ಶುಗರ್ ಲೆವೆಲ್ ಹೆಚ್ಚಾಗದಂತೆ ಹಬ್ಬದೂಟ ಮಾಡೋದು ಹೇಗೆ?

ಭಕ್ತಿ, ಉಪವಾಸ ಹಾಗೂ ಸಿಹಿ ತಿಂಡಿಗಳನ್ನು ಮಾಡುವ ಮೂಲಕ ಭಾರತೀಯರು ಬರುವ ಸಾಲು ಸಾಲು ಹಬ್ಬಗಳನ್ನು ಸಂಭ್ರಮದಿಂದ ಆಚರಿಸುತ್ತಾರೆ. ಸಾಂಪ್ರದಾಯಿಕ ಸಿಹಿಗಳಾದ ಲಾಡು, ಪೇಡಾ, ಮೋದಕ, ಕೇಸರಿ ಬಾತ್, ಕಾಯಿ ಕಡುಬು ಮಾಡಿ ಸೇವಿಸುತ್ತಾರೆ. ಇವೆಲ್ಲವೂ ಹಬ್ಬದ ಅವಿಭಾಜ್ಯ ಅಂಗಗಳು. ಆದರೆ, ಶುಗರ್ ಇರುವವರಿಗೆ ಸ್ವಲ್ಪ ಆಪತ್ತಿನ ಕಾಲ. ಮಾಡಿದ ಸಿಹಿ ತಿಂಡಿಗಳನ್ನು ಮನಸೋ ಇಚ್ಛೆ ತಿಂದು, ಶುಗರ್ ಹೆಚ್ಚಾದರೆ ಅನುಭವಿಸುವುದು ಕಷ್ಟ.

ನಿಲ್ಲಿ. ತಲೆ ಕೆಡಿಸಿಕೊಳ್ಳಬೇಡಿ. ಮಧುಮೇಹವಿದೆ ಎಂದ ಮಾತ್ರಕ್ಕೆ ನೀವು ಹಬ್ಬದ ಸಂಭ್ರಮದಿಂದ ವಂಚಿತರಾಗುವುದು ಬೇಡ. ಜಾಗೃತ ಆಹಾರ ಸೇವನೆ ಹಾಗೂ ಸ್ವಲ್ಪ ಡಯಟ್ ಜೊತೆ ನಿಮ್ಮ ರಕ್ತದ ಸಕ್ಕರೆ ಮಟ್ಟದ ಮೇಲೆ ಹೆಚ್ಚಿನ ಪರಿಣಾಮ ಬೀರದಂತೆ ನಿಮ್ಮ ನೆಚ್ಚಿನ ಹಬ್ಬದೂಟವನ್ನು ನೆಮ್ಮದಿಯಾಗಿ ಸೇವಿಸಬಹುದು.

How to enjoy festive food without ignoring diabetic diet health concerns protein intake and reducing carbohydrates

'ಜ್ಞಾನ ಬೈ ಗಣೇಶ್ - ಮೇಕಿಂಗ್ ಇಂಡಿಯಾ ವಿನ್ ಓವರ್ ಡಯಾಬಿಟಿಸ್' ಎಂಬುದು ಸನ್ ಫಾರ್ಮಾ ಅಮೆರಿಕನ್ ಡಯಾಬಿಟಿಸ್ ಅಸೋಸಿಯೇಷನ್ ಸಹಯೋಗದೊಂದಿಗೆ ನಡೆಸುತ್ತಿರುವ ಜಾಗೃತಿ ಅಭಿಯಾನ. ತಜ್ಞರ ಸಲಹೆ ಮತ್ತು ಮಾಹಿತಿ ಮೂಲಕ ಭಾರತೀಯರು ಮಧುಮೇಹವನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು, ತಡೆಗಟ್ಟಲು ಮತ್ತು ನಿರ್ವಹಿಸಲು ಸಹಕರಿಸುವುದು ಇದರ ಉದ್ದೇಶ.


