Haunted Railway Stations: ರೈಲಿನಲ್ಲಿ ಪ್ರಯಾಣ ಮಾಡ್ತೀರಾ? ಹಾಗಾದರೆ ಎಚ್ಚರ! ದೆವ್ವಗಳಿರುವ ರೈಲು ನಿಲ್ದಾಣಗಳಿವು..
ದೆವ್ವಗಳು ಚಲನಚಿತ್ರಗಳಲ್ಲಿ ನೋಡಲು ಆಸಕ್ತಿದಾಯಕವಾಗಿದ್ದರೂ ಸಹ, ನಿಜ ಜೀವನದಲ್ಲಿ ದೆವ್ವಗಳ ಬಗ್ಗೆ ಕೇಳುವುದು ಅಥವಾ ದೆವ್ವಗಳಿವೆ ಎಂದು ಹೇಳಲಾದ ಸ್ಥಳಗಳಿಗೆ ಭೇಟಿ ನೀಡುವುದು ನಿಜವಾಗಿಯೂ ನಮ್ಮನ್ನು ನಡುಗಿಸುತ್ತದೆ.
ಸಾಮಾನ್ಯವಾಗಿ ಕೆಲವು ಮನೆಗಳು ಅಥವಾ ಹಳೆಯ ಕಟ್ಟಡಗಳಲ್ಲಿ ದೆವ್ವವಿದೆ ಎಂದು ಹೇಳಲಾಗುತ್ತದೆ. ಆದರೆ ಭಾರತದ ಕೆಲವು ರೈಲು ನಿಲ್ದಾಣಗಳಲ್ಲೂ ದೆವ್ವಗಳಿವೆ. ನಿಜ, ಭಾರತದಲ್ಲಿನ ಕೆಲವು ರೈಲು ನಿಲ್ದಾಣಗಳಿಗೆ ದೆವ್ವ ಹಿಡಿದಿವೆ ಎಂದು ಹೇಳಲಾಗುತ್ತದೆ. ಹೀಗಾಗಿ ಜನರು ಅಲ್ಲಿಗೆ ಹೋಗುವುದಿಲ್ಲ. ಹಾಗಾದರೆ ಯಾವ ರೈಲು ನಿಲ್ದಾಣಗಳಲ್ಲಿ ದೆವ್ವಗಳಿವೆ ಎಂದು ನಂಬಲಾಗಿದೆ. ಅವುಗಳ ಹಿಂದಿನ ಕಥೆಗಳೇನು ಎಂದು ತಿಳಿಯೋಣ.

ಬರೋಕ್ ಸ್ಟೇಷನ್, ಶಿಮ್ಲಾ
ಶಿಮ್ಲಾದ ಬರೋಕ್ ರೈಲು ನಿಲ್ದಾಣವನ್ನು ಬ್ರಿಟಿಷ್ ರೈಲ್ವೆ ಇಂಜಿನಿಯರ್ ಕರ್ನಲ್ ಬರೋಕ್ ನಿರ್ಮಿಸಿದ್ದಾರೆ. ಇಲ್ಲಿನ ಪ್ರೇತ ಕಥೆಯೆಂದರೆ, ಈ ನಿಲ್ದಾಣದಲ್ಲಿ ಸುರಂಗವಿದೆ. ಈ ಸುರಂಗ ನಿರ್ಮಾಣ ಯೋಜನೆಯು ಪ್ರಾರಂಭವಾದ ಹಲವಾರು ದಿನಗಳ ನಂತರ, ಉದ್ದವನ್ನು ತಪ್ಪಾಗಿ ಲೆಕ್ಕಾಚಾರ ಮಾಡಿದ್ದರಿಂದ ಇಡೀ ಯೋಜನೆಯು ವಿಫಲವಾಯಿತು.
