Hug Day 2023: ಅಪ್ಪುಗೆ ದಿನ ಯಾವಾಗ? ವಿಶೇಷತೆ, ಅಪ್ಪುಗೆಯಿಂದಾಗುವ ಆರೋಗ್ಯಕರ ಪ್ರಯೋಜನಗಳು
ಪ್ರೇಮಿಗಳ ವಾರ ಪ್ರೇಮಿಗಳಿಗೆ ತುಂಬಾ ವಿಶೇಷವಾಗಿದೆ. ವರ್ಷವಿಡೀ ಫೆಬ್ರವರಿಯ ಈ ವಿಶೇಷ ವಾರಕ್ಕಾಗಿ ಪ್ರೇಮಿಗಳು ಕಾತುರದಿಂದ ಕಾಯುತ್ತಾರೆ. ರೋಸ್ ಡೇ, ಚಾಕೊಲೇಟ್ ಡೇ, ಟೆಡ್ಡಿ ಡೇ ಮತ್ತು ಪ್ರಾಮಿಸ್ ಡೇ ನಂತರ ಹಗ್ ಡೇ ಆಚರಿಸಲಾಗುತ್ತದೆ. ಈ ಹಗ್ ಡೇ ಅನ್ನು ವಿಶ್ವದಾದ್ಯಂತ ಫೆಬ್ರವರಿ 12ರಂದು ಆಚರಿಸಲಾಗುತ್ತದೆ.
ಅಪ್ಪುಗೆಯ ದಿನದಂದು ಜನರು ತಮ್ಮ ಪ್ರೀತಿಪಾತ್ರರನ್ನು ಅಪ್ಪಿಕೊಳ್ಳುವ ಮೂಲಕ ವಿಶೇಷ ಭಾವನೆ ಮೂಡಿಸುತ್ತಾರೆ. ಮಾತ್ರವಲ್ಲದೆ ಈ ಆಲಿಂಗನ ಆರೋಗ್ಯಕ್ಕೆ ಉತ್ತಮವಾದ ಅನೇಕ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಹಾಗಾದರೆ ಪ್ರೇಮಿಗಳ ವಾರದ ಆರನೇ ದಿನದಂದು ಹಗ್ ಡೇ ಅನ್ನು ಏಕೆ ಆಚರಿಸಲಾಗುತ್ತದೆ? ಜೊತೆಗೆ ಹಗ್ ಡೇ ಇತಿಹಾಸವನ್ನು ತಿಳಿಯೋಣ..

ಹಗ್ ಡೇ ಅನ್ನು ಏಕೆ ಆಚರಿಸಲಾಗುತ್ತದೆ?
ಹಗ್ ಡೇ ಅನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ. ಆದರೆ ಇದನ್ನು ಫೆಬ್ರವರಿ 12 ರಂದು ಮಾತ್ರ ಏಕೆ ಆಚರಿಸಲಾಗುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಇಂದಿನ ದಿನಗಳಲ್ಲಿ ಯಾರನ್ನಾದರೂ ತಬ್ಬಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ ಫೆಬ್ರವರಿಯಲ್ಲಿ ಪ್ರೀತಿಯ ವಾರ ಅಂದರೆ ಹಗ್ ಡೇ ದಿನ ಪ್ರೇಮಿಯನ್ನು ಅಪ್ಪಿಕೊಳ್ಳುವುದು ತುಂಬಾ ವಿಶೇಷವಾಗಿದೆ. ನೀವು ಪ್ರೀತಿಸುತ್ತಿದ್ದರೆ ಈ ಸಂದರ್ಭದಲ್ಲಿ ನಿಮ್ಮ ಪ್ರೇಮಿಯನ್ನು ಸಹ ತಬ್ಬಿಕೊಳ್ಳಬಹುದು. ಇದೊಂದು ವಿಶೇಷ ಅನುಭವವನ್ನು ನೀಡುವುದು ಮಾತ್ರವಲ್ಲದೆ ಪರಸ್ಪರ ಪ್ರೀತಿಯನ್ನು ಹೆಚ್ಚಿಸುತ್ತದೆ.
