Happy Promise Day 2024: ಪ್ರಾಮಿಸ್ ಡೇ ದಿನಾಂಕ, ಮಹತ್ವ, ಪ್ರೀತಿಪಾತ್ರರಿಗೆ ಶುಭಾಶಯಗಳು ಇಲ್ಲಿದೆ
ವ್ಯಾಲೆಂಟೈನ್ಸ್ ವಾರದ ಐದನೇ ದಿನ ಪ್ರಾಮಿಸ್ ಡೇ ಆಚರಿಸಲಾಗುತ್ತದೆ. ರೋಸ್ ಡೇ, ಪ್ರಪೋಸ್ ಡೇ, ಚಾಕಲೇಟ್ ಡೇ ಮತ್ತು ಟೆಡ್ಡಿ ಡೇ ಬಳಿಕ ಪ್ರಾಮಿಸ್ ಡೇ ಬರುತ್ತದೆ. ಫೆಬ್ರವರಿ 11ರಂದು ಪ್ರತಿವರ್ಷ ವ್ಯಾಲೆಂಟೈನ್ಸ್ ವೀಕ್‌ನ ಪ್ರಾಮಿಸ್ ಡೇ ಎಂದು ಆಚರಿಸಲಾಗುತ್ತದೆ.
ಪ್ರಾಮಿಸ್ ಡೇ... ಹೆಸರೇಳೇ ಹೇಳುವಂತೆ ಇದು ಭರವಸೆ ನೀಡುವ ದಿನವಾಗಿದೆ. ಪ್ರೀತಿಯ ಬಂಧದಲ್ಲಿ ಬೆಸೆದುಕೊಂಡಿರುವ ಪ್ರೇಮಿಗಳಿಗೆ ಪರಸ್ಪರ ವಾಗ್ದಾನಗಳನ್ನು ನೀಡಲು ಇರುವ ಅವಕಾಶವಿದು. ಪ್ರೀತಿಯ ದೋಣಿಯಲ್ಲಿ ಪಯಣ ಮುಂದುವರಿಸಿರುವ ಜೋಡಿಗಳು, ಭವಿಷ್ಯದ ದಿನಗಳನ್ನು ಜೊತೆಯಾಗಿಯೇ ಕಳೆಯುವ ಭರವಸೆಯೊಂದಿಗೆ ಹೆಜ್ಜೆ ಇಡುವ ಬದ್ಧತೆ ದಾಖಲಿಸಿಕೊಳ್ಳುವ ಕ್ಷಣ.

ಸುಖ ದುಃಖ, ನೋವು ನಲಿವು ಹೀಗೆ ಯಾವುದೇ ಸಂದರ್ಭ, ಯಾವುದೇ ಸನ್ನಿವೇಶದಲ್ಲಿ ಜೊತೆಜೊತೆಯಾಗಿ ಹೆಜ್ಜೆ ಇಡುವುದೇ ಪ್ರೀತಿಯ ದೊಡ್ಡ ಶಕ್ತಿ. ಸಂಬಂಧಗಳು ಗಟ್ಟಿಯಾಗುವುದು, ಬಾಂಧವ್ಯದ ಸವಿಯ ನಿಜದರ್ಶನವಾಗುವುದು ಇಂತಹ ಸಂದರ್ಭದಲ್ಲಿಯೇ. ಹೀಗಾಗಿ ಪರಸ್ಪರ ವಾಗ್ದಾನ ನೀಡುವುದು ಅತೀ ಮುಖ್ಯ. ಹೀಗೆ ನೀಡಿದ ವಾಗ್ದಾನವನ್ನು ಉಳಿಸಿಕೊಳ್ಳುವುದು ಅದಕ್ಕಂತಲೂ ಬಲು ಮುಖ್ಯ. ಪ್ರೀತಿಯ ಭರವಸೆ ಸಂಬಂಧಗಳನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ, ಸವಿಯಾಗಿಸುತ್ತದೆ. ಇದೇ ಕಾರಣಕ್ಕೆ ಪ್ರಾಮಿಸ್ ಡೇಗೆ ಹೆಚ್ಚು ಮಹತ್ವವಿದೆ. ಇಂತಹ ಮಹತ್ವದ ದಿನಕ್ಕಾಗಿಯೇ ಕೆಲವೊಂದು ಸಂದೇಶಗಳು ಇಲ್ಲಿವೆ.
ಯಾವುದೇ ಸಂಬಂಧದಲ್ಲಿ ನಂಬಿಕೆ ಬಹಳ ಮುಖ್ಯ. ಇದು ದಂಪತಿ ಹಾಗೂ ಪ್ರೇಮಿಗಳಿಗೂ ಅನ್ವಯಿಸುತ್ತದೆ. ಪ್ರೀತಿಯಲ್ಲಿ ಇರಬೇಕಾದ ಪ್ರಮುಖ ವಿಷಯವೆಂದರೆ ಅದು ಪರಸ್ಪರ ನಂಬಿಕೆ. ಈ ನಂಬಿಕೆ ಉಳಿಸಿಕೊಳ್ಳುವ ಭರವಸೆ ನೀಡಲು ಪ್ರಾಮಿಸ್ ಡೇ ಅನ್ನು ಆಚರಿಸಲಾಗುತ್ತದೆ. ಈ ದಿನ ನೀವು ನಿಮ್ಮ ಸಂಗಾತಿಗೆ ಭರವಸೆ ನೀಡಬಹುದು. ಅದು ನಿಮ್ಮ ಸಂಬಂಧವನ್ನು ಬಲಪಡಿಸುತ್ತದೆ. ನಿಮ್ಮ ಸಂಗಾತಿಗೆ ವಿಶೇಷ ಭರವಸೆಯನ್ನು ನೀಡಲು ನೀವು ಬಯಸಿದರೆ ಸಂದೇಶಗಳು ಇಲ್ಲಿದೆ.