ಎಷ್ಟು ಸ್ವೀಟ್ಸ್ ತಿಂತಾ ಇದೀರೋ ಅನ್ನೋದ್ರ ಮೇಲಿರಲಿ ಧ್ಯಾನ

ಸಿಹಿ ತಿಂಡಿಗಳನ್ನು ಸಂಪೂರ್ಣವಾಗಿ ತ್ಯಜಿಸುವ ಬದಲು, ಸೇವಿಸೋ ಪ್ರಮಾಣವನ್ನು ನಿಯಂತ್ರಿಸಿದರೆ ಒಳ್ಳೇದು. ನಿಮ್ಮ ನೆಚ್ಚಿನ ಸಿಹಿತಿಂಡಿಯ ಒಂದೇ ಸಣ್ಣ ಚೂರು ನಿಮ್ಮ ಆಸೆಯನ್ನು ತಣಿಸಬಹುದು. ದೇಹಕ್ಕೆ ಹೆಚ್ಚಿನ ಪ್ರಮಾಣದ ಸಕ್ಕರೆ ಸೇರುವುದೂ ತಪ್ಪುತ್ತೆ.


ಖಾಲಿ ಹೊಟ್ಟೆಗೆ ಸಿಹಿ ಬೇಡ

ಹಬ್ಬದಲ್ಲಿ ವ್ರತ ಮಾಡೋ ಅನೇಕರು ಉಪವಾಸ ಮಾಡುತ್ತಾರೆ. ಅದು ಮುಗಿದಾಕ್ಷಣ ಸಿಹಿತಿಂಡಿಗಳನ್ನು ಸೇವಿಸುತ್ತಾರೆ. ಆದರೆ ಖಾಲಿ ಹೊಟ್ಟೆಯಲ್ಲಿ ಸಕ್ಕರೆ ಅಂಶ ಹೆಚ್ಚಿರುವ ಆಹಾರ ಸೇವಿಸುವುದರಿಂದ ರಕ್ತದ ಗ್ಲೂಕೋಸ್ ಮಟ್ಟ ತಕ್ಷಣವೇ ಹೆಚ್ಚಬಹುದು.
ಆದ್ದರಿಂದ, ಸ್ವೀಟ್ಸ್ ತಿನ್ನೋ ಮುನ್ನ ಮೊಸರು, ಹಾಲು, ಬಾದಾಮಿ ಮತ್ತು ಇತರ ಡ್ರೈ ಫ್ರೂಟ್ಸ್ ಅಥವಾ ಹುರಿದ ಮಖಾನಾ ಮುಂತಾದ ಪ್ರೋಟೀನ್‌ಯುಕ್ತ ಆಹಾರ ಸೇವಿಸಿ ಉಪವಾಸ ನಿಲ್ಲಿಸುವುದು ಆರೋಗ್ಯಕ್ಕೆ ಒಳ್ಳೇದು.


ಪ್ರೊಟೀನ್ ಮತ್ತು ಫೈಬರ್ ಇರಲಿ

- ಕಾರ್ಬೋಹೈಡ್ರೇಟ್‌ಗಳೊಂದಿಗೆ ಪ್ರೊಟೀನ್ ಮತ್ತು ಫೈಬರ್ ಅನ್ನು ಬ್ಯಾಲೆನ್ಸ್ ಮಾಡೋದ್ರಿಂದ ದೇಹವು ಸಕ್ಕರೆ ಅಂಶ ಹೀರೋ ವೇಗವನ್ನು ನಿಧಾನಗೊಳಿಸಬಹುದು.
- ತರಕಾರಿ, ಬೇಳೆಕಾಳು, ಪನೀರ್ ಅಥವಾ ಮೊಳಕೆ ಕಾಳುಗಳನ್ನೊಳಗೊಂಡ ಸಮತೋಲಿತ ಊಟದ ನಂತರ ಸ್ವಲ್ಪವೇ ಸಿಹಿತಿಂಡಿಯನ್ನು ತಿನ್ನಿ. ಪ್ರತ್ಯೇಕವಾಗಿ ತಿನ್ನುವುದು ಬೇಡ.


