ಕೆಲಸದಿಂದ ಒತ್ತಡ ಅನುಭವಿಸುತ್ತಿದ್ದೀರಾ? ಹಾಗಾದರೆ ಸ್ನೇಹಿತರನ್ನು ಮಾಡಿಕೊಳ್ಳಿ.....
ಕೆಲಸ... ಕೆಲಸ...... ಕೆಲಸ..... ಕೆಲವರಿಗೆ ಈ ಹೆಸರು ಕೇಳೋಕೆ ಬೇಜಾರು. ಯಾವಾಗಲೂ ಕೆಲಸ ಮಾಡಿ ಮಾಡಿ ಕೆಲವರ ಮನಸ್ಥಿತಿ ಸಹಜವಾಗಿ ಇರುವುದೇ ಇಲ್ಲ. ಯಾರೇ ಮಾತನಾಡಿಸಿದರೂ ಕೋಪಗೊಳ್ಳುವುದು. ಯಾರೊಂದಿಗೂ ಬೆರೆಯದೇ ಇರುವುದು. ಯಾರ ಜೊತೆ ಮಾತನಾಡದೇ ಇರುವುದು. ಎಲ್ಲಿಗೂ ಹೋಗದೇ ಇರುವುದು. ಹೀಗೆ ಹೇಳ್ತಾ ಹೋದರೆ ಒಂದಲ್ಲಾ ಎರಡಲ್ಲ ಕೆಲಸಕ್ಕೆ ಅಂಟಿಕೊಂಡವರ ಕಥೆ. ಇಂಥಹ ಸ್ವಭಾವ ಕೆಲಸಕ್ಕೆ ಅಂಟಿಕೊಂಡಿರುವುದನ್ನು ತೋರಿಸುತ್ತದೇ ಹೊರತು ಕೆಲಸವನ್ನು ಸುಗಮಗೊಳಿಸುವುದಲ್ಲ.
ಹೀಗೆ ಕೆಲಸಕ್ಕೆ ಅಡಿಟ್ ಆಗಿದ್ದರೆ ಅದು ಒತ್ತಡವನ್ನು ಹೆಚ್ಚಿಸುತ್ತದೇ ವಿನ: ಕೆಲಸವನ್ನು ಸರಳಗೊಳಿಸುವುದಿಲ್ಲ. ಬಹುತೇಕ ಉದ್ಯೋಗಿಗಳು ಕೆಲಸಕ್ಕೆ ಅಂಟಿಕೊಂಡಿರುತ್ತಾರೆ. ಬೆಳಿಗ್ಗೆಯಿಂದ ರಾತ್ರಿ ಮಲಗುವವರೆಗೆ ಕೆಲವರಿಗೆ ಕೆಲಸ ಬಿಟ್ಟು ಬೇರೇನು ಮಾಡುವುದಿಲ್ಲ. ಕೆಲಸವನ್ನು ಯಾರೊಂದಿಗೆ ಮಾತನಾಡದಂತೆ, ಯಾರೊಂದಿಗೂ ಬೆರೆಯದಂತೆ, ಎಲ್ಲಿಗೂ ಹೋಗದಂತೆ ಮಾಡಿದರೆ ಮಾತ್ರ ಪೂರ್ಣಗೊಳಿಸಲು ಸಾಧ್ಯ ಎನ್ನುವ ಮನಸ್ಥಿತಿಯಲ್ಲಿರುತ್ತಾರೆ. ಹೀಗಂದುಕೊಂಡಿದ್ದರೆ ತಿಮ್ಮ ತಿಳುವಳಿಕೆ ತಪ್ಪು. 'ಕೆಲಸ ಯಾವಾಗಲೂ ಬದುಕಲು ಆಗಿರಬೇಕೇ ಹೊರತು ಕೆಲಸವೇ ಬದುಕು ಆಗಿರಬಾರದು'.

