Mental health Tips: ಪ್ರತಿ ಟೀಕೆಗೂ ರಿಯಾಕ್ಟ್‌ ಮಾಡಲೇ ಬೇಕೆಂದಿಲ್ಲ, ಈ 3 ವಿಚಾರ ಗೊತ್ತಿದ್ದರೆ ಸುಮ್ಮನಿದ್ದೂ ಗೆಲ್ಲಬಹುದು!

Mental Health: ಕೆಲವರಿಗೆ ಯಾರು ಏನೇ ಹೇಳಿದರೂ ತಡೆದುಕೊಳ್ಳುವ ಶಕ್ತಿಯೇ ಇಲ್ಲ. ಸುಮ್ಮನಿರುವುದಕ್ಕೆ ಆಗುವುದೇ ಇಲ್ಲ. ಎದುರಿಗಿರುವವರು ಒಂದು ಮಾತಾಡಿದವರಿಗೆ ಹತ್ತು ಉತ್ತರ ಕೊಟ್ರೇನೇ ಸಮಾಧಾನ. ಆದ್ರೆ ಈ ರೀತಿ ಮಾಡೋದು ಎಷ್ಟು ಸರಿ? ವಾದಕ್ಕೆ ಪ್ರತಿವಾದ ಇರಲೇ ಬೇಕಾ? ಆಕ್ಷನ್‌ಗೆ ರಿಯಾಕ್ಷನ್‌ ಇರೋದು ಸಹಜಾನೇ. ಆದ್ರೆ ಕೆಲವೊಂದು ಸಲ ಏನೋ ಹೇಳದೆ ಸುಮ್ಮನಿರೋದು ಕೂಡಾ ಸಮಸ್ಯೆಗೆ ಪರಿಹಾರ ಆಗಬಹುದು. ಮೌನ ಬಂಗಾರ ಅಂತ ಹೇಳ್ತಾರಲ್ಲ ಹಾಗೆ. ಮೌನಕ್ಕೆ ಇರುವ ಶಕ್ತಿ ಮಾತಿಗೆ ಖಂಡಿತಾ ಇಲ್ಲ.

ಎಲ್ಲದಕ್ಕೂ ನಾವು ರಿಯಾಕ್ಟ್‌ ಮಾಡಿದರೇ ಮಾತ್ರ ನಾವು ಸ್ಟ್ರಾಂಗ್‌ ಎಂದಲ್ಲ. ಎಲ್ಲಿ ಎಷ್ಟು ಮಾತನಾಡಬೇಕು, ಹೇಗೆ ಮಾತನಾಡಬೇಕು ಎನ್ನುವ ಜ್ಞಾನ ಇದ್ದಾಗಲೇ ನಮ್ಮ ಮೆಚ್ಯುರಿಟಿ ಲೆವೆಲ್‌ ತಿಳಿಯೋದು. ಕೆಲವೊಮ್ಮೆ ನಮ್ಮ ಮಾತೇ ಎಲ್ಲವನ್ನೂ ಕೆಡಿಸಿ ಬಿಡುತ್ತದೆ. ಮಾತು ಮನೆ ಕೆಡಿಸ್ತು ತೂತು ಒಲೆ ಕೆಡಿಸ್ತು ಅಂತಾರಲ್ಲ ಹಾಗೆ. ಏನೋ ಹೇಳುವುದಕ್ಕೆ ಹೋಗಿ ಇನ್ನೇನೋ ಹೇಳಿ ಸಾಸಿವೆಯಷ್ಟಿದ್ದ ಸಮಸ್ಯೆಯನ್ನು ಬೆಟ್ಟದಷ್ಟು ಮಾಡಿಕೊಂಡು ಬಿಡುತ್ತೇವೆ. ಹಾಗಂತ ಎದುರಿನವರು ಏನೇ ಅಂದರೂ ನಾವು ಸುಮ್ಮನೇ ಇರಬೇಕು ಎಂದಾದರೆ ಮೆಂಟಲಿ, ಎಮೋಸನಲಿ ನಾವು ಸ್ಟ್ರಾಂಗ್‌ ಇರಬೇಕು.