ಈ ತಪ್ಪನ್ನು ಸರ್ಕಾರ ಖಂಡಿಸಿತು. ದಂಡ ವಿಧಿಸಿತು. ಬರೋಕ್ ಅವರಿಗೆ ತುಂಬಾ ಹತಾಶೆಯವಾಯಿತು. ಒಂದು ದಿನ ಅವರು ತಮ್ಮ ನಾಯಿಯೊಂದಿಗೆ ವಾಕಿಂಗ್ ಮಾಡುವಾಗ ಬರೋಕ್ ರೈಲ್ವೆ ನಿಲ್ದಾಣದ ಸುರಂಗಮಾರ್ಗದ ಬಳಿ ರಿವಾಲ್ವರ್ನಿಂದ ಗುಂಡು ಹಾರಿಸಿಕೊಂಡರು.
ಹತಾಶರಾಗಿ ಸಾವನ್ನಪ್ಪಿದ ಬರೋಕ್ ಆತ್ಮ ಇಲ್ಲಿದೆ. ಜನರಿಗೆ ಆಗಾಗ ಕಾಣಿಸಿಕೊಳ್ಳುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗಿ ಜನ ಇಲ್ಲಿಗೆ ಹೋಗಲು ಹೆದರುತ್ತಾರೆ. ಈ ರೈಲು ನಿಲ್ದಾಣವನ್ನು ಭಾರತದ ಡೇಂಜರಸ್ ಹಾಂಟೆಡ್ ರೈಲು ನಿಲ್ದಾಣವೆಂದು ಪರಿಗಣಿಸಲಾಗಿದೆ. ಅಲ್ಲದೆ ಸುರಂಗವನ್ನು ಪ್ರವೇಶಿಸಿದಾಗ ಪ್ರತಿಯೊಬ್ಬ ಪ್ರಯಾಣಿಕರು ಭಯದ ಭಾವನೆಯನ್ನು ಅನುಭವಿಸುತ್ತಾರೆ.

ಬೇಗಂಕೋದರ್ ರೈಲು ನಿಲ್ದಾಣ, ಪಶ್ಚಿಮ ಬಂಗಾಳ
ಈ ರೈಲು ನಿಲ್ದಾಣ ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ಸಮೀಪದಲ್ಲಿದೆ. ಈ ರೈಲು ನಿಲ್ದಾಣದಲ್ಲಿ ಮಹಿಳೆಯ ಆತ್ಮವೊಂದು ಇದೆ ಎಂದು ಜನ ಹೇಳುತ್ತಾರೆ. ಅದು ಆಗಾಗ ಜನರ ಕಣ್ಣಿಗೆ ಕೂಡ ಕಾಣಿಸಿಕೊಂಡಿದೆ. ಮಧ್ಯರಾತ್ರಿ ಕೆಲವು ರೈಲುಗಳ ಆಗಮನದ ಸಮಯದಲ್ಲಿ ಬಿಳಿ ಸೀರೆಯನ್ನು ಧರಿಸಿದ ಮಹಿಳೆಯೊಬ್ಬಳು ರೈಲು ಹಳಿಯ ಮೇಲೆ ಹಾಗೂ ನಿಲ್ದಾಣದ ಬಳಿ ಕಾಣಿಸಿಕೊಂಡಿರುವುದನ್ನು ಜನರು ಹೇಳಿಕೊಳ್ಳುತ್ತಾರೆ.
ಈ ಮಹಿಳಾ ಪ್ರೇತವನ್ನು ನೋಡಿದ ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ, ಈ ಮಹಿಳೆ ಒಮ್ಮೆ ಬೇಗಂಕೋಡರ್ ರೈಲು ನಿಲ್ದಾಣದಲ್ಲಿ ರೈಲು ಅಪಘಾತದಲ್ಲಿ ಸಾವನ್ನಪ್ಪಿದಳೂ. ಆಕೆಯ ಆತ್ಮ ಮಧ್ಯರಾತ್ರಿಯಲ್ಲಿ ಇಲ್ಲಿ ತಿರುಗಾಡುತ್ತದೆ. ಮಧ್ಯರಾತ್ರಿ ಈ ನಿಲ್ದಾಣದ ಸುತ್ತಲು ನಿರ್ಜನವಾಗಿರುತ್ತದೆ. ಭಯದ ವಾತಾವರಣ ಇರುತ್ತದೆ. ಹೀಗಾಗಿ ಇದನ್ನು ಭಾರತದ ಹಾಂಟೆಡ್ ರೈಲ್ವೆ ನಿಲ್ದಾಣ ಎಂದು ಕರೆಯಲಾಗುತ್ತದೆ.
