ಮನಿ ಪ್ಲಾಂಟ್ ಬೆಳೆಸಿದ ಕೂಡಲೇ ಅದೃಷ್ಟ ಬರುವುದಿಲ್ಲ! ಈ ದಿಕ್ಕಿನಲ್ಲಿ ಇರಿಸಿದಾಗ ಮಾತ್ರ ಸಿಗುವುದು ಕೈ ತುಂಬಾ ಹಣ
Money Plant Vastu: ಅನೇಕ ಜನರು ತಮ್ಮ ಮನೆಗಳಿಗೆ ಹಣ ಮತ್ತು ಪಾಸಿಟಿವ್ ಎನರ್ಜಿಯನ್ನು ಆಕರ್ಷಿಸಲು ಮನಿ ಪ್ಲಾಂಟ್ ನೆಡುತ್ತಾರೆ. ಈ ಗಿಡಗಳನ್ನು ಹಾಲ್, ಬಾಲ್ಕನಿ ಮತ್ತು ಮನೆಯ ಮುಖ್ಯ ದ್ವಾರದ ಬಳಿ ಸುಂದರವಾಗಿ ಜೋಡಿಸಿಡುತ್ತಾರೆ. ಕೆಲವರಂತೂ ಮನೆ ಹೊಸ್ತಿಲ ಬಳಿ ಸಾಲಾಗಿ ಮನಿ ಪ್ಲಾಂಟ್ ಗಿಡಗಳನ್ನು ನೆಡುತ್ತಾರೆ.
ಆದರೆ, ಇಲ್ಲಿ ಮುಖ್ಯವಾಗಿ ತಿಳಿದುಕೊಳ್ಳಬೇಕಾದ ಅಂಶ ಎಂದರೆ ಮನಿ ಪ್ಲಾಂಟ್ ನೆಟ್ಟ ಕೂಡಲೇ ಹಣ ಹರಿದು ಬರುವುದೂ ಇಲ್ಲ ನೆಗೆಟಿವ್ ಎನರ್ಜಿ ಮನೆ ಬಿಟ್ಟು ಹೋಗುವುದೂ ಇಲ್ಲ. ಮನಿ ಪ್ಲಾಂಟ್ ನೆಡುವುದಕ್ಕೂ ರೀತಿ ನೀತಿ ಎನ್ನುವುದಿದೆ. ಅದನ್ನು ಚಾಚೂ ತಪ್ಪದೆ ಪಾಲಿಸಿದಾಗ ಮಾತ್ರ ಮನಿ ಪ್ಲಾಂಟ್‌ನಿಂದ ಆಗುವ ಲಾಭ ಸಿಗುವುದು.

ಮನಿ ಪ್ಲಾಂಟ್ ಇಡಲು ಸರಿಯಾದ ಜಾಗ
ಇನ್ನು ಮನೆಯಲ್ಲಿ ಎಷ್ಟು ಮನಿ ಪ್ಲಾಂಟ್ ಇಡಬೇಕು ಒಂದಕ್ಕಿಂತ ಹೆಚ್ಚು ಗಿಡಗಳನ್ನು ಇಡಬಹುದೇ ಎನ್ನುವ ಸಂದೇಹ ಕೆಲವರಿಗೆ ಇರುತ್ತದೆ. ವಾಸ್ತು ನಂಬಿಕೆಗಳ ಪ್ರಕಾರ, ಮನೆಯ ಮುಖ್ಯ ದ್ವಾರದ ಎರಡೂ ಬದಿಗಳಲ್ಲಿ ಮನಿ ಪ್ಲಾಂಟ್ ನೆಡಬಹುದು. ಈ ರೀತಿ ಮನಿ ಪ್ಲಾಂಟ್ ನೆಡುವುದರಿಂದ ಮನೆಯ ಮುಖ್ಯ ದ್ವಾರ ಸುಂದರವಾಗಿ ಕಾಣುವುದಲ್ಲದೆ, ಮನೆಯಲ್ಲಿನ ಶಕ್ತಿಯನ್ನು ಸಮತೋಲನಗೊಳಿಸಲು ಸಹಾಯವಾಗುತ್ತದೆ.
ಸರಿಯಾದ ದಿಕ್ಕು ಯಾವುದು?
ವಾಸ್ತು ಶಾಸ್ತ್ರದ ಪ್ರಕಾರ, ಮನಿ ಪ್ಲಾಂಟ್ ಅನ್ನು ನಿಮಗೆ ಎಲ್ಲಿ ಬೇಕೋ ಅಲ್ಲಿ ಇಡುವಂತಿಲ್ಲ. ಅದನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿದಾಗ ಮಾತ್ರ ಅದರಿಂದ ಸಿಗುವ ಪ್ರಯೋಜನಗಳು ಸಿಗುವುದು. ಇಲ್ಲಿ ದಿಕ್ಕು ಬಹಳ ಮುಖ್ಯವಾಗಿರುತ್ತದೆ. ಮನಿ ಪ್ಲಾಂಟ್‌ಗೆ ಆಗ್ನೇಯ ದಿಕ್ಕು ಅನುಕೂಲಕರ. ಆದ್ದರಿಂದ, ಮುಖ್ಯ ದ್ವಾರದ ಬಳಿ ಮನಿ ಪ್ಲಾಂಟ್ ಇಡುವಾಗ ಅದನ್ನು ಆಗ್ನೇಯ ದಿಕ್ಕಿನಲ್ಲಿಯೇ ಇರಿಸಲು ಮರೆಯಬಾರದು. ಸರಿಯಾದ ದಿಕ್ಕಿನಲ್ಲಿ ಈ ಗಿಡವನ್ನು ಇಟ್ಟರೆ, ಪಾಸಿಟಿವ್ ಎನರ್ಜಿ ಮನೆ ತುಂಬಾ ಹರಡುವುದು.