Mental health Tips

ಮೆಂಟಲಿ ಸ್ಟ್ರಾಂಗ್‌ ಆಗುವುದು ಹೇಗೆ ?

ಮಾನಸಿಕವಾಗಿ ಬಲಿಷ್ಠರಾಗಿರುವವರು ಪ್ರತಿ ಸಲ ಯುದ್ಧಕ್ಕೆ ಇಳಿಯುವುದಿಲ್ಲ ಎನ್ನುತ್ತಾರೆ ಮನಶ್ಶಾಸ್ತ್ರಜ್ಞರು. ಯಾವಾಗ ಮಾತನಾಡಬೇಕು ಯಾವ ಹೊತ್ತಿನಲ್ಲಿ ಸುಮ್ಮನಿರಬೇಕು ಎನ್ನುವ ನಿರ್ಧಾರವನ್ನು ಅವರು ಸರಿಯಾದ ಸಮಯದಲ್ಲಿ ತೆಗೆದುಕೊಳ್ಳುತ್ತಾರೆ. ತಮ್ಮ ಭಾವನೆಗಳನ್ನು ಕಂಟ್ರೋಲ್‌ನಲ್ಲಿ ಇಟ್ಟುಕೊಳ್ಳುವವರಿಗೆ ಹೆಚ್ಚು ಒತ್ತಡ ಇರುವುದೇ ಇಲ್ಲ. ಅದೇನೇ ಕಷ್ಟ ಬರಲಿ, ಸರಿಯಾದ ನಿರ್ಧಾರವನ್ನೇ ತೆಗೆದುಕೊಳ್ತಾರೆ.

ಪ್ರಬುದ್ಧ ವ್ಯಕ್ತಿ ಎನಿಸಿಕೊಳ್ಳಬೇಕಾದರೆ ಎಲ್ಲರ ಮೇಲೇರಿಕೊಂಡು ಹೋಗೊದು, ಬೊಬ್ಬೆ ಹಾಕಿ ಮಾತನಾಡಿ ಎಲ್ಲರ ಬಾಯಿ ಮುಚ್ಚಿಸುವುದು ಎಂದಲ್ಲ. ಯಾವ ಮಾತಿಗೆ ರಿಯಾಕ್ಟ್‌ ಮಾಡಬೇಕು ಎಲ್ಲಿ ನಿರ್ಲಕ್ಷ್ಯ ತೋರಬೇಕು ಎನ್ನುವುದು ಗೊತ್ತಿರಬೇಕು.

1. ತಕ್ಷಣ ಪ್ರತಿಕ್ರಿಯಿಸುವ ಅಗತ್ಯ ಇಲ್ಲ

ಕೆಲವೊಮ್ಮೆ ಕೆಲವು ಮಾತುಗಳನ್ನು ಕೇಳಿದಾಗ ಕೋಪ ನೆತ್ತಿಗೇರಿ ಬಿಡುತ್ತದೆ. ಇದು ಸಹಜ ಕೂಡಾ. ಆದರೆ ಕೋಪದ ಕೈಗೆ ಬುದ್ದಿ ಕೊಟ್ಟು ತಕ್ಷಣ ಪ್ರತಿಕ್ರಿಯಿಸಿದರೆ ಎಲ್ಲವೂ ಹಾಳಾಗಿ ಹೋಗುತ್ತದೆ. ನಾವು ಕೋಪ ಮಾಡಿಕೊಂಡಾಗ ಅಥವಾ ನಮಗೆ ಅತಿಯಾಗಿ ಕೋಪ ಬಂದಾಗ ಮೆದುಳಿನ ಭಾವನಾತ್ಮಕ ಭಾಗವು ಹೆಚ್ಚು ಆಕ್ಟಿವ್‌ ಆಗುತ್ತದೆ. ಆಗ ನಿರ್ಧಾರ ತೆಗೆದುಕೊಳ್ಳುವ ನಮ್ಮ ಸಾಮರ್ಥ್ಯವೇ ವೀಕ್‌ ಆಗುತ್ತದೆ. ಹಾಗಾಗಿ ಕೋಪ ಬಂದಾಗ ಎಷ್ಟೇ ಮಾತನಾಡಬೇಕು ಅಂತ ಅನಿಸಿದರೂ ಸುಮ್ಮನಿದ್ದು ಬಿಡಿ.
ಜೋರಾಗಿ ಉಸಿರು ಎಳೆದುಕೊಳ್ಳಿ. ಆ ಜಾಗದಿಂದ ಎದ್ದು ಸ್ವಲ್ಪ ಹೊತ್ತು ಹೊರಗೆ ಬಂದು ನಡೆದಾಡಿ. ನೀರು ಕುಡಿಯಿರಿ. ಇಷ್ಟಾಗುವಾಗ ನಿಮ್ಮ ಮನಸ್ಸು ಶಾಂತವಾಗುತ್ತದೆ. ಆಗ ಎದುರಿಗಿರುವ ವ್ಯಕ್ತಿಯ ಮಾತಿಗೆ ಉತ್ತರ ಕೊಡಬೇಕೋ ಬೇಡವೋ ಎನ್ನುವುದನ್ನು ನಿರ್ಧರಿಸಿ.

