Kharbuja Milkshake Recipe: ಬೇಸಿಗೆಗೆ ಆರೋಗ್ಯಕರ, ರುಚಿಕರ ಕರಬೂಜ ಜ್ಯೂಸ್ ಮಾಡಿ ಕುಡಿಯಿರಿ
ಬೇಸಿಗೆ ಧಗೆ ಜನರನ್ನು ಕಾಡುತ್ತಿದೆ. ಈ ಸಮಯದಲ್ಲಿ ಹೆಚ್ಚು ನೀರು ಸೇವಿಸಬೇಕು. ಹಾಗೆಯೇ ದೇಹವನ್ನು ತಂಪಾಗಿಡುವ ಆರೋಗ್ಯಕರ ತಿಂಡಿ, ತಿನಿಸುಗಳನ್ನು ಹೆಚ್ಚಾಗಿ ಬಳಸಬೇಕು. ಈಗ ಕರಬೂಜ ಹಣ್ಣಿನ ಸೀಸನ್ ಕೂಡ ಆರಂಭವಾಗಿದ್ದು, ಇದು ಆರೋಗ್ಯಕರ ಹಣ್ಣಾಗಿದ್ದು, ಬೇಸಿಗೆಗೆ ಹೇಳಿ ಮಾಡಿಸಿದಂತಿದೆ.
ಕರಬೂಜ ಹಣ್ಣಿನ ಜ್ಯೂಸು, ಮಿಲ್ಕ್‌ಶೇಕ್ ಬೇಸಿಗೆಯಲ್ಲಿ ಹೆಚ್ಚು ಸೇಲ್ ಆಗುವ ಜ್ಯೂಸ್‌ಗಳಲ್ಲಿ ಒಂದು. ಇದು ರುಚಿಕರ ಮತ್ತು ಅತ್ಯುತ್ತಮ ಬೇಸಿಗೆ ಕೂಲರ್‌ಗಳಲ್ಲಿ ಒಂದಾಗಿದೆ. ರಕ್ತದೊತ್ತಡ ಮತ್ತು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದಕ್ಕೆ ಹಾಲು, ಸಕ್ಕರೆ, ಏಲಕ್ಕಿ ಸೇರಿಸಿದರೆ ತುಂಬಾ ರುಚಿಯಾದ ಮಿಲ್ಕ್ ಶೇಕ್ ರೆಡಿಯಾಗುತ್ತದೆ. ಹಾಗಾದರೆ ಈ ರೆಸಿಪಿ ಮಾಡುವುದು ಹೇಗೆ ಎಂಬುದನ್ನು ನೋಡೋಣ.

ಕರಬೂಜ ಹಣ್ಣಿನ ಮಿಲ್ಕ್‌ಶೇಕ್ ಮಾಡಲು ಬೇಕಾದ ಪದಾರ್ಥಗಳು
*1 ಮಧ್ಯಮ ಗಾತ್ರದ ಕರಬೂಜ ಹಣ್ಣು
* 1/4 ಕಪ್ ತಾಜಾ ತುರಿದ ತೆಂಗಿನಕಾಯಿ
* ಒಂದು ಕಪ್ ನೀರು
* ಒಂದು ಕಪ್ ಕುದಿಸಿದ ಹಾಲು
* ರುಚಿಗೆ ತಕ್ಕಷ್ಟು ಸಕ್ಕರೆ ಅಥವಾ ಬೆಲ್ಲ
ಕರಬೂಜ ಹಣ್ಣಿನ ಮಿಲ್ಕ್‌ಶೇಕ್ ಮಾಡುವ ವಿಧಾನ
ಮೊದಲು ಕರಬೂಜ ಹಣ್ಣನ್ನು ತೊಳೆದು ಕತ್ತರಿಸಿ ಮತ್ತು ಸಿಪ್ಪೆಯನ್ನು ಬೇರ್ಪಡಿಸಿದೆ. ಮಧ್ಯದಲ್ಲಿರುವ ಬೀಜದ ಭಾಗವನ್ನು ಸಹ ತೆಗೆದುಹಾಕಿ. ಇದನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿಕೊಂಡು ಮಿಕ್ಸಿ ಜಾರಿಗೆ ಹಾಕಿ. ಇದಕ್ಕೆ ಸಕ್ಕರೆ ಮತ್ತು ತೆಂಗಿನಕಾಯಿಯನ್ನು ಅಗತ್ಯವಿರುವ ನೀರನ್ನು ಬಳಸಿ ರುಬ್ಬಿಕೊಳ್ಳಿ. ಬಳಿಕ ಒಂದು ಪಾತ್ರೆಗೆ ಹಾಕಿಕೊಳ್ಳಿ. ಈ ಮಿಶ್ರಣಕ್ಕೆ ಹಾಲು ಮತ್ತು ಉಳಿದ ನೀರನ್ನು ಸೇರಿಸಿ. ಕೆಲವು ಐಸ್ ತುಂಡುಗಳ ಜೊತೆಗೆ ಇದನ್ನು ಸರ್ವ್ ಮಾಡಿ.












Click it and Unblock the Notifications