ಮನೆ ತಿಂಡಿಯಾದ್ರೆ ಒಳ್ಳೇದು:

ಹೊರಗಡೆ ಮಾಡಿದ ತಿಂಡಿ ತಿನಿಸು ತಿನ್ನುವ ಬದಲು ಮನೆಯಲ್ಲಿಯೇ ಮಾಡಿಕೊಳ್ಳಿ. ಆಗ ನಿಮ್ಮ ಆಹಾರ ಹೇಗಿರಬೇಕು ಅನ್ನೋದನ್ನು ನೀವೇ ನಿರ್ಧರಿಸಬಹುದು. ಸಕ್ಕರೆ ಪ್ರಮಾಣ ಕಡಿಮೆ ಇರಲಿ. ಮಿತ ಪ್ರಮಾಣದಲ್ಲಿ ಖರ್ಜೂರದಂತಹ ನೈಸರ್ಗಿಕ ಸಿಹಿಯನ್ನೇ ಬಳಸಿ. ಹೆಚ್ಚುವರಿ ಪೌಷ್ಟಿಕಾಂಶಕ್ಕಾಗಿ ಬಾದಾಮಿ, ಇತರೆ ಬೀಜ ಮತ್ತು ಕಾಳುಗಳನ್ನು ಹೆಚ್ಚು ಬಳಸಿ.
ಆದರೆ "ಆರೋಗ್ಯಕರ" ಎಂದು ಕರೆಯಲಾಗುವ ಸಿಹಿತಿಂಡಿಗಳಲ್ಲಿಯೂ ಕಾರ್ಬೋಹೈಡ್ರೇಟ್‌ಗಳಿರುತ್ತವೆ ಎಂಬುದನ್ನು ಮರೆಯಬೇಡಿ. ಮಿತಿವಾಗಿ ತಿನ್ನೋದು ಒಳ್ಳೇದು.

ಆ್ಯಕ್ಟಿವ್ ಆಗಿರಿ

ಹಬ್ಬದ ಊಟದ ನಂತರ 15-20 ನಿಮಿಷಗಳ ಕಾಲ ನಡೆದರೆ ಗ್ಲೂಕೋಸ್ ಅನ್ನು ಸ್ನಾಯುಗಳು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತದೆ. ಇದರಿಂದ ಊಟದ ನಂತರ ರಕ್ತದ ಸಕ್ಕರೆ ಮಟ್ಟವನ್ನು ಸುಧಾರಿಸಬಹುದು.
ಹಬ್ಬ ಹರಿದಿನಗಳಲ್ಲಿ ನಿಮ್ಮಿಷ್ಟದ ಆಹಾರ ಸೇವಿಸಿದರೂ ಅದನ್ನು ಸಮತೋಲನಗೊಳಿಸಲು ದೈಹಿಕವಾಗಿ ಸಕ್ರಿಯವಾಗಿದ್ದರೆ, ತಿಂದಿದ್ದು ಸುಲಭವಾಗಿ ಜೀರ್ಣವಾಗುತ್ತದೆ.

ಸಾಕಷ್ಟು ನೀರು ಕುಡಿಯಿರಿ

ಸಾಕಷ್ಟು ನೀರು ಕುಡಿಯುವುದರಿಂದ ದೇಹದ ಒಟ್ಟಾರೆ ಚಯಾಪಚಯ ಕ್ರಿಯೆಗೆ ಸಹಾಯವಾಗುತ್ತದೆ. ದೇಹದಲ್ಲಿ ನೀರು ಕಮ್ಮಿಯಾಗದಂತೆ ನೋಡಿಕೊಳ್ಳಲೇ ಬೇಕು. ಅದರ ಲ್ಲಿಯೂ ಉಪವಾಸ ಮಾಡುತ್ತಿದ್ದರೆ, ಈ ಕಡೆ ಹೆಚ್ಚಿನ ಗಮನ ಹರಿಸಬೇಕು.