2. ಪ್ರತಿಯೊಂದು ಟೀಕೆ ವೈಯಕ್ತಿಕ ದಾಳಿಯಲ್ಲ

ಯಾರು ಏನೇ ಹೇಳಿದರೂ ಅದನ್ನು ತೀರಾ ಪರ್ಸನಲ್‌ ಆಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಎಲ್ಲಾ ಟೀಕೆಯೂ ಅವಮಾನವಾಗುವುದಕ್ಕೆ ಸಾಧ್ಯವಿಲ್ಲ. ಮಾನ, ಅವಮಾನದ ಯೋಚನೆ ಬಿಟ್ಟು ಅವರ ಅಭಿಪ್ರಾಯದ ಬಗ್ಗೆ ಸರಿಯಾಗಿ ಯೋಚಿಸಿ. ಅವರ ಮಾತುಗಳು ನೀವು ಮಾಡಿರುವ ತಪ್ಪನ್ನು ಎತ್ತಿ ತೋರಿಸುತ್ತಿದೆ ಎಂದಾದರೆ ಸರಿಯಾಗಿ ಕೇಳಿಸಿಕೊಳ್ಳಿ. ನಿಮ್ಮ ತಪ್ಪನ್ನು ತಿದ್ದಿಕೊಳ್ಳುವ ಅವಕಾಶವೂ ನಿಮಗೆ ಸಿಗಬಹುದು. ಆದರೆ ಒಂದು ವೇಳೆ ಎದುರಿಗಿರುವ ವ್ಯಕ್ತಿ ನಿಮ್ಮನ್ನು ಕೆಳಗೆ ಹಾಕುವ ಸಲುವಾಗಿಯೇ ಮಾತನಾಡುತ್ತಿದ್ದರೆ ಆ ಮಾತುಗಳನ್ನು ಮನಸ್ಸಿಗೆ ತೆಗೆದುಕೊಳ್ಳುವ ಅವಶ್ಯಕತೆಯಿಲ್ಲ.

ಮಾನಸಿಕವಾಗಿ ಬಲಿಷ್ಠರಾಗಿರುವವರು ಬೇರೆಯವರ ಮಾತಿಗೆ ಕಟ್ಟು ಬಿದ್ದು ತಮ್ಮನ್ನು ರೂಪಿಸಿಕೊಳ್ಳುವುದಿಲ್ಲ. ತಮ್ಮ ನಡೆ ನುಡಿಯಿಂದ ತಮ್ಮ ಮೌಲ್ಯವನ್ನು ಹೆಚ್ಚಿಸಿಕೊಳ್ಳುತ್ತಾರೆ.

