Get Updates
Get notified of breaking news, exclusive insights, and must-see stories!

Ragi Halbai Recipe: ಬೇಸಿಗೆಯ ಧಗೆಗೆ ಆರೋಗ್ಯಕರ ರಾಗಿ ಹಾಲುಬಾಯಿ ಸೇವಿಸಿ, ದೇಹವನ್ನು ತಂಪಾಗಿ ಇರಿಸಿಕೊಳ್ಳಿ

ರಾಗಿ ಕರ್ನಾಟಕದ ಹೆಮ್ಮೆ. ಆರೋಗ್ಯಕರ ಧಾನ್ಯಗಳ ಪಟ್ಟಿಯಲ್ಲಿ ಪ್ರಮುಖವಾಗಿರುವ ರಾಗಿಯನ್ನು ಹಲವು ರೂಪಗಳಲ್ಲಿ ಬಳಸಲಾಗುತ್ತದೆ. ಎಳೆಯ ಮಕ್ಕಳ ರಾಗಿ ಸರಿಯಿಂದ ಹಿಡಿದು ದೊಡ್ಡವರ ಮುದ್ದೆವರೆಗೂ ರಾಗಿ ಪ್ರಮುಖ ಆಹಾರ. ರಾಗಿ ಮುದ್ದೆ, ರಾಗಿ ರೊಟ್ಟಿ, ರಾಗಿ ಶ್ಯಾವಿಗೆ, ರಾಗಿ ದೋಸೆಯ ಜೊತೆ ಜೊತೆಗೆ ರಾಗಿಯಿಂದ ಹಲವು ಸಿಹಿ ತಿನಿಸುಗಳನ್ನು ಮಾಡಬಹುದು.

ಬೇಸಿಗಿಯಲ್ಲಿ ದೇಹವನ್ನು ತಂಪಾಗಿಡಲು ರಾಗಿ ಅಂಬಲಿಯನ್ನು ಕುಡಿಯುವವರಿಗೆ ಮತ್ತೊಂದು ಹೊಸ ರೆಸಿಪಿ ಇಲ್ಲಿದೆ. ಇದು ದೇಹವನ್ನು ತಂಪಾಗಿ ಇಡುವ ಜೊಗೆಗ ನಾಲಿಗೆಗೆ ಸಕತ್ ರುಚಿಯನ್ನು ಕೂಡ ನೀಡುತ್ತದೆ. ಅದೇ ರಾಗಿ ಹಲ್ಬಾಯಿ ಅಥವಾ ಹಾಲುಬಾಯಿ. ರಾಗಿ, ಬೆಲ್ಲ ಮತ್ತು ತೆಂಗಿನಕಾಯಿ ಬಳಸಿ ಮಾಡುವ ಈ ಆರೋಗ್ಯಕರ ರೆಸಿಪಿಯನ್ನು ಸುಲಭವಾಗಿ, ಹಂತ ಹಂತವಾಗಿ ಹೇಗೆ ಮಾಡುವುದು ಎಂಬುದನ್ನು ಇಲ್ಲಿ ನೋಡೋಣ.

Ragi halbai recipe: How to make Ragi halbai or halubai recipe

ರಾಗಿ ಹಲ್ಬಾಯಿ ಅಥವಾ ಹಾಲುಬಾಯಿ ಮಾಡುವುದು ಹೇಗೆ?

ಕರ್ನಾಟಕದ ಸಾಂಪ್ರದಾಯಿಕ ತಿಂಡಿಯಾಗಿರುವ ರಾಗಿ ಹಾಲುಬಾಯಿ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡಲಿದೆ. ಇದು ತುಂಬಾ ಸುಲಭವಾದ ರೆಸಿಪಿ. ಆದರೆ ರಾಗಿ ಹಾಲನ್ನು ಹೊರತೆಗೆಯಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಆದರೆ, ತುಂಬಾ ರುಚಿಯಾದ, ಆರೋಗ್ಯಕರವಾದ ಈ ತಿನಿಸನ್ನು ಮಾಡುವ ಹಂತ ಹಂತಗಳನ್ನು ವಿವರವಾಗಿ ಇಲ್ಲಿ ತಿಳಿಯೋಣ.

ರಾಗಿ ಹಾಲುಬಾಯಿ ಮಾಡಲು ಬೇಕಾದ ಪದಾರ್ಥಗಳು

* 1/2 ಕಪ್ ರಾಗಿ

* 1/4 ಕಪ್ ತುರಿದ ತೆಂಗಿನಕಾಯಿ

* 1/2 ಕಪ್ ಬೆಲ್ಲ (ನಿಮ್ಮ ರುಚಿಗೆ ಅನುಗುಣವಾಗಿ ಹೆಚ್ಚು ಕಡಿಮೆ ಮಾಡಿಕೊಳ್ಳಬಹುದು)

* 2 ಟೇಬಲ್ ಸ್ಪೂನ್ ತುಪ್ಪ

* 1.25 ಕಪ್ ನೀರು

* ಒಂದು ಚಿಟಿಕೆ ಏಲಕ್ಕಿ ಪುಡಿ ಅಥವಾ ನಾಲ್ಕು ಏಲಕ್ಕಿ

Ragi halbai recipe: How to make Ragi halbai or halubai recipe

ರಾಗಿ ಹಾಲುಬಾಯಿ ತಯಾರಿಸುವ ವಿಧಾನ

1. ರಾಗಿಯನ್ನು 3 - 4 ಗಂಟೆಗಳ ಕಾಲ ನೆನೆಸಿಡಿ.