ಡೊಂಬಿವಿಲಿ ರೈಲು ನಿಲ್ದಾಣ, ಮಹಾರಾಷ್ಟ್ರ
ಈ ರೈಲ್ವೇ ನಿಲ್ದಾಣ ಭಾರತದ ಅತ್ಯಂತ ಭಯಭೀತ ರೈಲು ನಿಲ್ದಾಣಗಳಲ್ಲಿ ಒಂದಾಗಿದೆ. ಏಕೆಂದರೆ ಈ ಪ್ರದೇಶದಲ್ಲಿ ಸಾವಿರಾರು ಅಪಘಾತಗಳು ಸಂಭವಿಸಿವೆ. ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಗಾಗ ಸಾಕಷ್ಟು ಕಿರುಚಾಟಗಳು ಕೇಳಿಬರುತ್ತವೆ.

ಪ್ರತಿ ರಾತ್ರಿ ಒಬ್ಬ ಮಹಿಳೆ ನಿಂತು ಅಳುವುದನ್ನು ಜನ ನೋಡಿದ್ದಾರೆ. ಜನ ಆಕೆಯನ್ನು ಮಾತನಾಡಿಸಿದಾಗ, 'ಆಕೆ ಮನೆಗೆ ಹಿಂತಿರುಗಬೇಕು ಆದರೆ ಸಾಧ್ಯವಿಲ್ಲ. ಯಾಕೆಂದರೆ ನಾ ಬದುಕಿಲ್ಲ' ಎಂದು ಉತ್ತರಿಸುತ್ತಾಳೆ. ಮಧ್ಯರಾತ್ರಿ ಇಲ್ಲಿ ಕಿರುಚಾಟ, ನರಲಾಟ ಹಾಗೂ ಅಳುವಿನ ಆಕ್ರಂದನ ಕೇಳಿಸುತ್ತದೆ ಎಂದು ಜನ ಹೇಳಿಕೊಂಡಿದ್ದಾರೆ. ಹೀಗಾಗಿ ಮಹಾರಾಷ್ಟ್ರದ ಡೊಂಬಿವಿಲಿ ರೈಲು ನಿಲ್ದಾಣವನ್ನು ಭಾರತದ ಅತ್ಯಂತ ಡೇಂಜರಸ್ ಹಾಂಟೆಡ್ ರೈಲು ನಿಲ್ದಾಣಗಳಲ್ಲಿ ಒಂದಾಗಿದೆ.
ಚಿತ್ತೂರು ರೈಲು ನಿಲ್ದಾಣ, ಆಂಧ್ರಪ್ರದೇಶ
ಸಂಜೆ ವೇಳೆ ಚಿತ್ತೂರು ರೈಲು ನಿಲ್ದಾಣ ನಿರ್ಜನವಾಗಿರುತ್ತದೆ. ಇಲ್ಲಿ ಜನರ ಓಡಾಟ ಇರುವುದೇ ಇಲ್ಲ. ಯಾಕೆಂದರೆ ಇಲ್ಲಿ ದೆವ್ವವಿದೆ ಎಂದು ಜನ ಮಾತನಾಡಿಕೊಳ್ಳುತ್ತಾರೆ. ಚಿತ್ತೂರಿನ ಜನರಲ್ಲಿ ಭೂತದ ಬಗ್ಗೆ ತುಂಬಾ ಭಯವಿದೆ. ದೆಹಲಿಯಿಂದ ಕೇರಳಕ್ಕೆ ರೈಲಿನಲ್ಲಿ ಆರ್‌ಪಿಎಫ್ ಸಿಬ್ಬಂದಿಯಿಂದ ಹಲ್ಲೆಗೊಳಗಾದ ಸಿಆರ್‌ಪಿಎಫ್ ಅಧಿಕಾರಿ ಹರಿಸಿಂಗ್ ಅವರ ಆತ್ಮ ಇಲ್ಲಿನ ಪ್ರಯಾಣಿಕರನ್ನು ಕಾಡುತ್ತಿದೆ ಎಂದು ಹೇಳಲಾಗುತ್ತದೆ.