Money Plant Vastu:ಬಳ್ಳಿ ನೆಲಕ್ಕೆ ತಾಗಬಾರದು
ಇನ್ನು ವಾಸ್ತು ನಿಯಮದ ಪ್ರಕಾರ ಮನಿ ಪ್ಲಾಂಟ್ ಬಳ್ಳಿ ಬೆಳೆಯುವ ವಿಧಾನವೂ ಬಹಳ ಮುಖ್ಯವಾಗಿರುತ್ತದೆ. ಈ ಗಿಡದ ಬಳ್ಳಿ ನೆಲವನ್ನು ತಾಗಬಾರದು. ಇದರ ಬಳ್ಳಿ ಮೇಲಕ್ಕೆ ಏರುತ್ತಾ ಹೋಗಬೇಕು. ಹಾಗಾಗಿ ಮೇಲ್ಮುಖವಾಗಿ ಏರಲು ಇದಕ್ಕೆ ಅವಕಾಶ ಕಲ್ಪಿಸಿಕೊಡಬೇಕು. ಈ ಗಿಡದ ಬಳ್ಳಿ ನೆಲ ತಾಗದಂತೆ ಕೋಲನ್ನು ಆಧಾರವಾಗಿ ಇಡಬೇಕು. ಮೇಲಕ್ಕೆ ಬೆಳೆಯುವ ಮನಿ ಪ್ಲಾಂಟ್ ಅನ್ನು ಮನೆಯ ಅಭಿವೃದ್ಧಿ ಮತ್ತು ಆರ್ಥಿಕ ಪರಿಸ್ಥಿತಿಯಲ್ಲಿ ಬಹಳ ಮುಖ್ಯ ಪಾತ್ರ ವಹಿಸಿರುತ್ತದೆ.
ಇನ್ನೊಂದು ಪ್ರಮುಖ ಅಂಶ ಅಂದರೆ ಮನಿ ಪ್ಲಾಂಟ್ ಅನ್ನು ಯಾವಾಗಲೂ ಆರೋಗ್ಯಕರವಾಗಿ ಮತ್ತು ಹಸಿರಾಗಿ ಇಡಬೇಕು. ಎಲೆಗಳು ಹಳದಿ ಬಣ್ಣಕ್ಕೆ ತಿರುಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಈ ಗಿಡದ ಬಣ್ಣ ಹಳದಿಗೆ ತಿರುಗಿದರೆ ಅಥವಾ ಒಣಗಿದರೆ ಅವುಗಳನ್ನು ತಕ್ಷಣ ತೆಗೆದುಹಾಕಬೇಕು. ಮನೆಯ ಮುಖ್ಯ ದ್ವಾರದ ಬಳಿ ಸಸ್ಯವನ್ನು ತಾಜಾ ಮತ್ತು ಆಕರ್ಷಕವಾಗಿ ಇಡುವುದರಿಂದ ಮನೆಯ ಸೌಂದರ್ಯವೂ ಹೆಚ್ಚಾಗುತ್ತದೆ.
Money Plant Vastu:ಪಾಟ್ ಕೂಡಾ ಬಹಳ ಮುಖ್ಯ
ಇನ್ನು ಈ ಗಿಡವನ್ನು ಯಾವ ಪಾಟ್‌ನಲ್ಲಿ ಹಾಕಿ ಬೆಳೆಸುತ್ತೇವೆ ಎನ್ನುವುದು ಕೂಡಾ ಬಹಳ ಮುಖ್ಯವಾಗಿರುತ್ತದೆ. ಮನೆಯ ಮುಖ್ಯ ದ್ವಾರದ ಬಳಿ ಮನಿ ಪ್ಲಾಂಟ್ ಇರಿಸುವಾಗ ಜೇಡಿಮಣ್ಣು ಅಥವಾ ಸೆರಾಮಿಕ್ ಪಾಟ್‌ಗಳನ್ನು ಬಳಸುವುದು ಉತ್ತಮ ಎನ್ನುತ್ತದೆ ವಾಸ್ತು ಶಾಸ್ತ್ರ. ಇದನ್ನು ಹಸಿರು ಗಾಜಿನ ಬಾಟಲಿಯಲ್ಲಿಯೂ ಬೆಳೆಸಬಹುದು. ಒಟ್ಟಾರೆಯಾಗಿ, ಮುಖ್ಯ ದ್ವಾರದ ಬಳಿ ಆಗ್ನೇಯ ದಿಕ್ಕಿನಲ್ಲಿ ಈ ಗಿಡವನ್ನು ಇಟ್ಟರೆ ಬಹಳ ಒಳ್ಳೆಯದು. ಇಲ್ಲಿ ಸಸ್ಯ ಯಾವ ರೀತಿ ಬೆಳೆಯುತ್ತಿದೆ ಎನ್ನುವುದು ಕೂಡಾ ಬಹಳ ಮುಖ್ಯವಾಗಿರುತ್ತದೆ.


Click it and Unblock the Notifications