ರಕ್ತದ ಸಕ್ಕರೆ ಮಟ್ಟ ಪರಿಶೀಲಿಸಿ

ಹಬ್ಬದಲ್ಲಿ ಹೆಚ್ಚಿಗೆ ಸ್ವೀಟ್ಸ್ ತಿನ್ನುತ್ತಿದ್ದರೆ ಅಥವಾ ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೇಟ್ಸ್ ಸೇವಿಸಿದ್ದರೆ, ನಿಮ್ಮ ಆರೋಗ್ಯ ತಜ್ಞರು ಸೂಚಿಸಿದಂತೆ ರಕ್ತದ ಸಕ್ಕರೆ ಮಟ್ಟವನ್ನು ಪರಿಶೀಲಿಸಿ. ಇದರಿಂದ ನಿಮ್ಮ ದೇಹವು ನಿರ್ದಿಷ್ಟ ಆಹಾರಕ್ಕೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಅರ್ಥಮಾಡಿಕೊಂಡು, ಮುಂದಿನ ದಿನಗಳಲ್ಲಿ ಆಹಾರ ಆಯ್ಕೆ ಹೇಗಿರಬೇಕೆಂಬುದನ್ನು ನಿರ್ಧರಿಸಲು ಹೆಲ್ಪ್ ಮಾಡುತ್ತದೆ.
"ಮಧುಮೇಹ ಇರೋರು ಹಬ್ಬದ ಸಿಹಿತಿಂಡಿಗಳನ್ನು ಪೂರ್ತಿ ಬಿಡುವುದೇನೂ ಬೇಡ. ಮಿತವಾಗಿ, ಸೂಕ್ತ ಆಹಾರ ಸೇವನೆ ಮುಖ್ಯ. ಸರಿಯಾದ ಟೈಮಲ್ಲಿ ತಿಂದರೆ ಬಹಳ ಒಳ್ಳೇದು. ಖಾಲಿ ಹೊಟ್ಟೆಯಲ್ಲಿ ಸಿಹಿತಿಂಡಿ ತಿನ್ನೋ ಬದಲು, ಸಮತೋಲಿತ ಊಟದ ನಂತರ ಸ್ವಲ್ಪ ಪ್ರಮಾಣದಲ್ಲಿ ಸೇವಿಸುವುದರಿಂದ ಊಟದ ನಂತರ ರಕ್ತದ ಸಕ್ಕರೆ ಮಟ್ಟ ತ್ವರಿತವಾಗಿ ಏರುವುದನ್ನು ಕಡಿಮೆ ಮಾಡಬಲ್ಲದು. ಹಬ್ಬವೆಂದರೆ ಸಂಭ್ರಮಿಸಬೇಕು. ಹುಷಾರಾಗಿ ಆಹಾರ ಆಯ್ಕೆಗಳೊಂದಿಗೆ, ಮಧುಮೇಹ ಇರುವವರು ತಮ್ಮ ಗ್ಲೂಕೋಸ್ ಮಟ್ಟವನ್ನು ಉತ್ತಮವಾಗಿ ನಿಯಂತ್ರಿಸಿಕೊಂಡೇ ಸಾಂಪ್ರದಾಯಿಕ ಆಹಾರಗಳನ್ನು ಸುರಕ್ಷಿತವಾಗಿ ಸವಿಯಬಹುದು."
Dr. Anoosha Bhandarkar, Consultant Diabetologist & Foot Care Specialist, Dharwad, Karnataka

How to enjoy festive food without ignoring diabetic diet health concerns protein intake and reducing carbohydrates