2. ನೆನೆಸಿದ ರಾಗಿಯನ್ನು ಸೋಸಿ ತೆಂಗಿನ ತುರಿಯೊಂದಿಗೆ ರುಬ್ಬಿಕೊಳ್ಳಿ. ಹೆಚ್ಚು ನೀರು ಸೇರಿಸಬೇಡಿ. ಅಗತ್ಯವಿರುವ ನೀರನ್ನು ಮಾತ್ರ ಸೇರಿಸಿ.

3. ರಾಗಿ ಮತ್ತು ತೆಂಗಿನ ತುರಿ ಮಿಶ್ರಣವನ್ನು ಒಂದು ತೆಳು ಬಟ್ಟೆಯ ಸಹಾಯದಿಂದ ಸೋಸಿಕೊಳ್ಳಿ.

4. ಉಳಿದ ರಾಗಿ ಮತ್ತು ತೆಂಗಿನ ತುರಿಯನ್ನು ಹಾಲು ಬಿಡುವವರೆಗೂ ಮತ್ತೆ ಮತ್ತೆ ಸ್ವಲ್ಪ ನೀರು ಸೇರಿಸುತ್ತಾ ರುಬ್ಬಿ ಸೋಸಿಕೊಳ್ಳಿ.

5. ಒಂದು ಕಡೆ ಪಾತ್ರೆಯಲ್ಲಿ ಬೆಲ್ಲವನ್ನು ಕರಗಿಸಲು ಇಡಿ. ಪಾಕ ಮಾಡುವುದು ಬೇಡ. ಬೆಲ್ಲ ಕರಗಿದರೇ ಸಾಕು.

6. ಈಗ ರಾಗಿ ಹಾಲುಬಾಯಿ ತಯಾರಿಸಲು ಪ್ರಾರಂಭಿಸಬಹುದು.

7. ಸೋಸಿಕೊಂಡಿರುವ ರಾಗಿ ಮತ್ತು ತೆಂಗಿನ ಕಾಯಿ ಹಾಲನ್ನು ದಪ್ಪ ತಳವಿರುವ ಪಾತ್ರೆಗೆ ಸುರಿಯಿರಿ. ಇದಕ್ಕೆ ಕರಗಿಸಿಕೊಂಡಿರುವ ಬೆಲ್ಲದ ನೀರಿನ್ನು ಸೋಸಿಕೊಂಡು ಮಿಶ್ರಣ ಮಾಡಿ.

8. ಪ್ಯಾನ್ ಅನ್ನು ಒಲೆಯ ಮೇಲೆ ಇರಿಸಿ ಮತ್ತು ಕೈ ಬಿಡದೇ ಕಲಕುತ್ತಲೆ ಇರಿ. ಇದು ಕೊಂಚ ಕಷ್ಟದ ಕೆಲಸ. ನಮ್ಮ ಹಾಲುಬಾಯಿಯಲ್ಲಿ ಗಂಟುಗಳಾಗದಂತೆ ಚ್ಚರ ವಹಿಸಲು ನಾವು ಅದನ್ನು ತಿರುಗಿಸುತ್ತಲೇ ಇರಬೇಕು. ಕೊಂಚ ಗಟ್ಟಿಯಾಗುತ್ತಾ ಬಂದಂತೆ ಅದಕ್ಕೆ ಒಂದು ಚಮಚ ತುಪ್ಪ ಮತ್ತು ಚಿಟಿಕೆ ಏಲಕ್ಕಿ ಪುಡಿಯನ್ನು ಸೇರಿಸಿ.

9. ಗ್ಯಾಸ್ ಮಿಡಿಯಂನಲ್ಲಿರಲಿ. ಸುಮಾರು 5 ನಿಮಿಷಗಳ ನಂತರ ಹಾಲುಬಾಯಿ ಮಿಶ್ರಣ ಪಾತ್ರೆ ಬಿಡಲು ಪ್ರಾರಂಭಿಸುತ್ತದೆ. ಅದರ ಬಣ್ಣ ಕೂಡ ಕೊಂಚ ಮಟ್ಟಿಗೆ ಬದಲಾಗಿರುತ್ತದೆ. ಬಳಿಕ ಒಲೆ ಆಫ್ ಮಾಡಿ.

10. ಒಂದು ತಟ್ಟೆಯನ್ನು ತುಪ್ಪ ಹಚ್ಚಿ ಸವರಿಕೊಂಡಿರಿ. ಈ ಬಿಸಿ ಬಿಸಿಯಾದ ಹಾಲುಬಾಯಿಯ ಮಿಶ್ರಣವನ್ನು ತುಪ್ಪ ಸವರಿದ ತಟ್ಟೆಗೆ ಸುರಿಯಿರಿ. ತಣ್ಣಗಾಗಲು ಬಿಡಿ.

11. ತಣ್ಣಗಾದ ನಂತರ ಅದನ್ನು ನಿಮಗೆ ಬೇಕಾದ ಆಕಾರದಲ್ಲಿ ಕಟ್ ಮಾಡಿ ಆರೋಗ್ಯಕರ, ದೇಹಕ್ಕೆ ತಂಪು ನೀಡುವ ರುಚಿಯಾದ ರಾಗಿ ಹಾಲುಬಾಯಿಯನ್ನು ಸವಿಯಿರಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+