ಹರಿಸಿಂಗ್ ಅವರ ಗಾಯಗಳು ಗಂಭೀರವಾದ ಕಾರಣ, ಅವರು ಚಿತ್ತೂರು ರೈಲು ನಿಲ್ದಾಣದಲ್ಲಿ ಕೆಳಗಿಳಿಯಬೇಕಾಯಿತು. ಸ್ಥಳೀಯ ಆಸ್ಪತ್ರೆಗೆ ದಾಖಲಾದ 10 ದಿನಗಳಲ್ಲಿ ಅವರು ಸಾವನ್ನಪ್ಪಿದರು. ಅಂದಿನಿಂದ, ಅವರ ಆತ್ಮವು ನ್ಯಾಯ ಮತ್ತು ಪ್ರತೀಕಾರಕ್ಕಾಗಿ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್‌ಗಳಲ್ಲಿ ತಿರುಗುತ್ತದೆ ಎಂದು ನಂಬಲಾಗಿದೆ.
ನೈನಿ ಜಂಕ್ಷನ್, ಉತ್ತರ ಪ್ರದೇಶ
ನೈನಿ ಜೈಲು ನೈನಿ ರೈಲ್ವೆ ನಿಲ್ದಾಣದ ಬಳಿ ಇದೆ. ಇದು ಒಂದು ಕಾಲದಲ್ಲಿ ಅನೇಕ ರಾಜಕೀಯ ಭಿನ್ನಮತೀಯರು ಚಿತ್ರಹಿಂಸೆಗೆ ಒಳಗಾಗಿದ್ದ ಜೈಲು. ಈ ಚಿತ್ರಹಿಂಸೆಗೊಳಗಾಗಿ ಸಾವನ್ನಪ್ಪಿದ 'ಪ್ರೇತಗಳು' ಸೂರ್ಯಾಸ್ತದ ನಂತರ ಜಂಕ್ಷನ್‌ನಲ್ಲಿ ಸಂಚರಿಸುತ್ತವೆ ಎಂದು ಹೇಳಲಾಗುತ್ತದೆ. ಏಕೆಂದರೆ ಚಿತ್ರಹಿಂಸೆಯಿಂದ ಸಾವನ್ನಪ್ಪಿದವರ ಆತ್ಮಗಳು ತಮ್ಮ ಮರಣಾನಂತರದ ಜೀವನದಲ್ಲಿ ಶಾಂತಿಯನ್ನು ಕಾಣುವುದಿಲ್ಲ.
ಲುಧಿಯಾನ ಜಂಕ್ಷನ್, ಪಂಜಾಬ್
ಲುಧಿಯಾನ ಜಂಕ್ಷನ್ ನಲ್ಲೂ ಆತ್ಮವಿದೆ ಎಂದು ಹೇಳಲಾಗುತ್ತದೆ. ಇದು ಆಗಾಗ ಪ್ರಯಾಣಿಕರಿಗೆ ಕಾಣಿಸಿಕೊಂಡಿದೆ ಎಂದು ಜನ ಮಾತನಾಡಿಕೊಳ್ಳುತ್ತಾರೆ. ಅಲ್ಲದೆ ಇಲ್ಲಿ ಮಲಗಿದ್ದ ರೈಲು ಪ್ರಯಾಣಿಕರನ್ನ ಎಬ್ಬಿಸಿ ಆತ್ಮವೊಂದು ಮಾತನಾಡಿಸಿ ಮಾಯವಾಗಿದೆ ಎನ್ನಲಾಗುತ್ತದೆ.