ಕೆಲಸ ಮಾಡಿ. ಕೊಡುವ ಸಂಬಳಕ್ಕೆ ನ್ಯಾಯ ಒದಗಿಸಿ. ಆದರೆ ನಿಮ್ಮನ್ನು ನೀವು ಕೆಲಸಕ್ಕೆ ಮುಡಿಪಾಗಿಡುವುದೇ ಕೆಲಸವಲ್ಲ. ಹಾಗೊಂದುವೇಳೆ ನಿಮ್ಮನ್ನು ನೀವು ಕೆಲಸದಲ್ಲಿ ಮುಡಿಪಾಗಿಟ್ಟುಕೊಂಡು ಬಿಟ್ಟರೆ ಅದು ನಿಮ್ಮ ಆರೋಗ್ಯವನ್ನು, ನೆಮ್ಮದಿಯನ್ನು ಹಾಳು ಮಾಡುವುದು ಮಾತ್ರವಲ್ಲದೆ, ಬಂಧುಬಳಗದಿಂದ ನಿಮ್ಮನ್ನು ದೂರ ಮಾಡಿಬಿಡುತ್ತದೆ. ಹಾಗಾದರೆ ಕೆಲಸದ ಒತ್ತಡದಿಂದ ಪಾರಾಗಲು ಏನು ಮಾಡಬೇಕು...?
ಕೆಲಸದ ಒತ್ತಡದಿಂದ ಪಾರಾಗಲು ಏನು ಮಾಡಬೇಕು:-
*ಪ್ರತಿಯೊಂದು ಕಂಪನಿಗಳು ತಮ್ಮ ಉದ್ಯೋಗಿಗಳಿಗಾಗಿ ಇಂತಿಷ್ಟು ಕೆಲಸದ ಅವಧಿಯನ್ನು ನಿಗಧಿಪಡಿಸಿರುತ್ತವೆ. ಆ ಅವಧಿಯಲ್ಲಿ ನಿಮ್ಮ ಕೆಲಸವನ್ನು ಪೂರ್ಣಗೊಳಿಸಲು ಪ್ರಯತ್ನಿಸಿ.
*ಕೆಲಸದ ಸಂದರ್ಭದಲ್ಲಿ ನಿಮಗಾಗಿ ಕೆಲ ಬ್ರೇಕ್ ಅಥವಾ ವಿರಾಮಗಳಿರುತ್ತವೆ. ಅದನ್ನು ಬಳಸಿಕೊಳ್ಳಿ. ಈ ವೇಳೆ ನೀವು ನಿಮ್ಮ ಸಹೋದ್ಯೋಗಿಗಳೊಂದಿಗೆ ಸಮಯ ಕಳೆಯಿರಿ.
*ನಿಮಗೆ ಕೆಲಸದ ನಡುವೆ ಬಿಡುವು ಬೇಕೆನಿಸಿದಾಗಲೆಲ್ಲಾ ವಿರಾಮ ಪಡೆದು ಕೆಲಸ ಮುಂದುವರೆಸಿ.
* ಟೀ-ಕಾಫಿ ಸಮಯವನ್ನು ಸದುಪಯೋಗಪಡಿಸಿಕೊಳ್ಳಿ, ಇದರಿಂದ ನಿಮಗೆ ವಿರಾಮ ಸಿಕ್ಕಂತಾಗುತ್ತದೆ.
* ಕೆಲಸ ಮಾಡುವ ಸಂಪೂರ್ಣ ಮನಸ್ಸಿದ್ದರೆ ಮಾತ್ರ ಕೆಲಸ ಮಾಡಿ, ಹಾಗಂತ ನಿತ್ಯ ಕೆಲಸ ಮಾಡದೇ ಇರುವುದು ಕೂಡ ಒಳ್ಳೆ ಬೆಳವಣಿಗೆ ಅಲ್ಲ.

* ನಿಮಗಾಗಿರುವ ರಜೆಗಳು, ಹಬ್ಬ-ಹರಿದಿಗಳಲ್ಲಿ ಇರುವ ರಜೆಗಳನ್ನು ಸಂಪೂರ್ಣವಾಗಿ ಬಳಸಿಕೊಂಡು ನಿಮ್ಮವರೊಂದಿಗೆ ಕುಟುಂಬಸ್ಥರೊಂದಿಗೆ ಕಾಲ ಕಳೆಯಿರಿ. ಇದು ನಿಮ್ಮ ಮೈಂಡ್ ಫ್ರೀ ಮಾಡುತ್ತದೆ.
* ರಜೆಗಳಿದ್ದರೆ ಅದನ್ನು ತೆಗೆದುಕೊಂಡು ಪ್ರವಾಸಗಳನ್ನು ಕೈಗೊಳ್ಳಿ. ಇದರಿಂದ ನೀವು ನಿಮ್ಮ ಸ್ನೇಹಿತರಿಗೆ ಹಾಗೂ ಕುಟುಂಬಸ್ಥರಿಗೆ ಸಮಯ ನೀಡಿದಂತಾಗುತ್ತದೆ.
* ಸ್ನೇಹಿತರು ಅಥವಾ ಸಂಬಂಧಿಕರು ಯಾವುದಾದರೂ ಕಾರ್ಯಕ್ರಮಕ್ಕೆ ಆಹ್ವಾನಿಸಿದಾಗ ಹೋಗಲು ಮರೆಯದಿರಿ. ಸಾಧ್ಯವಾದಷ್ಟು ಇಂಥಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ.
* ಅಲ್ಲದೆ ನಿಮ್ಮ ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲೂ ನೀವು ಭಾಗವಹಿಸುವುದರಿಂದ ನಿಮ್ಮ ಸಹೋದ್ಯೋಗಿಗಳೊಂದಿಗಿನ ನಿಮ್ಮ ಸಂಬಂಧ ಗಟ್ಟಿಯಾಗಿರುತ್ತದೆ.












Click it and Unblock the Notifications