3. ಈ ವಾದ ಎಷ್ಟು ಮುಖ್ಯ ಎನ್ನವ ಪ್ರಶ್ನೆ ನಿಮಗೇ ಕೇಳಿ

ವಾದವನ್ನು ಗೆದ್ದ ಕೂಡಲೇ ಜೀವನದಲ್ಲಿ ಗೆದ್ದೆವು ಎಂದಲ್ಲ. ಹಾಗಾಗಿ ವಾದ ಮಾತು ಜಗಳ ಇದರಲ್ಲಿ ನಿಮ್ಮ ಶಕ್ತಿಯನ್ನು ವೇಸ್ಟ್‌ ಮಾಡುವ ಬದಲು ಅದನ್ನು ಸರಿಯಾದ ಜಾಗದಲ್ಲಿ ಬಳಸಿ. ಆಗ ವ್ಯತ್ಯಾಸ ಗೊತ್ತಾಗುತ್ತದೆ. ಪ್ರತಿಯೊಂದು ಟೀಕೆಗೆ ಪ್ರತಿಕ್ರಿಯಿಸುತ್ತಾ ಹೋದರೆ ನಿಮ್ಮ ಸಮಯ ಮತ್ತು ಶಕ್ತಿಯನ್ನು ಅಲ್ಲೇ ಕಳೆಯಬೇಕಾಗುತ್ತದೆ. ಯಾವುದೇ ವಾದದಲ್ಲಿ ಪಾಲು ಪಡೆಯುವ ಮುನ್ನ ನಿಮ್ಮಲ್ಲಿ ನೀವು ಒಂದು ಪ್ರಶ್ನೆ ಹಾಕಿಕೊಳ್ಳಿ. ಈ ವಾದವು ಒಂದು ವಾರದ ನಂತರವೂ ಇಷೇ ಮುಖ್ಯವಾಗುತ್ತದೆಯಾ ಎಂದು? ನಿಮ್ಮ ಮನಸ್ಸಿನ ಉತ್ತರ ಇಲ್ಲ ಎಂದಾದರೆ ಅದನ್ನು ಅಲ್ಲಿಯೇ ಬಿಟ್ಟು ಬಿಡಿ.

ಪ್ರಬುದ್ಧತೆಯ ಲಕ್ಷಣಗಳೇನು?

ಪ್ರಬುದ್ಧತೆ ಅಥವಾ ಮೆಚ್ಯುರಿಟಿ ಇರುವ ವ್ಯಕ್ತಿ ಎಲ್ಲರನ್ನೂ ಮೌನಗೊಳಿಸುವುದಿಲ್ಲ. ಯಾವುದಕ್ಕೆ ಪ್ರತಿಕ್ರಿಯಿಸಬೇಕು, ಯಾವುದನ್ನು ನಿರ್ಲಕ್ಷಿಸಬೇಕು ಎಂಬುದನ್ನು ನಿರ್ಧರಿಸುವ ಶಕ್ತಿ ಇದ್ದಾಗ ಮಾತ್ರ ನಿಜವಾದ ಪ್ರಬುದ್ಧತೆ ಕಾಣಿಸಿಕೊಳ್ಳುತ್ತದೆ. ಮೌನ ದೌರ್ಬಲ್ಯ ಅಲ್ಲ, ಕೆಲವೊಮ್ಮೆ ಮೌನ ಕೊಡುವ ಉತ್ತರ ಪದಗಳಿಂದಲೂ ಸಾಧ್ಯವಿಲ್ಲ.

ಜಗತ್ತಿನ ಪ್ರತಿಯೊಬ್ಬರ ದೃಷ್ಟಿಕೋನ ಬೇರೆ ಬೇರೆಯಾಗಿರುತ್ತದೆ. ನಾವು ಎಲ್ಲಿವರೆಗೆ ಇರುತ್ತೇವೆಯೋ ಅಲ್ಲಿಯವರೆಗೆ ಟೀಕೆ, ಮೂದಲಿಕೆಗಳು ಇದ್ದೇ ಇರುತ್ತದೆ. ಹಾಗಾಗಿ ಮಾನಸಿಕ ಸಮತೋಲನವು ನಿಮ್ಮ ಕೈಯಲ್ಲಿದೆ. ಯಾರೇ ನಮ್ಮನ್ನು ತೆರಳಿಸುವ ಪ್ರಯತ್ನ ಮಾಡಿದಾಗಲೂ ತಕ್ಷಣ ರಿಯಾಕ್ಟ್‌ ಆಗುವ ಬದಲು ಸುಮ್ಮನಿದ್ದು ಬಿಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+