1. ನಾನು ನಿನ್ನ ನೆರಳಾಗುವ ಮೂಲಕ ನಿನ್ನ ಜೊತೆಯಲ್ಲಿ ನಡೆಯುತ್ತೇನೆ, ನೀನು ಎಲ್ಲಿಗೆ ಹೋದರೂ ನಾನು ಅಲ್ಲಿಗೆ ಬರುತ್ತೇನೆ, ನೆರಳು ಯಾವಾಗಲು ಕತ್ತಲೆ ಆದರೆ ನಾನು ಕತ್ತಲೆಯಲ್ಲಿ ನಿನಿಗೆ ಬೆಳಕಾಗುತ್ತೇನೆ. ಪ್ರಾಮಿಸ್ ಡೇ ಶುಭಾಶಯಗಳು...
2. ನಾವು ಪ್ರತಿ ಕ್ಷಣವೂ ನಿನ್ನನ್ನು ಪ್ರೀತಿಸುವ ಉದ್ದೇಶವನ್ನು ಹೊಂದಿದ್ದೇವೆ, ಕೊನೆಯವರೆಗೂ ನಾನು ನಿನ್ನೊಂದಿಗೆ ಇರಲು ಬಯಸುತ್ತೇನೆ ಇದು ನಾನು ನಿನಗೆ ನೀಡು ಭರವಸೆ. ಭರವಸೆಯ ದಿನದ ಶುಭಾಶಯಗಳು...
3. ನನ್ನ ಕಣ್ಣು ತೆರೆದಾಗ ನೀನು ನನ್ನ ಮುಂದಿರಬೇಕು, ನನ್ನ ಕಣ್ಣು ಮುಚ್ಚಿದಾಗ ನೀನು ನನ್ನ ಪ್ರೀತಿಯ ಕನಸಾಗಬೇಕು, ನಾನು ಆ ಒಂದು ಕ್ಷಣದಲ್ಲೇ ಬದುಕುತ್ತೇನೆ, ನನ್ನ ಪ್ರತಿ ಉಸಿರು ನಿನ್ನದೇ ಆಗಿರುತ್ತದೆ ಎಂದು ನಾನು ನಿನಗೆ ಭರವಸೆ ನೀಡುತ್ತೇನೆ. ಪ್ರಾಮಿಸ್ ಡೇ ಶುಭಾಶಯಗಳು...
4. ಇದು ನನ್ನ ವಾಗ್ದಾನ, ನಾನು ನಿನ್ನ ಸೇವಕ, ನಿನ್ನ ರಕ್ಷಕ, ನಿನ್ನ ಬದುಕಿನ ಬಂಡಿ. ನಿನ್ನನ್ನು ಸದಾ ನನ್ನ ಹೆಗಲ ಮೇಲೆ ಹೊತ್ತು ನೋಡಿಕೊಳ್ಳುವೆ. ಪ್ರಾಮಿಸ್ ಡೇ ಶುಭಾಶಯಗಳು.
5. ನನ್ನ ಬದುಕನ್ನು ನಿನಗೆ ಕೊಡುವೆ, ಜೀವನದ ಎಲ್ಲಾ ಸುಖಗಳನ್ನು ನಿನಗೆ ಕೊಡುವೆ, ನೀನು ನನ್ನೊಂದಿಗೆ ಇರುತ್ತೇನೆ ಎಂದು ಭರವಸೆ ನೀಡಿದರೆ, ನನ್ನ ಜೀವ ಸದಾ ನಿನಗಾಗಿಯೇ ಮುಡಿಪಾಗಿಡುವೆ. ಪ್ರಾಮಿಸ್ ಡೇ ಶುಭಾಶಯಗಳು.
6. ನಿನ್ನ ನಗು ನನ್ನ ಸಂತೋಷ, ನಿನ್ನ ಆಸೆ ನನ್ನ ಬಲ, ನಿನ್ನ ಪ್ರಮಾಣ ನನ್ನ ಉಸಿರು. ಇದನ್ನು ಎಂದಿಗೂ ನಾನು ಕಳೆದುಕೊಳ್ಳಲಾರೆ. ನನ್ನೊಂದಿಗೆ ನೀ ಸದಾ ಇರ. ಜೀವನದಲ್ಲಿ ಬೇರೆ ಯಾವ ಆಸೆಯೇ ಇಲ್ಲ.
7. ಒಟ್ಟಿಗೆ ವಾಸಿಸು, ಅದನ್ನು ಉಳಿಸಿಕೊಳ್ಳಲು ಭರವಸೆ ನೀಡಿ ... ಭರವಸೆಯ ದಿನದ ಶುಭಾಶಯಗಳು
8. ನಾನು ನಿನ್ನ ಪ್ರೀತಿಯನ್ನು ಉಳಿಸಿಕೊಳ್ಳುತ್ತೇನೆ ಎಂದು ಭರವಸೆ ನೀಡುತ್ತೇನೆ. ಹೃದಯದಿಂದ ಕರೆ ನೀಡಿ ಆ ಸ್ಥಳದಲ್ಲಿ ನಾನಿರುವ, ಮನದಿಂದ ಮಾತಾಡುವ ಆ ಮಾತಲ್ಲಿ ನಾನು ಇರುವೆ. ಭರವಸೆಯ ದಿನದ ಶುಭಾಶಯಗಳು












Click it and Unblock the Notifications