್ನು ತಪ್ಪಿಸಲು ಸಾಧ್ಯವಿದೆ. ಗಂಡ ಅಥವಾ ಹೆಂಡತಿ ಯಾವ ಉದ್ದೇಶದಿಂದ ಇಲ್ಲವೇ ಯಾವ ದೃಷ್ಟಿಕೋನದಿಂದ ಹೇಳುತ್ತಿದ್ದಾರೆ ಎಂದು ತಿಳಿದುಕೊಳ್ಳಿ.
ಭಾವನೆಗಳನ್ನು ಅರ್ಥ ಮಾಡಿಕೊಳ್ಳಿ: ಇನ್ನು ಮುಖ್ಯವಾಗಿ ಭಾವನೆಗಳನ್ನು ಅರ್ಥ ಮಾಡಿಕೊಳ್ಳಿ. ತುಂಬಾ ಕೋಪವಾಗಿ ಇಲ್ಲವೇ ಆವೇಶದಲ್ಲಿ ಇದ್ದಾಗ ಮಾತನಾಡುವುದಕ್ಕೆ ಹೋಗಬೇಡಿ. ತುಂಬಾ ಕೋಪ ಬಂದಾಗ ಮಾತನಾಡಿದರೆ ಜಗಳ ಹಾಗೂ ಮನಸ್ತಾಪ ಇನ್ನಷ್ಟು ಹೆಚ್ಚಳವಾಗುತ್ತದೆ. ಹೀಗಾಗಿ ಈ ರೀತಿಯ ಸಮಯದಲ್ಲಿ ಸ್ವಲ್ಪ ಬ್ರೇಕ್ ತೆಗೆದುಕೊಳ್ಳಿ. ತಣ್ಣಗಾಗಲು ಸ್ವಲ್ಪ ವಿರಾಮ ತೆಗೆದುಕೊಳ್ಳಿ.
ಈ ತಪ್ಪುಗಳನ್ನು ಮಾಡಲೇಬೇಡಿ: ಜಗಳಗಳನ್ನು ತಪ್ಪಿಸುವುದಕ್ಕೆ ಮುಖ್ಯವಾಗಿ ಈಗ ಯಾವ ವಿಷಯದ ಬಗ್ಗೆ ಚರ್ಚೆ ಆಗುತ್ತಿದೆಯೋ ಅದರ ಬಗ್ಗೆ ಮಾತ್ರ ಮಾತನಾಡಿ. ಒಂದು ವಿಷಯದ ಬಗ್ಗೆ ಜಗಳವಾಗುವಾಗ ಹಿಂದಿನ ಜಗಳ ಬಗ್ಗೆ ಮಾತನಾಡಬೇಡಿ. ಇದರಿಂದ ಜಗಳ ಕಡಿಮೆ ಆಗುವುದಕ್ಕಿಂತ ಜಾಸ್ತಿ ಆಗುವುದೇ ಹೆಚ್ಚು. ಇನ್ನೂ ಉತ್ತಮ ಎಂದರೆ ಬಿಟ್ಟು ಕೊಡಿ ಹಾಗೂ ರಾಜಿ ಮಾಡಿಕೊಳ್ಳಿ. ಪರಸ್ಪರ ಹೊಂದಾಣಿ ಹಾಗೂ ಬಿಟ್ಟುಕೊಡುವುದರಿಂದ ಜಗಳಗಳಿಗೆ ಬ್ರೇಕ್ ಹಾಕಬಹುದು.
ಕೊನೆಯದಾಗಿ ಸುಖ ಸಂಸಾರಕ್ಕೆ ಸಿದ್ಧ ಸೂತ್ರಗಳಂತೇನೂ ಇಲ್ಲ. ನಮ್ಮ ಸಂಗಾತಿ ಸ್ವಭಾವ ಮತ್ತು ನಮ್ಮ ಸ್ವಭಾವಕ್ಕೆ ಹೊಂದಾಣಿಕೆಯಾಗುವು ಸೂತ್ರಗಳನ್ನು ನಾವೇ ಅಳವಡಿಸಿಕೊಳ್ಳಬೇಕಷ್ಟೇ












Click it and Unblock the Notifications