ಅಪ್ಪಿಕೊಳ್ಳುವುದರಿಂದಾಗುವ ಅನೇಕ ಪ್ರಯೋಜನಗಳು:-
ಆಲಿಂಗನದಿಂದ ಅನೇಕ ಆರೋಗ್ಯಕರ ಪ್ರಯೋಜನಗಳು ಸಿಗುತ್ತವೆ ಎಂಬುದು ಎಲ್ಲರಿಗೂ ಗೊತ್ತು. ತಬ್ಬಿಕೊಂಡಾಗ ಪ್ರೀತಿಸುವವರ ಕಡೆಗೆ ಪ್ರೀತಿ ಮತ್ತು ವಿಶ್ವಾಸವು ಹೆಚ್ಚಾಗುತ್ತದೆ. ಅಪ್ಪುಗೆಯ ದಿನದಂದು ಪ್ರೇಮಿಯನ್ನು ತಬ್ಬಿಕೊಂಡಾಗ ಪ್ರೇಮಿಗಳು ಅಪಾರ ಪ್ರೀತಿಯನ್ನು ಅನುಭವಿಸುತ್ತಾರೆ.

1.ಕೇವಲ ಸ್ಪರ್ಶದ ಮೂಲಕ ಪ್ರೀತಿಸುವ ವ್ಯಕ್ತಿಗೆ ಬೆಂಬಲ ಸಿಗುತ್ತದೆ. ಅದು ಅವನ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಆಕ್ಸಿಟೋಸಿನ್ ಹಾರ್ಮೋನ್ ಮಟ್ಟವನ್ನು ಬಹುಪಟ್ಟು ಹೆಚ್ಚಿಸುತ್ತದೆ ಅಪ್ಪುಗೆ. ಈ ಹಾರ್ಮೋನ್ ನಮ್ಮ ಶಾಂತತೆ ಮತ್ತು ಸಂತೋಷದ ಭಾವನೆಗಳಿಗೆ ಕಾರಣವಾಗಿದೆ. ಆಕ್ಸಿಟೋಸಿನ್ ಹಾರ್ಮೋನ್ ಅನ್ನು ಸಂತೋಷದ ಹಾರ್ಮೋನ್ ಎಂದೂ ಕರೆಯುತ್ತಾರೆ. ಆಕ್ಸಿಟೋಸಿನ್ ಹಾರ್ಮೋನ್ ಒತ್ತಡ ಬಸ್ಟರ್ ಆಗಿ ಕಾರ್ಯನಿರ್ವಹಿಸುತ್ತದೆ.
2.ಜೊತೆಗೆ ಅಪ್ಪಿಕೊಳ್ಳುವುದು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ. ಬಹುಶಃ ನೀವು ಇದನ್ನು ಕೇಳಲು ಸ್ವಲ್ಪ ವಿಚಿತ್ರವೆನಿಸಬಹುದು. ಆದರೂ ಇದು ನಿಜ. ಅಪ್ಪುಗೆಯಿಂದ ಮಹಿಳೆಯರು ಹೆಚ್ಚು ಪ್ರಯೋಜನ ಪಡೆಯುತ್ತಾರೆ. ಅಪ್ಪುಗೆಯು ಅವರ ಮನಸ್ಸಿನಿಂದ ಭಯವನ್ನು ಹೋಗಲಾಡಿಸುತ್ತದೆ ಮತ್ತು ಶಾಂತಿಯನ್ನು ನೀಡುತ್ತದೆ. ಮುದ್ದಾಡಿದ ನಂತರ, ಇತರರೊಂದಿಗೆ ಮಾತನಾಡಲು ಹೊಸ ಉತ್ಸಾಹ ದೊರೆಯುತ್ತದೆ ಚಿಕ್ಕ ಅಪ್ಪುಗೆಯು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ.