2004ರಲ್ಲಿ ನಿಧನರಾದ ಮಾಜಿ ಕಂಪ್ಯೂಟರ್ ರಿಸರ್ವೇಶನ್ ಸಿಸ್ಟಮ್ ಅಧಿಕಾರಿ ಸುಭಾಷ್ ಅವರ ಆತ್ಮ ಆಗಾಗ್ಗೆ ನಿಲ್ದಾಣಕ್ಕೆ ಬರುತ್ತದೆ. ಸುಭಾಷ್ ಅವರು ತಮ್ಮ ಕೆಲಸವನ್ನು ತುಂಬಾ ಪ್ರೀತಿಸುತ್ತಿದ್ದರು ಎಂದು ಕೆಲವರು ಹೇಳುತ್ತಾರೆ. ಅವರ ನಿಧನದ ನಂತರ, ಅವರ ಆತ್ಮವು ಅವರು ಕೆಲಸ ಮಾಡುತ್ತಿದ್ದ ಬುಕಿಂಗ್ ಸೆಂಟರ್ ಕಚೇರಿಯಲ್ಲಿ ನೆಲೆಸಿರುತ್ತದೆ. ಹೀಗಾಗಿ ಲುಧಿಯಾನ ಜಂಕ್ಷನ್ ಅನ್ನು ಭಾರತದ ಟಾಪ್ 10 ಹಾಂಟೆಡ್ ರೈಲು ನಿಲ್ದಾಣಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.
ಸೊಹಾಗ್‌ಪುರ ನಿಲ್ದಾಣ, ಮಧ್ಯಪ್ರದೇಶ
ಸೋಹಾಗ್‌ಪುರ ರೈಲು ನಿಲ್ದಾಣ ಮಧ್ಯಪ್ರದೇಶದ ಭೋಪಾಲ್ ಬಳಿ ಇದೆ. ಪ್ಲಾಟ್‌ಫಾರ್ಮ್‌ನಲ್ಲಿ ಮಧ್ಯರಾತ್ರಿ ರೈಲು ನಿಂತಾಗ ರೈಲು ಒಳಗಿದ್ದ ಪ್ರಯಾಣಿಕರಿಗೆ ವಿಚಿತ್ರ ಧ್ವನಿಗಳು ಕೇಳಿ ಬಂದಿವೆ. ನೋವು ಮತ್ತು ಸಂಕಟದಿಂದ ಕಿರುಚುತ್ತಿರುವ ಮಹಿಳೆಯ ಧ್ವನಿ ಕೇಳಿಸಿದೆ ಎಂದು ಈ ಜನರು ಹೇಳಿಕೊಳ್ಳುತ್ತಾರೆ. ಹೀಗಾಗಿ ಇದನ್ನು ಭಾರತದಲ್ಲಿನ ಡೇಂಜರಸ್ ಹಾಂಟೆಡ್ ರೈಲು ನಿಲ್ದಾಣಗಳಲ್ಲಿ ಒಂದು ಎನ್ನಲಾಗುತ್ತದೆ.
-
SWR: ಪ್ರಶಾಂತಿ ಎಕ್ಸ್ಪ್ರೆಸ್ ರೈಲಿಗೆ ಹೆಚ್ಚುವರಿ ಬೋಗಿ: ರೈಲುಗಳ ನಿಲುಗಡೆಯಲ್ಲಿ ಬದಲಾವಣೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ












Click it and Unblock the Notifications