ಹಬ್ಬವೆಂದರೆ ಭಕ್ತಿ, ಕುಟುಂಬ ಮತ್ತು ಸಂಭ್ರಮದ ಸಮಯ - ಆಹಾರದ ಬಗ್ಗೆ ಅಪರಾಧಿ ಭಾವನೆ ಹೊಂದುವ ಸಮಯವಲ್ಲ. ಸೇವಿಸುವ ಪ್ರಮಾಣವನ್ನು ನಿಯಂತ್ರಿಸುವುದು, ಸಮತೋಲಿತ ಆಹಾರದ ಆಯ್ಕೆ, ದೈಹಿಕವಾಗಿ ಸಕ್ರಿಯವಾಗಿರುವುದು ಮತ್ತು ರಕ್ತದ ಸಕ್ಕರೆ ಮಟ್ಟ ಪರಿಶೀಲಿಸುವ ಮೂಲಕ ನೀವು ಹಬ್ಬದ ಸಿಹಿತಿಂಡಿಗಳನ್ನು ಜವಾಬ್ದಾರಿಯುತವಾಗಿ ಸವಿಯಬಹುದು.

ನೆನಪಿಡಿ, ಮಧುಮೇಹ ನಿರ್ವಹಣೆ ಎಂದರೆ ನೀವು ಇಷ್ಟಪಡುವ ಆಹಾರಗಳನ್ನು ಸಂಪೂರ್ಣವಾಗಿ ತ್ಯಜಿಸುವುದಲ್ಲ; ಬದಲಾಗಿ, ತಿನ್ನೋ ಆಹಾರದ ಬಗ್ಗೆ ಅರಿವು ಮೂಡಿಸಿಕೊಂಡು ನಂತರ ಸೂಕ್ತ ಆಹಾರ ಆಯ್ಕೆ ಮಾಡಿಕೊಳ್ಳಿ.

SPI-IN-CVD-ZT---08-20260331

Disclaimer: ಈ ಮಾಹಿತಿ ಕೇವಲ ರೋಗಿಗಳ ಶಿಕ್ಷಣ/ಜಾಗೃತಿ ಉದ್ದೇಶಕ್ಕಾಗಿ ಮಾತ್ರ. ಇದು ವೈದ್ಯರ ಅಥವಾ ವೈದ್ಯಕೀಯ ವೃತ್ತಿಪರರ ಸಲಹೆಗೆ ಪರ್ಯಾಯವಲ್ಲ. ಸನ್ ಫಾರ್ಮಾಸಿಟಿಕಲ್ಸ್ ಲ್ಯಾಬೊರೇಟರೀಸ್ ಲಿಮಿಟೆಡ್ (SPLL) ನಿಖರ ಮತ್ತು ಸಮಯೋಚಿತ ಮಾಹಿತಿ ಒದಗಿಸಲು ಎಲ್ಲ ಪ್ರಯತ್ನಗಳನ್ನೂ ಮಾಡುತ್ತದೆ. ಆದರೆ ಈ ವಿಷಯದಲ್ಲಿ ಯಾವುದೇ ಗ್ಯಾರಂಟಿ ನೀಡುವುದಿಲ್ಲ. ನೀವು ನಿಮ್ಮ ವೈದ್ಯರು ಅಥವಾ ಆರೋಗ್ಯ ವೃತ್ತಿಪರರನ್ನು ಸಂಪರ್ಕಿಸಿ, ಅವರ ಸಲಹೆಯನ್ನು ಮಾತ್ರ ನಂಬಬೇಕು. ಸನ್ ಫಾರ್ಮಾಸಿಟಿಕಲ್ಸ್ ಲ್ಯಾಬೊರೇಟರೀಸ್ ಲಿಮಿಟೆಡ್ (SPLL) ಪೂರ್ವ ಅನುಮತಿಯಿಲ್ಲದೆ ಇದರ ಯಾವುದೇ ಭಾಗವನ್ನು ಯಾಂತ್ರಿಕವಾಗಿ ಅಥವಾ ಎಲೆಕ್ಟ್ರಾನಿಕ್ ಆಗಿ ಪುನರುತ್ಪಾದಿಸಲು, ರವಾನಿಸಲು ಅಥವಾ ಸಂಗ್ರಹಿಸಲು ಅವಕಾಶ ಇರುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+