3. ಅಪ್ಪಿಕೊಳ್ಳುವುದು ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡುತ್ತದೆ. ಹೆಲ್ತ್ಲೈನ್ ಪ್ರಕಾರ, ಪಬ್ಮೆಡ್ ಸೆಂಟ್ರಲ್ನ ಅಧ್ಯಯನದ ಪ್ರಕಾರ, ಒತ್ತಡಕ್ಕೆ ಸಂಬಂಧಿಸಿದ ಮೆದುಳಿನ ಭಾಗವು ಅಪ್ಪುಗೆಯ ನಂತರ ಹೈಪರ್ ಆ್ಯಕ್ಟಿವ್ ಆಗುತ್ತದೆ. ಇದು ಒತ್ತಡದ ಭಾವನೆಗಳನ್ನು ಸಂತೋಷದ ಭಾವನೆಗಳಾಗಿ ಪರಿವರ್ತಿಸುತ್ತದೆ.
4. ಸೈಕಲಾಜಿಕಲ್ ಸೈನ್ಸ್ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನವು 400ಕ್ಕೂ ಹೆಚ್ಚು ಜನರ ಮೇಲೆ ಅಪ್ಪುಗೆಯಿಂದ ಆಗುವ ಪ್ರಯೋಜನಗಳನ್ನು ಕಂಡು ಹಿಡಿದಿದೆ. ನಿಯಮಿತವಾಗಿ ತಬ್ಬಿಕೊಳ್ಳುವ ಜನರು ರೋಗಗಳಿಗೆ ಒಳಗಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ತಿಳಿಸಿವೆ.
5. ಅಪ್ಪುಗೆ ಹೃದಯದ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಆಗಿದೆ. ಪಬ್ಮೆಡ್ ಸೆಂಟ್ರಲ್ ಜರ್ನಲ್ ಪ್ರಕಾರ, ಒಂದು ಅಧ್ಯಯನವನ್ನು ದಂಪತಿಗಳ ಮೇಲೆ ನಡೆಸಲಾಯಿತು. ಈ ವೇಳೆ ಕೆಲವು ಜೋಡಿಗಳು 10 ನಿಮಿಷಗಳ ಕಾಲ ಪರಸ್ಪರರ ಕೈಗಳನ್ನು ಹಿಡಿದಿಟ್ಟುಕೊಳ್ಳುವಂತೆ ಹೇಳಲಾಯಿತು ಮತ್ತು ಕೆಲವು ಜೋಡಿಗಳನ್ನು 20 ಸೆಕೆಂಡುಗಳ ಕಾಲ ತಬ್ಬಿಕೊಳ್ಳುವಂತೆ ಸೂಚಿಸಲಾಯಿತು. ಕೇವಲ 20 ಸೆಕೆಂಡುಗಳ ಕಾಲ ಮುದ್ದಾಡಿದ ನಂತರ, ಗಂಡ ಮತ್ತು ಹೆಂಡತಿಯ ರಕ್ತದೊತ್ತಡದ ಮಟ್ಟವು ತಕ್ಷಣವೇ ಕಡಿಮೆಯಾಗುತ್ತದೆ ಎಂದು ಅಧ್ಯಯನಗಳು ತಿಳಿಸಿದೆ. ಇದು ಮಾನಸಿಕ ನೆಮ್ಮದಿಯನ್ನೂ ನೀಡುತ್ತದೆ.
6. ಮುದ್ದಾಡುವುದು ಆಕ್ಸಿಟೋಸಿನ್ ಎಂಬ ಹಾರ್ಮೋನ್ ಮಟ್ಟವನ್ನು ಹೆಚ್ಚಿಸುತ್ತದೆ. ಆಕ್ಸಿಟೋಸಿನ್ ಹಾರ್ಮೋನ್ ಅನ್ನು ಸಂತೋಷದ ಹಾರ್ಮೋನ್ ಎಂದೂ ಕರೆಯುತ್ತಾರೆ.
7. ಅಪ್ಪಿಕೊಳ್ಳುವುದು ಸಹ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ತಬ್ಬಿಕೊಂಡ ನಂತರ, ಮೆದುಳು ವೇಗವಾಗಿ ಕೆಲಸ ಮಾಡುತ್ತದೆ, ಇದು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ.












Click it and Unblock the Notifications